• Fri. Apr 19th, 2024

ಕೋಲಾರ I ಘಟಬಂಧನ್‌ ಮುಖಂಡರ ವಿರುದ್ಧ ಮುನಿಸು ಮುಂದುವರೆಸಿದ ಮುನಿಯಪ್ಪ-ಮುಳಬಾಗಿಲು ಪ್ರಜಾಧ್ವನಿಗೆ ಗೈರು-ಕೆಜಿಎಫ್‌ ಗೆ ಹಾಜರು

PLACE YOUR AD HERE AT LOWEST PRICE

  • ಮುಳಬಾಗಿಲು ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಗೆ ಬಂಡಾಯದ ಸ್ವಾಗತ
    ಸಮಾವೇಶದಿಂದ ದೂರವುಳಿದ ಕೆ.ಎಚ್.ಮುನಿಯಪ್ಪ ಮತ್ತು ಬೆಂಬಲಿಗರು

ಕಾಂಗ್ರೆಸ್ ಘಟಬಂಧನ್ ವಿರುದ್ದ ಈಗಾಗಲೇ ಬಹಿರಂಗವಾಗಿಯೇ ಬಂಡಾಯವೆದ್ದಿರುವ ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಲವಂತಕ್ಕೂ ಬಗ್ಗದೇ ಮುಳಬಾಗಿಲಿನ ಪ್ರಜಾಧ್ವನಿ ಸಮಾವೇಶದಿಂದ ದೂರ ಉಳಿಯುವ ಮೂಲಕ ಬಂಡಾಯದ ಬಾವುಟ ಹಾರಿಸಿದರು.

ಪ್ರಜಾಧ್ವನಿ ಸಮಾವೇಶಕ್ಕೆ ಬೆಂಗಳೂರಿನಿಂದ ಬಂದ ಕೆಪಿಸಿಸಿ ಅಧ್ಯಕ್ಷರ ತಂಡವನ್ನು ನಗರದ ಬೈಪಾಸ್‌ನ ಪವನ್ ಕಾಲೇಜು ಸಮೀಪ ಕೆ.ಎಚ್.ಮುನಿಯಪ್ಪ ನೇತೃತ್ವದಲ್ಲಿ ನೂರಾರು ಮಂದಿ ಬೆಂಬಲಿಗರು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಪ್ರಜಾಧ್ವನಿ ವಾಹನದಿಂದ ಕೆಳಗಿಳಿದ ಡಿ.ಕೆ.ಶಿವಕುಮಾರ್ ಅವರು ಕೆ.ಎಚ್.ಮುನಿಯಪ್ಪ ಅವರನ್ನು ಪ್ರಜಾಧ್ವನಿ ಯಾತ್ರೆಗೆ ಆಗಮಿಸಲು ಕೋರಿದರಾದರೂ ಅದಕ್ಕಿ ಅವರು ನಿರಾಕರಿಸಿದರು.

ಘಟಬಂಧನ್‌ನ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಜತೆ ವೇದಿಕೆ ಹಂಚಿಕೊಳ್ಳಲು ನಿರಾಕರಿಸಿದ ಕೆ.ಎಚ್.ಮುನಿಯಪ್ಪ ಮುಳಬಾಗಿಲಿನ ಸಮಾವೇಶಕ್ಕೆ ಬರುವುದಿಲ್ಲ ಎಂದು ಪಟ್ಟು ಹಿಡಿದರಾದರೂ, ಡಿಕೆಶಿ ಬಲವಂತದಿಂದ ಅವರನ್ನು ಪ್ರಜಾಧ್ವನಿ ಬಸ್ಸಿಗೆ ಹತ್ತಿಸಿಕೊಂಡರು.

ಪ್ರಜಾಧ್ವನಿ ಬಸ್ಸು ಹತ್ತಿದ ಕೆ.ಎಚ್.ಮುನಿಯಪ್ಪ ಸಮಾವೇಶದಲ್ಲಿ ಭಾಗಿಯಾಗುತ್ತಾರೆ ಎಂದೇ ಎಲ್ಲಾ ಕಾಂಗ್ರೆಸ್ ಮುಖಂಡರು ನಂಬಿದ್ದರು. ಆದರೆ ಕುರುಡುಮಲೆಯಲ್ಲಿ ಗಣಪತಿಗೆ ಸಲ್ಲಿಸಿದ ಪೂಜೆಯಲ್ಲಿ ಪಾಲ್ಗೊಂಡ ಕೆ.ಎಚ್.ಮುನಿಯಪ್ಪ ನಂತರ ಸಮಾವೇಶಕ್ಕೆ ಹೋಗದೇ ಕೋಲಾರಕ್ಕೆ ವಾಪಸ್ಸಾದರು.

ಕೆ.ಎಚ್.ಮುನಿಯಪ್ಪ ವಾಪಸ್ಸಾಗುತ್ತಿದ್ದಂತೆ ಕೋಲಾರ ಮತ್ತು ಮುಳಬಾಗಿಲಿನ ಕೆ.ಎಚ್.ಮುನಿಯಪ್ಪ ಬೆಂಬಲಿಗರು ಸಮಾವೇಶದಿಂದ ದೂರ ಉಳಿಯುವ ಮೂಲಕ ಕೋಲಾರದಲ್ಲಿನ ಕಾಂಗ್ರೆಸ್ ಭಿನ್ನಮತ ಬೂದಿಮುಚ್ಚಿದ ಕೆಂಡದಂತಿದೆ ಎಂಬುದನ್ನು ಸಾಕ್ಷೀಕರಿಸಿದಂತಾಯಿತು.

ಈ ನಡುವೆ ಕೋಲಾರ ಕಾಂಗ್ರೆಸ್ ಉಸ್ತುವಾರಿ ನಾರಾಯಣಸ್ವಾಮಿ ಹಾಗೂ ಡಿಕೆಶಿ ಭಿನ್ನಮತ ಪರಿಹರಿಸಿ ಕೆ.ಎಚ್.ಮುನಿಯಪ್ಪ ಅವರನ್ನು ಮುಳಬಾಗಿಲಿಗೆ ಕರೆದೊಯ್ಯುವ ಒತ್ತಡದ ಪ್ರಯತ್ನವೂ ವಿಫಲವಾಯಿತು.

ಆದರೆ ಸಂಜೆ ಕೆಜಿಎಫ್‌ ನಲ್ಲಿ ಮಗಳು ರೂಪಕಲಾ ನೇತೃತ್ವದ ಪ್ರಜಾಧ್ವನಿ ಕಾರ್ಯಕ್ರಮಕ್ಕೆ ಕೆ.ಎಚ್.ಮುನಿಯಪ್ಪ ಹಾಜರಾಗುವ ಮೂಲಕ ತಮ್ಮ ಕೋಪ ಘಟಬಂಧನ್‌ ವಿರುದ್ಧ ಮಾತ್ರ ಕಾಂಗ್ರೆಸ್‌ ಪಕ್ಷ ಹಾಗೂ ಮಗಳ ವಿರುದ್ಧ ಇಲ್ಲ ಎಂಬುದನ್ನೂ ಸಾಬೀತುಪಡಿಸಿದರು.

ಹಣ ಕಳೆದುಕೊಂಡ
ಕಾಂಗ್ರೆಸ್ ಮುಖಂಡ
ಡಿಕೆಶಿ ನೇತೃತ್ವದ ಪ್ರಜಾಧ್ವನಿ ತಂಡವನ್ನು ನಗರದ ಬೈಪಾಸ್‌ನಲ್ಲಿ ಸ್ವಾಗತಿಸಲು ಕಾಂಗ್ರೆಸ್‌ನ ಕೆ.ಎಚ್.ಮುನಿಯಪ್ಪ ಬಣದ ನೂರಾರು ಮಂದಿಜಮಾಯಿಸಿದ್ದರು. ಈ ಸಂದರ್ಭದಲ್ಲಿ ಸ್ವಾಗತಿಸುವ ಭರದಲ್ಲಿನ ನೂಕಾಟದಲ್ಲಿ ಕಾಂಗ್ರೆಸ್ ಮುಖಂಡ ಗಂಗಮ್ಮನಪಾಳ್ಯದ ರಾಮಯ್ಯ ಅವರ ಜೇಬಿಗೆಕತ್ತರಿ ಬಿದ್ದಿದ್ದು, ಕಿಸೆಗಳ್ಳಲು ೩೪ ಸಾವಿರ ರೂ ದೋಚಿದ್ದಾರೆ.
ಪ್ರಜಾಧ್ವನಿ ಯಾತ್ರೆಯಿಂದ ಕೆ.ಎಚ್.ಮುನಿಯಪ್ಪ ಬೆಂಬಲಿಗರಾದ ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಜಿಲ್ಲಾ ಎಸ್ಸಿಘಟಕದ ಅಧ್ಯಕ್ಷ ಕೆ.ಜಯದೇವ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಪ್ರಸಾದ್‌ಬಾಬು, ಉದಯಶಂಕರ್, ರಾಮಲಿಂಗಾರೆಡ್ಡಿ, ಗಂಗಮ್ಮನಪಾಳ್ಯದ ರಾಮಯ್ಯ,ಕಾರ್ಗಿಲ್ ವೆಂಕಟೇಶ್, ಸುಭಾಷ್‌ಗೌಡ, ಮಾರಪ್ಪ ಸೇರಿದಂತೆ ಮುಳಬಾಗಿಲಿನ ಹಲವಾರು ಮುಖಂಡರು ದೂರ ಉಳಿದರು.

ಸುದ್ದಿ ಓದಿ ಹಂಚಿ:

Related Post

ಶೇ.೯೦ ರಷ್ಟು ದೇಶದ ಸಮುದಾಯಗಳು ಮುಖ್ಯವಾಹಿನಿ ಮಾದ್ಯಮಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಮತ್ತು ಅತ್ಯುನ್ನತ ಸರ್ಕಾರಿ ಹುದ್ದೆಗಳಲ್ಲಿ ಭಾಗವಹಿಸುವಿಕೆ ಇಲ್ಲ! : ರಾಹುಲ್ ಗಾಂಧಿ
ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿವೆ : ಸಮುದಾಯ ಮುಖಂಡರ ಆಕ್ರೋಶ,
ಸಂವಿಧಾನ ಉಳಿಸಲು ದೇಶದ ಸಮಗ್ರತೆ ಕಾಪಾಡಲು ಬಿಜೆಪಿಯನ್ನು ಸೋಲಿಸಿ: ಮಂಜುನಾಥ್ ಅಣ್ಣಯ್ಯ

Leave a Reply

Your email address will not be published. Required fields are marked *

You missed

error: Content is protected !!