PLACE YOUR AD HERE AT LOWEST PRICE
ಮುಂಬರುವ ರಾಜ್ಯ ಮತ್ತು ಕೇಂದ್ರ ಸರಕಾರದ ಬಜೆಟ್ ನಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಯೋಜನೆಗಳನ್ನು ರೂಪಿಸುವಂತೆ ಒತ್ತಾಯಿಸಿ ಫೆಬ್ರವರಿ 20 ರಂದು ವೇದಿಕೆವತಿಯಿಂದ ಜಿಲ್ಲಾ ಮಟ್ಟದ ಬೃಹತ್ ಜನಾಗ್ರಹ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ಅಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ತಿಳಿಸಿದರು.
ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಜಿಲ್ಲಾ ಸಮಗ್ರ ಅಭಿವೃದ್ಧಿಗಾಗಿ ಜನಪರ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಮುಂದಿನ ಪೀಳಿಗೆಗಾಗಿ ಸುಮಾರು 16 ಅಂಶಗಳ ಪಟ್ಟಿಯನ್ನು ಜಿಲ್ಲೆಯ ಮೂರು ಪಕ್ಷಗಳ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ ಜಿಲ್ಲೆಯಾದ್ಯಂತ ಅನೇಕ ಹೋರಾಟಗಳು ಚರ್ಚೆಗಳು, ಸಂವಾದಗಳು, ವಿಚಾರ ಸಂಕಿರಣಗಳನ್ನು ನಡೆಸಲಾಗಿದ್ದರೂ ನಮ್ಮನ್ನು ಆಳುವ ಸರ್ಕಾರಗಳ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಸಮಸ್ಯೆಗಳು ಹಾಗೇ ಉಳಿದಿವೆ ಸರಕಾರವನ್ನು ಒತ್ತಾಯಿಸುವ ನಿಟ್ಟಿನಲ್ಲಿ ಈ ಬೃಹತ್ ಜನಾಗ್ರಹ ಜಾಥಾ ನಡೆಸಲಾಗುತ್ತಿದೆ ಎಂದು ವಿವರಿಸಿದರು.
ಜಿಲ್ಲೆಯಲ್ಲಿ ಪಕ್ಷಾತೀತವಾಗಿ ಅಭಿವೃದ್ಧಿ ಪರವಾಗಿ ಸಾಮರಸ್ಯಕ್ಕಾಗಿ ಫೆಬ್ರವರಿ 20 ರಂದು ಕೋಲಾರ ನಗರದ ಗಾಂಧಿವನದಿಂದ ಜಾಥಾ ಪ್ರಾರಂಭವಾಗಲಿದ್ದು ರೈತರು ಕಾರ್ಮಿಕರು, ದಲಿತರು, ವಿಧ್ಯಾರ್ಥಿಗಳು, ಯುವಜನರು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸಬೇಕು ಸರಕಾರ ಸ್ಪಂದಿಸದೇ ಇದ್ದಲ್ಲಿ ಕೋಲಾರ ಜಿಲ್ಲಾ ಬಂದ್ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಜನಪರ ವೇದಿಕೆ ಜಿಲ್ಲಾ ಕಾರ್ಯಾಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಕೆ.ಎಸ್ ಗಣೇಶ್ ಮಾತನಾಡಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ದೃಷ್ಟಿಕೋನದಲ್ಲಿ ಪ್ರತಿಯೊಂದು ಗ್ರಾಮಗಳಲ್ಲಿ ಬೇಡಿಕೆಗಳ ಪಟ್ಟಿಯನ್ನು ತಯಾರಿಸಿ ಅರಿವು ಮತ್ತು ಜಾಗೃತಿ ಮೂಡಿಸಲಾಗಿದೆ ಜನರ ಜ್ವಲಂತ ಸಮಸ್ಯೆಗಳಾದ ನೀರಾವರಿ, ಆಸ್ಪತ್ರೆ, ಕೃಷಿ ಕೈಗಾರಿಕೆ ಭೂಮಿ ಎಪಿಎಂಸಿ ಮಾರುಕಟ್ಟೆ ಸಮಸ್ಯೆಗಳು ಸೇರಿದಂತೆ 16 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜನರ ಬಳಿ ಹೋಗಿದ್ದು ಸರಕಾರ ನಿರ್ಲಕ್ಷ್ಯ ತೋರಿದರೆ ಜನ ಎಚ್ಚರಿಸಬೇಕಾಗಿದೆ ಎಂದರು.
ವೇದಿಕೆ ತಾಲೂಕು ಗೌರವ ಅಧ್ಯಕ್ಷ ಸಲ್ಲಾವುದ್ದೀನ್ ಬಾಬು, ಕಾರ್ಯದರ್ಶಿ ಟಿ.ಎಂ ವೆಂಕಟೇಶ್, ಖಜಾಂಚಿ ಎಂ.ವಿಜಯಕೃಷ್ಣ ಇದ್ದರು.
ಸುದ್ದಿ ಓದಿ ಹಂಚಿ: