ನಿತ್ಯ ನೂರಾರೂ ವಾಹನಗಳಿಂದ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರೂ ಮಂದಿ ಸಂಚಾರ ನಡೆಸುವ ರಸ್ತೆಯೂ ತುಂಬ ಗುಂಡಿಗಳಿಂದ ಕೂಡಿದ ರಸ್ತೆಗೆ ಸ್ಥಳೀಯ ಬಿಜೆಪಿ ಮುಖಂಡರಾದ ನಕ್ಕನಹಳ್ಳಿ ಚಂದ್ರಶೇಖರ್ ಹಾಗೂ ವಿಕ್ಕಿರೆಡ್ಡಿ ಸ್ವಂತ ಹಣದಲ್ಲಿ ಗುಂಡಿಗಳಿಗೆ ಮಣ್ಣು ಹಾಕಿ ಮುಚ್ಚಿ ಸರಿಪಡಿಸಿದ್ದಾರೆ.
ಕ್ಯಾಸಂಬಳ್ಳಿ ಗ್ರಾಮದಿಂದ ಕರಡಗೂರು ಗ್ರಾಮದ ಮೂಲಕ ಆಂದ್ರ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಸುಮಾರು ವರ್ಷಗಳಿಂದ ಡಾಂಬರೀಕರಣ ಕಾಣದೆ, ಹೆಚ್ಚಿನ ಪ್ರಮಾಣದಲ್ಲಿ ಗುಂಡಿಗಳಿಂದ ತುಂಬಿಕೊಂಡಿತ್ತ.
ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳು ಸಂಭವಿಸಿ ಕ್ಯಾಸಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ಸಹ ದಾಖಲಾಗುತ್ತಿತ್ತು. ಸ್ಥಳೀಯ ಕ್ಯಾಸಂಬಳ್ಳಿ ಪೊಲೀಸ್ ಠಾಣೆಯ ಪಿಎಸೈ ಶ್ಯಾಮಲಾ ಅವರ ಸಲಹೆಯಂತೆ ಮುಖಂಡರು ರಸ್ತೆಯಲ್ಲಿನ ಗುಂಡಿಗಳಿಗೆ ಮಣ್ಣು ಮುಚ್ಚಿದ್ದಾರೆ.
ಆ ಮೂಲಕ ಅಪಘಾತಗಳನ್ನು ತಡೆಯುವ ದೃಷ್ಠಿಯಿಂದ ಸ್ಥಳೀಯ ಜಿಪಂ ಮಾಜಿ ಸದಸ್ಯ ಜಯಪ್ರಕಾಶ್ ನಾಯ್ಡು ನೇತೃತ್ವದಲ್ಲಿ ಗುಂಡಿಗಳಿಗೆ ಮಣ್ಣು ಹಾಕುವುದಕ್ಕೆ ಮುಂದಾಗಿರುವುದಾಗಿ ಚನ್ನದಾಸರಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಚಂದ್ರಶೇಖರ್ ತಿಳಿಸಿದರು.
ಕ್ಯಾಸಂಬಳ್ಳಿ ಗ್ರಾಮದಿಂದ ಕರಡುಗೂರು ಗ್ರಾಮದವರೆಗೂ ರಸ್ತೆಯಲ್ಲಿನ ಗುಂಡಿಗಳಿಗೆ ಮಣ್ಣು ಹಾಕಿ ವಾಹನಗಳು ಸುಲಭವಾಗಿ ಸಂಚಾರ ಮಾಡಲು ಸ್ಥಳೀಯರು ಹಾಗೂ ಕ್ಯಾಸಂಬಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಯ ಸಹಕಾರ ಬಹುಮುಖ್ಯವಾಗಿದೆ.
ಮುಂದಿನ ದಿನಗಳಲ್ಲಿ ಕೋಲಾರ ಸಂಸದರ ಗಮನಕ್ಕೆ ತಂದು ಡಾಂಬರೀಕರಣ ಮಾಡುವುದಾಗಿ ಬಿಜೆಪಿ ಯುವ ಮುಖಂಡ ವಿಕ್ಕಿರೆಡ್ಡಿ ತಿಳಿಸಿದರು.
ರಸ್ತೆಯಲ್ಲಿನ ಗುಂಡಿಗಳಿಗೆ ಕ್ಯಾಸಂಬಳ್ಳಿ ಪಿಎಸೈ ಶ್ಯಾಮಲಾ ಅವರು ಮಣ್ಣು ಹಾಕುವ ಮೂಲಕ ಚಾಲನೆ ನೀಡಿ,
ರಸ್ತೆಯಲ್ಲಿ ವಾಹನಗಳನ್ನು ಸುರಕ್ಷತವಾಗಿ ಸಂಚಾರ ಮಾಡಬೇಕು ಹಾಗೂ ವಾಹನಗಳಿಗೆ ಅಗತ್ಯ ದಾಖಲೆಗಳನ್ನು ಹೊಂದಿರಬೇಕೆಂದು ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಗೋಪಾಲ್ ರೆಡ್ಡಿ, ಮುಖಂಡರಾದ ಕೇಶವ ಗೌಡ, ಅನಂದ್ ರೆಡ್ಡಿ, ಯುವಕರಾದ ರಾಜೇಶ್, ಬಾಲಾಜಿ, ರಂಜೀತ್, ಅರುಣ್, ತ್ಯಾಗರಾಜ್, ಮುನಿರಾಜ್ ಸೇರಿದಂತೆ ಸ್ಥಳೀಯರು ಹಾಗೂ
ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಇದ್ದರು.