• Fri. Mar 1st, 2024

PLACE YOUR AD HERE AT LOWEST PRICE

ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ *ಪ್ರಜಾ ದ್ವನಿ ಯಾತ್ರೆಯಲ್ಲಿ ಭಾಗವಹಿಸಲು ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ. ಶಿವಕುಮಾರ್ ದಿನಾಂಕ: 03-02-2023  ರಂದು ಕೆ.ಜಿ.ಎಫ್‌ಗೆ ಆಗಮಿಸಲಿದ್ದಾರೆ.

ಇದರ ಪ್ರಯುಕ್ತ ಇಂದು ಶಾಸಕಿ ಡಾ ರೂಪಕಲಾ ಎಂ ಶಶಿಧರ್ ಕೆಜಿಎಫ್ ನಗರದ ಶಾಸಕರ ಕಛೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಿದರು.

ಸಭೆಯಲ್ಲಿ ಮುಖಂಡರು ಮಾತನಾಡಿ ಶಾಸಕರು ತಮ್ಮ ಅಧಿಕಾರಾವಧಿಯಲ್ಲಿ ಸಾಕಷ್ಟು ಅಭಿವೃಧ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ.

ನಾವೆಲ್ಲರೂ ಸೇರಿ ಮುಂದಿನ ದಿನಗಳಲ್ಲಿ ಶಾಸಕರ ಕೈ ಇನ್ನಷ್ಟು ಬಲಪಡಿಸಬೇಕು. ಈ ನಿಟ್ಟಿನಲ್ಲಿ  ಡಿ.ಕೆ. ಶಿವಕುಮಾರ್ ರವರ ನೇತೃತ್ವದಲ್ಲಿ ಆಗಮಿಸುತ್ತಿರುವ ಪ್ರಜಾ ದ್ವನಿ ಯಾತ್ರೆಯನ್ನು ಯಶಸ್ವಿಗೊಳಿಸುತ್ರೆಡವೆಂದು ಭರವಸೆ ನೀಡಿದರು.

ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ಮಾತನಾಡಿ, ಕಾಂಗ್ರೆಸ್ ಪಕ್ಷ ಶಿಸ್ತಿನ ಪಕ್ಷ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು ಎಲ್ಲ ಕಾರ್ಯಕರ್ತರು ಮುಖಂಡರು ಎಲ್ಲರೂ ಅತ್ಯಂತ ಜವಾಬ್ದಾರಿಯಿಂದ ಕೆಲಸ ಮಾಡಬೇಕು.

ಪಕ್ಷದ ಅದ್ಯಕ್ಷರಾದ ಡಿ.ಕೆ. ಶಿವಕುಮಾರ್  ನೇತೃತ್ವದಲ್ಲಿ ಆಗಮಿಸುತ್ತಿರುವ ಪ್ರಜಾ ದ್ವನಿ ಯಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ಕಾರ್ಯಕರ್ತರನ್ನು ಹಾಗೂ ಮುಖಂಡರನ್ನು ಕೋರಿದರು.

ಕೆ.ಜಿ.ಎಫ್. ಕ್ಷೇತ್ರ ಬಂಗಾರದ ನಾಡು ಹಾಗೆಯೇ ಜನರೂ ಸಹಾ ಬಂಗಾರದ ಜನ ಅದರಂತೆ ನಮ್ಮ ಒಗ್ಗಟ್ಟು ಹಾಗೂ ಐಕ್ಯತೆಯನ್ನು ನಾವು ಇಡೀ ರಾಜ್ಯಕ್ಕೆ ತೋರಿಸಿಕೊಡಬೇಕು, ಆ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮತ್ತೊಮ್ಮೆ ಕಾರ್ಯಕರ್ತರನ್ನು ಕೋರಿದರು.

ಕಾರ್ಯಕ್ರಮವನ್ನು ಕೆ.ಜಿ.ಎಫ್. ನಗರದ ಪ್ರಿಚರ್ಡ್ ರಸ್ತೆ ವೃತ್ತದಲ್ಲಿ ಆಯೋಜಿಸಲು ಒಮ್ಮತದಿಂದ ತೀರ್ಮಾನಿಸಲಾಯಿತು. ಬ್ಲಾಕ್ ಕಾಂಗ್ರೇಸ್ ಅದ್ಯಕ್ಷರಾದ ರಾದಾಕೃಷ್ಣರೆಡ್ಡಿ, ಮೊದಲೈಮುತ್ರು ಮೊದಲಾದವರಿದ್ದರು

 

Leave a Reply

Your email address will not be published. Required fields are marked *

You missed

error: Content is protected !!