• Sun. May 5th, 2024

ಕೋಲಾರ I ಕುರುಗಲ್ ಸರ್ಕಾರಿ ಶಾಲೆಗೆ ಬಣ್ಣ ಬಳಿಸಿದ ಹಳೇ ವಿದ್ಯಾರ್ಥಿ ಚೌಡೇಗೌಡ

PLACE YOUR AD HERE AT LOWEST PRICE

ಕೋಲಾರ ತಾಲೂಕಿನ ವೇಮಗಲ್ ಪಟ್ಟಣದ ಕುರುಗಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಇದೀಗ ಹೊಸ ಕಳೆ ಬರುತ್ತಿದೆ.‌ ಸುಮಾರು ವರ್ಷದ ಹಳೆಯ ಶಾಲೆಯ ಕಟ್ಟಡಕ್ಕೆ ಸುಣ್ಣ ಬಣ್ಣ ಇರಲಿಲ್ಲ. ಗಬ್ಬೆದ್ದು ಹೋಗಿದ್ದ ಶಾಲೆಗೆ ಇದೀಗ ಹಳೆಯ ವಿದ್ಯಾರ್ಥಿ ಕೆ.ಎಂ ಚೌಡೇಗೌಡ ರವರ ಮುಂದಾಳತ್ವದ ಶ್ರಮದ ಫಲದಿಂದ ಹೊಸ ಕಳೆ ಬರುತ್ತಿದೆ.

ಸರ್ಕಾರಿ ಶಾಲೆಯ ಹಳೆ ವಿದ್ಯಾರ್ಥಿ ಕೆ.ಎಂ ಚೌಡೇಗೌಡ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಪಣ ತೊಟ್ಟು ಸ್ವಂತ ಹಣ ಖರ್ಚು ಮಾಡಿ ಶಾಲೆಯನ್ನು ಆಕರ್ಷಣಿಯವಾಗಿಸಿದ್ದಾರೆ.

ತಾಲೂಕಿನ ವೇಮಗಲ್ ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಬರುವ ಕುರುಗಲ್ ಶಾಲೆಯಲ್ಲಿ ಬಹಳಷ್ಟು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿ ಇಂದು ಅವರದ್ದೇ ಆದ ಉನ್ನತ ಮಟ್ಟದಲ್ಲಿದ್ದುಕೊಂಡು ನಾವು ಶಾಲೆಗೆ ಏನಾದರೂ ಸಹಾಯ ಮಾಡಬೇಕು ಎಂದು ಮೊಟ್ಟ ಮೊದಲಿಗೆ ಮುಂದೆ ಬಂದಿರುವುದು ಹಳೆಯ ವಿದ್ಯಾರ್ಥಿ ಕೆ.ಎಂ ಚೌಡೇಗೌಡ ರವರು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ‌

ಇತ್ತಿಚೆಗೆ ಶಾಲೆಯ ಮುಂಭಾಗದ ಗೋಡೆಯ ಮೇಲೆ ಪ್ರಭಾವತಿ ಕೆ.ಎಂ ಚೌಡೇಗೌಡ ರವರ ಸಹಕಾರದಲ್ಲಿ ರೈಲು ಮತ್ತು ಸರ್ಕಾರಿ ಬಸ್ ವಿನ್ಯಾಸದ ವರ್ಣನೆಗೆ‌ ಕುರುಗಲ್ ಶಾಲೆ ಅಭಿವೃದ್ಧಿ ಆಗುತ್ತಿದೆ ಎಂದು ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದರು.

ಜನವಸತಿ ಪ್ರದೇಶದ ಮಕ್ಕಳಿಗೆ ನೈಜ ಕಲಿಕೆಗೆ ಒತ್ತು ಕೊಡುವ ಉದ್ದೇಶದಿಂದ ಉತ್ತಮ ಗುಣಮಟ್ಟದ ಬಣ್ಣವನ್ನು ಬಳಕೆ ಮಾಡಿ, ಶಾಲಾ ಕೊಠಡಿಯ ಪ್ರತಿಯೊಂದು ಗೋಡೆಯ ಮೇಲೆ ಒಂದೊಂದು ವಿಷಯದ ಕಲಿಕಾ ಬರವಣಿಗೆ ಮತ್ತು ಚಿತ್ರಗಳನ್ನು ಮೂಡಿಸಲು ಮುಂದಾಗಿದ್ದು ಇದಕ್ಕೆ ಇನ್ನೂ ಅನೇಕ ಹಳೆ ವಿದ್ಯಾರ್ಥಿಗಳು ಸಾಥ್ ನೀಡಲಿದ್ದಾರೆ.

ಸುದ್ದಿ ಓದಿ ಹಂಚಿ

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!