• Fri. Mar 1st, 2024

ಕೋಲಾರ I ಸತ್ಸಂಗ,ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಜನರನ್ನು ಆಧ್ಯಾತ್ಮದೆಡೆಗೆ ಸೆಳೆಯಲು ಶ್ರೀ ಸದ್ಗುರು ಕ್ಷೇತ್ರ, ಧ್ಯಾನ ಮಂದಿರ ನಿರ್ಮಾಣ- ಧರ್ಮದರ್ಶಿ ಸಿಂಹ ವೆಂಕಟೇಶ್

PLACE YOUR AD HERE AT LOWEST PRICE

ಸತ್ಸಂಗ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಜನರನ್ನು ಆಧ್ಯಾತ್ಮ ಕಡೆಗೆ ಕೊಂಡೊಯ್ಯಲು ಮತ್ತು ಸಮಾಜದಲ್ಲಿ ಸಂಸ್ಕಾರ, ಭಕ್ತಿ, ಶ್ರದ್ಧೆ ಬೆಳೆಯುವಂತೆ ಮಾಡಲು ಶ್ರೀ ಸದ್ಗುರು ಕ್ಷೇತ್ರವನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ಕೋಲಾರ ತಾಲೂಕಿನ ಚಿಟ್ನಹಳ್ಳಿ ಗ್ರಾಮದ ಸಮೀಪ ನಿರ್ಮಿಸಿರುವ ಓಂ ಶ್ರೀ ಸದ್ಗುರು ಸಾಯಿರಾಂ ಸೇವಾ ಟ್ರಸ್ಟ್ ಧರ್ಮದರ್ಶಿ ಸಿಂಹ ಎನ್.ವೆಂಕಟೇಶ್ ತಿಳಿಸಿದರು.

ಕೋಲಾರ ತಾಲೂಕಿನ ಸುಗಟೂರು ಹೋಬಳಿ ಚಿಟ್ನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀ ಸದ್ಗುರು ಕ್ಷೇತ್ರದಲ್ಲಿ ಮಂಗಳವಾರ ಸುದ್ದಿಗೋಷ್ಟಿ ನಡೆಸಿ ಪತ್ರಕರ್ತರಿಗೆ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ದಿ ಕಾರ್ಯಗಳನ್ನು ಪರಿಚಹಿಸಿ ಅವರು ಮಾತನಾಡುತ್ತಿದ್ದರು.

ಚಿಟ್ನಹಳ್ಳಿ ಗ್ರಾಮದ ಬಳಿ ಇರುವ ಸ್ವತಃ ಪಿತ್ರಾರ್ಜಿತ ಆಸ್ತಿಯಲ್ಲಿ ಸುಮಾರು ಒಂದೂವರೆ ಎಕರೆಯಲ್ಲಿ ದಾನಿಗಳ ಸಹಕಾರದಿಂದ ಹಾಗೂ ಅನಂತಪುರ ಜಿಲ್ಲೆಯ ರಾಧಾಕೃಷ್ಣ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಸುಮಾರು ಒಂದೂವರೆ ಕೋಟಿ ವೆಚ್ಚದಲ್ಲಿ ಭೂತ ಭವಿಷ್ಯತ್ತಿನ ವರ್ತಮಾನ ಸಮಾಜ ಚಿಂತಕ ಶ್ರೀ ಅವಧೂತ ದತ್ತಾತ್ರೇಯ, ಶ್ರೀ ಸದ್ಗುರು ಸಾಯಿರಾಂ,ಶ್ರೀ ಸದ್ಗುರು ಕಾಲ ಜ್ಞಾನಿ ವೀರಬ್ರಹ್ಮೇಂದ್ರ ಸ್ವಾಮಿ, ಶ್ರೀ ಸದ್ಗುರು ಕಾಲಜ್ಞಾನಿ ಕೈವಾರ ತಾತಯ್ಯನವರುಗಳ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡಲಾಗುವುದೆಂದು ತಿಳಿಸಿದರು.

ಕಳೆದ ಮೂರೂವರೆ ವರ್ಷಗಳಿಂದ ದೇವಾಲಯದ ಕೆಲಸ ನಡೆಯುತ್ತಿದೆ.ಈಗಾಗಲೇ ದೇವಾಲಯ ನಿರ್ಮಾಣ ಹಾಗೂ ಇದೇ ಆವರಣದಲ್ಲಿ ಧ್ಯಾನ ಮಂದಿರ ನಿರ್ಮಾಣ ಮಾಡಲಾಗಿದೆ.ಇನ್ನೂ ದೇವಾಲಯದ ಕೆಲಸ ಬಹಳಷ್ಟು ಇದೆ.ದಾನಿಗಳ ಸಹಕಾರದಿಂದ ಇನ್ನು ಮೂರು ತಿಂಗಳಲ್ಲಿ ದೇವಾಲಯ ನಿರ್ಮಾಣ ಕೆಲಸ ಪೂರ್ಣಗೊಳ್ಳಲಿದ್ದು, ದೇವಾಲಯ ಪ್ರಾರಂಭೋತ್ಸವದ ದಿನಾಂಕವನ್ನು ಮುಂದೆ ತಿಳಿಸಲಾಗುವುದೆಂದು ಹೇಳಿದರು.
ಸದ್ಗುರು ಕ್ಷೇತ್ರದಲ್ಲಿ ಇನ್ನೂ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಾಗಿರುವುದರಿಂದ ಸೇವಾ ಮನೋಭಾವ ಹೊಂದಿರುವ ಸಹೃದಯವಂತರು ಶಕ್ತ್ಯಾನುಸಾರ ವಸ್ತು ರೂಪದಲ್ಲಿ ಅಥವಾ ಧನ ಸಹಾಯ ನೀಡುವ ಮೂಲಕ ಸಹಾಯ ಹಸ್ತ ನೀಡ ಬೇಕೆಂದು ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ ೯೪೪೮೦೧೧೬೫೫ ನ್ನು ಸಂಪರ್ಕಿಸುವಂತೆ
ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ದಾಸ ಬಳೇಸೀತಾರಾಮಯ್ಯ  ಮಾತನಾಡಿ, ಸುತ್ತಮುತ್ತ ಈ ಮಾದರಿ ಜ್ಞಾನಮಂದಿರ ಇಲ್ಲ. ಗ್ರಾಮೀಣ ಭಾಗದಲ್ಲಿ ಆಗಿರುವುದು ಒಳ್ಳೆಯ ಬೆಳವಣಿಗೆ. ಯಾರೂ ಬೇಕಾದರೂ ಬಂದ ಪೂಜೆ ಸಲ್ಲಿಸಬಹುದು. ಫೆ.೨೩ ರಂದು ಗುರುರಾಜ್ ಆಧ್ಯಾತ್ಮಿಕ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು

ಈ ಪತ್ರಿಕಾಗೋಷ್ಠಿಯಲ್ಲಿ ಗೋಪಾಲಕೃಷ್ಣಪ್ಪ, ನಾರಾಯಣಸ್ವಾಮಿ ಇದ್ದರು.

ಸುದ್ದಿ ಓದಿ ಹಂಚಿ:

 

Leave a Reply

Your email address will not be published. Required fields are marked *

You missed

error: Content is protected !!