ಸಾಹಸಸಿಂಹ ವಿಷ್ಣುವರ್ಧನ್‌ರವರ ಮೈಸೂರಿನ ಸ್ಮಾರಕದ ಪುಣ್ಯಭೂಮಿಗೆ ಮಣ್ಣು ಅರ್ಪಿಸಲು ಕೋಲಾರದಿಂದ ಅಭಿಮಾನಿಗಳ ದಂಡು ತೆರಳಿದ್ದು, ದಕ್ಷಿಣ ಕಾಶಿ ಅಂತರಗ0ಗೆಯ ಜಲ, ಪವಿತ್ರ ಮಣ್ಣನ್ನು ಅರ್ಪಿಸಿ ಅಭಿಷೇಕ ಮಾಡಿ ಸಂಭ್ರಮಿಸಿದರು.
ಕೋಲಾರದ ವಿಷ್ಣುಸೇನಾ ಸಮಿತಿಯ ಅಭಿಮಾನಗಳಾದ ನಾವು ಮೈಸೂರಿನ ಹಾಲಾಳು ಗ್ರಾಮದ ಉದ್ಬೂರು ಗೇಟ್ ಬಳಿ ನಿರ್ಮಿಸಿರುವ ಸ್ಮಾರಕದಲ್ಲಿ ಆಪ್ತರಕ್ಷಕ ಚಲನಚಿತ್ರ ಪಾತ್ರದ ಮಾದರಿಯಲ್ಲಿ ಕೆತ್ತಲಾದ ೭ ಅಡಿ ಎತ್ತರದ ಪ್ರತಿಮೆ ಅನಾವರಣದ ಹಿನ್ನೆಲೆಯಲ್ಲಿ ಭೇಟಿ ನೀಡಿ ಪೂಜೆ ಸಲ್ಲಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಅಭಿಮಾನಿ ಮದನ್ ಮಾತನಾಡಿ, ವಿಷ್ಣುವರ್ಧನ್ ಅವರು, ಸಿಂಹಾದ್ರಿಯ ಸಿಂಹ ಚಿತ್ರದಲ್ಲಿ ಕಲ್ಲಾದರೆ ನಾನು ಬೇಲೂರಿನ ಗುಡಿಯಲ್ಲಿ ಇರುವೆ, ಮಣ್ಣಾದರೆ ನಾನು ಕೋಲಾರದ ಮಣ್ಣಲ್ಲಿ ಬೇರೆ ಮರವಾದರೂ ನಾನು ಚಾಮುಂಡಿಗೆ ನೆರಳಾಗಿರುವೆ ಎಂದು ಹೇಳಿರುವ ಹಾಡಿನಂತೆ ಇಂದು ಕೋಲಾರದ ಜಲ,ಮಣ್ಣು ಅರ್ಪಿಸಿದ್ದೇವೆ ಎಂದರು.
ಕನ್ನಡ ನಾಡು,ನುಡಿಗೆ ವಿಷ್ಣುವರ್ಧನ್ ಸಲ್ಲಿಸಿರುವ ಸೇವೆ ಸ್ಮರಣೀಯವಾಗಿದೆ, ಅವರ ಪುತ್ಥಳಿ ಅನಾವರಣ ವಿಳಂಬವಾದರೂ ರಾಜ್ಯದ ಬಸವರಾಜಬೊಮ್ಮಾಯಿಸರ್ಕಾರ ಅನಾವರಣ ಮಾಡುವ ಮೂಲಕ ಅಭಿಮಾನಿಗಳ ಬಹುದಿನಗಳ ಆಸೆ ಪೂರೈಸಿದೆ ಎಂದು ತಿಳಿಸಿ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದರು.
ನಗರಸಭೆ ಮಾಜಿ ಉಪಾಧ್ಯಕ್ಷ ಪ್ರವೀಣ್ ಗೌಡ, ಕೋಲಾರದ ವಿಷ್ಣುಸೇನಾ ಸಮಿತಿ ಜಿಲ್ಲಾಧ್ಯಕ್ಷ ಮದನ್ ಕುಮಾರ್, ಮಂಜು, ಮೂರ್ತಿ, ಮಂಜುನಾಥ್, ಜೀವಿ ಆನಂದ್, ಚಂದ್ರು, ನಾಗೇಶ್, ಸೋಮಶೇಖರ್, ನಂದೀಶ್, ಮನೋಜ್ , ಕೃಷ್ಣ, ಮಂಡ್ಯ ಗಿರೀಶ್, ಸಮಿತಿಯ ಅಭಿಮಾನಿಗಳು ಪ್ರತಿಮೆಗೆ ಪೂಜೆ ಸಲ್ಲಿಸಿ ಸಂಭ್ರಮಿಸಿದರು.