• Fri. Mar 1st, 2024

PLACE YOUR AD HERE AT LOWEST PRICE

 ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಸುಂದರಪಾಳ್ಯ ಕಾಲೇಜಿನ ಉಪನ್ಯಾಸಕರು ಸತತ 2ನೇ ಬಾರಿಗೆ ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದ್ದಾರೆ.
ಕೆಜಿಏಫ್ ತಾಲ್ಲೂಕಿನ ಸುಂದರಪಾಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಎನ್.ಕುಮಾರ್ ಹಾಗೂ
ರಾಮಮೂರ್ತಿ ಅವರು ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗುವ ಮೂಲಕ ಸತತ 2ನೇ
ಬಾರಿಗೆ ಜಿಲ್ಲೆಯಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಟೇಬಲ್ ಟೆನ್ನಿಸ್ ಸಿಂಗಲ್ಸ್‍ನಲ್ಲಿ ರಾಮಮೂರ್ತಿ ಪ್ರಥಮ ಸ್ಥಾನ ಹಾಗೂ ಪವರ್ ಲಿಪ್ಟಿಂಗ್ ಪ್ರಥಮ ಸ್ಥಾನ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ, ಚಕ್ರ ಎಸೆತದಲ್ಲಿ ಎನ್.ಕುಮಾರ್ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕಾಲೇಜಿನ ಉಪನ್ಯಾಸಕ ಎನ್.ಕುಮಾರ್ ಅವರು ಕಾಲೇಜಿನ ಕ್ರೀಡಾ ಕಾರ್ಯದರ್ಶಿಯಾಗಿ ಸುಮಾರು 14 ವರ್ಷಗಳಿಂದ ಜವಾಬ್ಧಾರಿ ವಹಿಸಿಕೊಂಡು ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತೋಡಗಿಸಿಕೊಳ್ಳುವ ಮೂಲಕ
ಸುಮಾರು 8 ಬಾರಿ ಚಾಂಪಿಯನ್ ಟ್ರೋಪಿಯನ್ನು ಪಡೆದುಕೊಂಡು ಇತಿಹಾಸ ಸೃಷ್ಠಿಸಿದ್ದಾರೆ.
ಸುಮಾರು 14 ವರ್ಷಗಳಿಂದ ಪ್ರತಿ ವರ್ಷ 70-80 ವಿದ್ಯಾರ್ಥಿಗಳು ಜಿಲ್ಲಾ ಮಟ್ಟದಲ್ಲಿ ವಿಜೇತರಾಗುವ ಮೂಲಕ
ರಾಜ್ಯ ಮಟ್ಟದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದ್ದಾರೆ, 3 ವಿದ್ಯಾರ್ಥಿಗಳು ರಾಷ್ಟ್ರೀಯ ಕ್ರೀಡಾಕೂಟದಲ್ಲಿ ರಾಜ್ಯವನ್ನು
ಪ್ರತಿನಿಧಿಸಿದ್ದಾರೆ, 1 ವಿದ್ಯಾರ್ಥಿ ಭಾರತ ತಂಡದಲ್ಲಿ ಪ್ರತಿನಿ ಧಿಸಿದ್ದಾರೆ.
ಅದೇ ರೀತಿ ಉಪನ್ಯಾಸಕ ರಾಮಮೂರ್ತಿ ಅವರು ಕ್ರೀಡೆಯಲ್ಲಿ ತೋಡಗಿಸಿಕೊಂಡು 3 ಬಾರಿ ಪುಟ್ ಬಾಲ್ ತಂಡ,
1 ಬಾರಿ ಹಾಕಿ ತಂಡ ಸಹ ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸುವಂತೆ ಮಾಡಿದ್ದಾರೆ, ಈ ಮೂಲಕ ಸುಮಾರು 08 ವರ್ಷಗಳಿಂದ ಉಪನ್ಯಾಸಕರ ಜನತೆಗೆ ಕ್ರೀಡೆಯಲ್ಲಿ ತೋಡಗಿಸಿಕೊಂಡು ವಿದ್ಯಾರ್ಥಿಗಳಿಗೆ ಪ್ರೋತ್ಸಹ ನೀಡಿದ್ದಾರೆ.
ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ಪ, ಹಿರಿಯ ಉಪನ್ಯಾಸಕ ರಾಮಕೃಷ್ಣ ಗೌಡ, ಉಪನ್ಯಾಸಕರಾದ ಅಪ್ಸರ್, ಸತೀಶ್,
ರೋಹನ್, ನಾರಾಯಣಸ್ವಾಮಿ, ಮಧುಸೂದನ್ ಸೇರಿದಂತೆ ಎಲ್ಲಾ ಉಪನ್ಯಾಸಕರು ಪ್ರೋತ್ಸಹದಿಂದ ಕಾಲೇಜಿನ
ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಾಧನೆ ಮಾಡಿ ಕೀರ್ತಿ ತರಲು ಸ್ವೂರ್ತಿ ನೀಡಿರುವುದಾಗಿ
ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!