• Fri. Apr 19th, 2024

PLACE YOUR AD HERE AT LOWEST PRICE

ತಾಲೂಕಿನ ಎಸ್ ಎನ್ ಸಿಟಿ ಬಳಿ ಯಾವುದೇ ಭೂ ಕಬಳಿಕೆ ಶಾಸಕರು ಮಾಡಿಲ್ಲ ಎಂದು ಭೂ ಕಬಳಿಕೆ ನ್ಯಾಯಾಲಯ ಪ್ರಕರಣವನ್ನು ವಜಾಗೊಳಿಸಿದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.

ಪಟ್ಟಣದ ಎಸ್.ಎನ್ ರೆಸಾರ್ಟ್ ನಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೋಲಾರ ಮೂಲದ ನಳಿನಿ ಗೌಡ ಭೂ ಕಬಳಿಕೆ ನ್ಯಾಯಾಲಯದಲ್ಲಿ ಎಸ್.ಎನ್.ಸಿಟಿ ಬಳಿ ಗುಂಡು ತೋಪುನ್ನು ಓತ್ತುವರಿ ಮಾಡಿಕೊಂಡಿದ್ದಾರೆ ಎಂದು ಭೂ ಕಬಳಿಕೆ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು.

ಅದರಂತೆ ನ್ಯಾಯಾಲಯದಲ್ಲಿ ಒಂದು ವರ್ಷದಿಂದ ಪ್ರಕರಣ ಬಗ್ಗೆ ತನಿಖೆ ನಡೆಸಿ ಶಾಸಕರು ಯಾವುದೇ ಭೂ ಕಬಳಿಕೆ ಮಾಡಿಲ್ಲ ಎಂದು ಪ್ರಕರಣವನ್ನು ವಜಾಗೊಳಿಸಲಾಗಿದೆ. ಎಂದು ಶಾಸಕರು ತಿಳಿಸಿದರು.

ಸತ್ಯಕ್ಕೆ ಯಾವತ್ತಿದ್ದರೂ ಸಹ ಸಾವಿಲ್ಲ. ಅನೇಕ ಯೂಟ್ಯೂಬ್ ಚಾನೆಲ್ ನವರು ಅನಗತ್ಯವಾಗಿ ನನ್ನ ವ್ಯಾಪಾರವನ್ನು ಕೆಡಿಸಬೇಕೆಂಬ ಉದ್ದೇಶದಿಂದ ಹಾಗೂ ಎಸ್.ಎನ್. ಸಿಟಿಗೆ ಕಪ್ಪು ಚುಕ್ಕೆ ತರುವ ಕೆಲಸ ಮಾಡಿದ್ದಾರೆ.

ಕೆಲ ಅಧಿಕಾರಿಗಳ ಜೊತೆ ಶಾಮೀಲಾಗಿ ಕೇವಲ ಬಂಗಾರಪೇಟೆ ಅಧಿಕಾರಿಗಳು ಮಾತ್ರ ಅಲ್ಲ ಮುಖ್ಯಮಂತ್ರಿಗಳ ಕಚೇರಿಯಲ್ಲಿರುವಂತಹ ಮಹಾನ್ ವ್ಯಕ್ತಿ ಪ್ರೇರೇಪಣೆಯೊಂದಿಗೆ ಎಸ್.ಎನ್.ಸಿಟಿಗೆ ಕಪ್ಪು ಚುಕ್ಕೆ ತರುವ ಕೆಲಸವನ್ನು ಮಾಡಿದ್ದರು.

ಇವತ್ತು ಭೂಕಬಳಿಕೆ ನ್ಯಾಯಾಲಯ ಈ ಪ್ರಕರಣದಲ್ಲಿ ಶಾಸಕರು ಓತ್ತುವರಿ ಮಾಡಿರುವುದರ ಬಗ್ಗೆ ಹಾಗೂ ಶಾಸಕರು ಅಕ್ರಮವಾಗಿ ಎಸ್.ಎನ್.ಸಿಟಿ ನಿರ್ಮಾಣ ಮಾಡಿಲ್ಲ ಎಂಬುವುದರ ಬಗ್ಗೆ ಸ್ಪಷ್ಟವಾವಾಗಿ ತೀರ್ಪು ನೀಡಿ ಪ್ರಕರಣವನ್ನು ವಜಾಗೊಳಿಸಿದ್ದಾ ಎಂದು ತಿಳಿಸಿದರು.

ನಳಿನಿಗೌಡರವರು ತಿಳಿದುಕೊಳ್ಳಬೇಕು ನಮ್ಮ ತಾಲೂಕಿಗೂ ಅವರಿಗೂ ಯಾವುದೇ ಸಂಬಂಧ ಇಲ್ಲದೆ ಇದ್ದರು ಸಹ ಅನಗತ್ಯವಾಗಿ ಪರಿಶಿಷ್ಟ ಜಾತಿಯ ಒಬ್ಬ ಶಾಸಕರನ್ನು ತೇಜೋವದೆ ಮಾಡಬೇಕೆಂದು ಮನಸ್ಸಿನಲ್ಲಿ ಇಟ್ಟುಕೊಂಡಿದ್ದಾರೆ.

ಇಲ್ಲಸಲ್ಲದ ಹೇಳಿಕೆಗಳನ್ನು ಪತ್ರಿಕೆಗಳಲ್ಲಿ ಕೊಟ್ಟಿಕೊಂಡು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವುದು ಮತ್ತು ಬೇರೆಯವರ ಪ್ರೇರೇಪಣೆಯಿಂದ ಮಾಡುವುದು ನಿಲ್ಲಿಸಬೇಕೆಂದು ಹೇಳಿದರು.

ನನಗೆ ಹಾಗೂ ನನ್ನ ವ್ಯಾಪಾರಕ್ಕೆ ಮಾನನಷ್ಟ ಮಾಡಿದರೆ ಅಂತಹವರ ಮೇಲೆ ಯಾಕೆ ನಾನು ಮಾನನಷ್ಟ ಮೊಕದ್ದಮೆ ದೂರು ದಾಖಲಿಸಬಾರದೆಂದು ಪ್ರಶ್ನಿಸಿದರು. ತಪ್ಪು ಆರೋಪಗಳಿಂದ ನನಗೆ ಹಾಗೂ ನನ್ನ ಎಸ್.ಎನ್.ಸಿಟಿಯ ಪಾಲುದಾರರಿಗೆ, ಹಾಗೂ ರೈತರಿಗೆ ಮಾಡಿರುವಂತಹ ಅವಮಾನ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.

ಸರ್ವೇ ಮಾಡುವಾಗ ಯಾವುದೇ ಅಧಿಕಾರಿ ಮೀಡಿಯಾದವರನ್ನು ಕರೆದುಕೊಂಡು ಹೋಗಿ ಸರ್ವೇ ಮಾಡುವ ಕೆಲಸ ಇತಿಹಾಸದಲ್ಲೇ ಮಾಡಿಲ್ಲ ಎಂದರು. ಆದರೆ ತಹಶೀಲ್ದಾರ್ ಹೊಸ ಇತಿಹಾಸವನ್ನು ಸೃಷ್ಟಿ ಮಾಡಿ ಇಬ್ಬರು ಮೂವರು ಮೀಡಿಯಾದವರನ್ನು ಬಳಸಿಕೊಂಡು ಎಸ್.ಎನ್.ಸಿಟಿಗೆ ದಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಗುಂಡು ತೋಪು ಜಾಗಕ್ಕೆ ಸಾರ್ವಜನಿಕರ ಅನುಕೂಲಕ್ಕಾಗಿ ಹಾಗೂ ರೈತರಿಗೆ ಓಡಾಡಲು ಸಿಮೆಂಟ್ ರಸ್ತೆಯನ್ನು ಹಾಕಲಾಗಿದೆಯೇ ಹೊರತು ಯಾರು ಓತ್ತುವರಿ ಮಾಡಿಕೊಂಡಿಲ್ಲ.  ಈಗಾಗಲೇ ರಸ್ತೆಗೆ ಸರ್ಕಾರ ಅನುಮತಿ ನೀಡಿದೆ ಎಂದು ಸ್ಪಷ್ಟನೆ ನೀಡಿದರು.

ಸರ್ಕಾರ ಅನುಮತಿ ನೀಡಿದ್ದರೂ ಸಹ ತಹಶೀಲ್ದಾರ್ ಉದ್ದೇಶ ಪೂರಕವಾಗಿ ರಸ್ತೆಯನ್ನ ಎಸ್.ಎನ್.ಸಿಟಿಯವರು ಓತ್ತುವರಿ ಮಾಡಿಕೊಂಡಿದ್ದಾರೆ ಎಂದು ಪತ್ರಿಕೆಗಳಲ್ಲಿ ಸುಳ್ಳು ಸುದ್ದಿಯನ್ನು ಪ್ರಚಾರ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.

ಎಸ್.ಎನ್.ಸಿಟಿಗೂ ಸರ್ವೇ ನಂಬರ್ 35 ಗುಂಡು ತೋಪುಗೂ ಯಾವುದೇ ಸಂಬಂಧವಿಲ್ಲ ಎಂದು ನಾನು ಪದೇ ಪದೇ ತಿಳಿಸುತ್ತಿದ್ದೇನೆ. 35 ರಲ್ಲಿರುವ ಗುಂಡು ತೋಪನ್ನು ನನ್ನ ಹೆಸರಿಗೆ ಯಾವುದೇ ಖಾತೆ ಮಾಡಿಕೊಂಡಿಲ್ಲ,

ಅಲ್ಲಿ ನಾನು ಮನೆ ಕಟ್ಟಿಲ್ಲ, ಹಾಗೂ ನನ್ನ  ಹೆಸರಿಗೆ ಮಂಜೂರು ಮಾಡಿಸಿಕೊಂಡಿಲ್ಲ. ಹೀಗಿದ್ದರೂ ಸಹ ಉದ್ದೇಶ ಪೂರಕವಾಗಿ ನನ್ನ ಹೆಸರನ್ನು ಬಳಸುತ್ತಿರುವುದು ಮಹಾ ಅಪರಾಧ ನನ್ನನ್ನು ರಾಜಕೀಯವಾಗಿ ತೇಜೋವದೆ ಮಾಡಬೇಕೆಂಬ ಉದ್ದೆಶದಿಂದ ಹೀಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

 

Related Post

ಶೇ.೯೦ ರಷ್ಟು ದೇಶದ ಸಮುದಾಯಗಳು ಮುಖ್ಯವಾಹಿನಿ ಮಾದ್ಯಮಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಮತ್ತು ಅತ್ಯುನ್ನತ ಸರ್ಕಾರಿ ಹುದ್ದೆಗಳಲ್ಲಿ ಭಾಗವಹಿಸುವಿಕೆ ಇಲ್ಲ! : ರಾಹುಲ್ ಗಾಂಧಿ
ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿವೆ : ಸಮುದಾಯ ಮುಖಂಡರ ಆಕ್ರೋಶ,
ಸಂವಿಧಾನ ಉಳಿಸಲು ದೇಶದ ಸಮಗ್ರತೆ ಕಾಪಾಡಲು ಬಿಜೆಪಿಯನ್ನು ಸೋಲಿಸಿ: ಮಂಜುನಾಥ್ ಅಣ್ಣಯ್ಯ

Leave a Reply

Your email address will not be published. Required fields are marked *

You missed

error: Content is protected !!