• Fri. Mar 1st, 2024

ಕೋಲಾರ I ಪಿ.ನಂಬರನ್ನು ರದ್ಧುಪಡಿಸಲು ಆಗ್ರಹಿಸಿ ಧರಣಿ

PLACE YOUR AD HERE AT LOWEST PRICE

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸಂಯೋಜಕ) ಜಿಲ್ಲಾ ಶಾಖೆ ವತಿಯಿಂದ ದಸಂಸ ಸಂಯೋಜಕದ ರಾಜ್ಯಾಧ್ಯಕ್ಷ ಡಾ.ಅಶ್ವಥ ನಾರಾಯಣ ಅಂತ್ಯಜ ಅವರ ನೇತೃತ್ವದಲ್ಲಿ ಕೋಲಾರ ನಗರದ ಉಪ ವಿಭಾಗಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

ಪಿ.ನಂಬರನ್ನು ರದ್ಧುಪಡಿಸುವುದು ಸೇರಿದಂತೆ ಸುಮಾರು ವರ್ಷಗಳಿಂದ ಭೂಹೀನ ರೈತರು, ದಲಿತ, ಫಾರಂ ನಂ ೫೦, ೫೩, ೫೭ ರಲ್ಲಿ ಅರ್ಜಿಯನ್ನು ಹಾಕಿಕೊಂಡಿರುವವರಿಗೆ ಜಮೀನು ಖಾಯಂ ಮಾಡುವಂತೆ ಹಾಗೂ ಜಿಲ್ಲೆಯಲ್ಲಿ ಎಲ್ಲಾ ನಿವೇಶನ ರಹಿತರಿಗೂ ನಿವೇಶನ ಹಂಚುವುದು ಸೇರಿದಂತೆ ಮಾಲೂರು ಹುಲಿಮಂಗಲದಲ್ಲಿ ದಲಿತರಿಗೆ ನಿವೇಶನಗಳನ್ನು ನೀಡುವುದು, ಮಂಗಸಂದ್ರ ದಲಿತರಿಗೆ ಅಂಬೇಡ್ಕರ್ ಭವನಕ್ಕೆ ೩ ಎಕರೆ ಜಮೀನು ಮತ್ತು ಕ್ರೈಸ್ತ ಪ್ರಾರ್ಥನಾ ಮಂದಿರಕ್ಕೆ ೨ ಎಕರೆ ಹಾಗೂ ಬುಡ್ಡಿದೀಪ ಪ್ರಕಾಶನ ಬೆಳಕು ದೀಪ ಪ್ರಕಾಶನ ಹಾಗೂ ವಿಶ್ವಜನನಿ ಸೇವಾ ಟ್ರಸ್ಟ್‌ಗೆ ತಲಾ ೫ ಎಕರೆ ಜಮೀನು ನೀಡುವಂತೆ ಒತ್ತಾಯಿಸಲಾಯಿತು.

ಕಳೆದ ಹತ್ತು ವರ್ಷಗಳಿಂದ ಭೂಹೀನರು ಮತ್ತು ವಸತಿಹೀನರು ಭೂಮಿಗಾಗಿ, ನಿವೇಶನಕ್ಕಾಗಿ ನಿರತಂತರವಾಗಿ ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದರೂ ಸಹ ಸಮಸ್ಯೆ ಬಗೆಹರಿದಿಲ್ಲ. ಕಂದಾಯಾಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಸಮಸ್ಯೆಗಳನ್ನು ಬಗೆ ಹರಿಸಬೇಕೆಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ಉಪ ವಿಭಾಗಾಧಿಕಾರಿ ವೆಂಕಟಲಕ್ಷ್ಮಿಸಮಸ್ಯೆಯನ್ನು ಶಿಘ್ರವಾಗಿ ಪರಿಹರಿಸುವುದಾಗಿ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಬೆಂಗಳೂರು ವಿಭಾಗೀಯ ಸಂಯೋಜಕ ನಂಜುಂಡಪ್ಪ ಪಾಸ್ವಾನ್, ಜಿಲ್ಲಾ ಸಂಯೋಜಕ ವಿಟ್ಟಪ್ಪನಹಳ್ಳಿ ವೆಂಕಟೇಶ್, ವೇಣು, ಜಡಿಗೇನಹಳ್ಳಿ ಗಂಗಮ್ಮ, ಜಯಮಾಲಾ, ಹುಲಿಮಂಗಲ ಶಂಕರ್, ಎಸ್.ಅಗ್ರಹಾರ ಅಂಬರೀಶ್ ಇನ್ನಿತರರು ಉಪಸ್ಥಿತರಿದ್ದರು.

ಸುದ್ದಿ ಓದಿ ಹಂಚಿ:

Leave a Reply

Your email address will not be published. Required fields are marked *

You missed

error: Content is protected !!