• Fri. Oct 11th, 2024

ಕೋಲಾರ I ಎಸ್‌ ಎನ್‌ ಆರ್‌ ಆಸ್ಪತ್ರೆ ಶಿಥಿಲ ನೀರಿನ ಟ್ಯಾಂಕ್‌ ಧ್ವಂಸ

PLACE YOUR AD HERE AT LOWEST PRICE

  • ಕೋಲಾರ ಜಿಲ್ಲಾಸ್ಪತ್ರೆ ಆವರಣದಲ್ಲಿ ಶಿಥಿಲ ನೀರಿನ ಟ್ಯಾಂಕ್
    ಸುರಕ್ಷಿತವಾಗಿ ಧರೆಗುಳಿಸಿ ಧ್ವಂಸಗೊಳಿಸಿದ ಸಿಬ್ಬಂದಿ

ಕೋಲಾರ ನಗರದ ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆ ಆರವಣದಲ್ಲಿದ್ದ ಹಳೆಯ ಹಾಗೂ ಶಿಥಿಲಗೊಂಡಿದ್ದ ಎತ್ತರದ ನೀರಿನ ಟ್ಯಾಂಕನ್ನು ಸುರಕ್ಷಿತವಾಗಿ ಧರೆಗುರುಳಿಸಿ ಧ್ವಂಸಗೊಳಿಸಲಾಯಿತು.
ಸುಮಾರು ೩೦ ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ೫೦ ಸಾವಿರ ಲೀಟರ್ ನೀರಿನ ಸಾಮರ್ಥ್ಯದ ಈ ಟ್ಯಾಂಕ್‌ನ ೫ ಆಧಾರಸ್ಥಂಬಗಳು ಬಹುತೇಕ ಶಿಥಿಲಾವಸ್ಥೆ ತಲುಪಿದ್ದವು. ಜೊತೆಗೆ ಪಕ್ಕದ ಪಾರ್ಕಿಂಗ್ ಜಾಗದಲ್ಲಿ ಹೈಟೆಕ್ ಆಸ್ಪತ್ರೆ ನಿರ್ಮಾಣ ಕಾಮಗಾರಿಯು ನಡೆಯಲಿದ್ದು, ಈಗಾಗಲೇ ಇದ್ದ ಮರಗಳು ಹಾಗೂ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಲಾಗಿದೆ.
ಗುರುವಾರ ಬೆಳಗ್ಗೆ ಟ್ಯಾಂಕ್‌ನ ಸಮೀಪದ ಪಾರ್ಕಿಂಗ್‌ನಲ್ಲಿದ್ದ ವಾಹನಗಳನ್ನು ಹಾಗೂ ಸಾರ್ವಜನಿಕರನ್ನು ಮತ್ತು ಅಕ್ಕಪಕ್ಕದ ಕಟ್ಟಡಗಳಲ್ಲಿದ್ದ ಜನರನ್ನು ತೆರವುಗೊಳಿಸಿ, ಹಿಟಾಚಿ ಮೂಲಕ ಟ್ಯಾಂಕ್‌ನ ಎರಡು ಆಧಾರ ಕಂಬಗಳನ್ನು ಜಖಂಗೊಳಿಸಿ ನಂತರ ಲೋಹದ ಹಗ್ಗ ಕಟ್ಟಿ ಎಳೆಯುವ ಮೂಲಕ ಟ್ಯಾಂಕನ್ನು ಧರೆಗುರುಳಿಸಲಾಯಿತು. ಈ ಸಂದರ್ಭದಲ್ಲಿ ಯಾರಿಗೂ ಯಾವುದೇ ರೀತಿಯ ಹಾನಿಯಾಗಿಲ್ಲ.
ಈ ಸಂದರ್ಭದಲ್ಲಿ ಜಿಲ್ಲಾಶಸ್ತ್ರಚಿಕಿತ್ಸಕ ಡಾ.ವಿಜಯಕುಮಾರ್ ಮತ್ತು ಸಿಬ್ಬಂದಿ ಹಾಜರಿದ್ದರು.

ಸುದ್ದಿ ಓದಿ ಹಂಚಿ:

Related Post

ಗಾಂಧೀವನದಲ್ಲೇ ಕನ್ನಡ ರಾಜ್ಯೋತ್ಸವ ಅದ್ದೂರಿ ಆಚರಣೆಗೆ ಕನ್ನಡ ಪರ ಸಂಘನೆಗಳ ಒಕ್ಕೂರಲಿನ ತೀರ್ಮಾನ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಹತ್ತು ಲಕ್ಷ ಸಸಿ ನೆಡುವ ಯೋಜನೆ : ಸಿದ್ದಗಂಗಯ್ಯ
ಗ್ರಾಮ ಪಂಚಾಯಿತಿ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ವಿವಿಧ  ನ್ಯಾಯಯುತ ಬೇಡಿಕೆಗಳನ್ನು  ಈಡೇರಿಸುವಂತೆ  ಒತ್ತಾಯಿಸಿ, ನಗರದ ಜಿಲ್ಲಾ ಪಂಚಾಯತಿ ಕಚೇರಿ ಮುಂದೆ ಜಿಲ್ಲಾ ಪಿಡಿಒ ಹಾಗೂ ಸಿಬ್ಬಂದಿಗಳ  ವೃಂದ ಸಂಘಟನೆಗಳ ವತಿಯಿಂದ ಅನಿರ್ದಿಷ್ಟವಾಧಿ ಪ್ರತಿಭಟನೆ

Leave a Reply

Your email address will not be published. Required fields are marked *

You missed

error: Content is protected !!