• Tue. Sep 10th, 2024

PLACE YOUR AD HERE AT LOWEST PRICE

ಬಂಗಾರಪೇಟೆ ಪಟ್ಟಣದಿಂದ ಆಂದ್ರಪ್ರದೇಶದ ವಿಶಾಖಪಟ್ಟಣಂಗೆ ಅಕ್ರಮವಾಗಿ ಲಗೇಜ್ ಬ್ಯಾಗಿನಲ್ಲಿ ಸಾಗಿಸುತ್ತಿದ್ದ ಮದ್ಯದ ಬಾಟಲ್‍ಗಳನ್ನು ಅಬಕಾರಿ ಪೊಲೀಸರು ದಾಳಿ ಮಾಡಿ ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ಆಂದ್ರಪ್ರದೇಶದ ಪ್ರಶಾಂತ್ ಎಂದು ಗುರುತಿಸಲಾಗಿದೆ.ಪಟ್ಟಣದ ಬಸ್ ನಿಲ್ದಾಣದಲ್ಲಿ ಲಗೇಜ್ ಬ್ಯಾಗಿನಲ್ಲಿ ಯಾರಿಗೂ ಅನುಮಾನ ಬಾರದಂತೆ 30ಸಾವಿರ ಮೌಲ್ಯದ 46.5 ಲೀಟರ್ ಮದ್ಯವನ್ನು ಸಾಗಿಸುತ್ತಿದ್ದಾಗ ಅಬಕಾರಿ ಪೊಲೀಸರಿಂದ ಬಂಧನವಾಗಿದೆ.
ಅಬಕಾರಿ ಅಧಿಕಾರಿಗಳಿಗೆ ಬಂದ ಖಚಿತ ಮಾಹಿತಿ ಮೇರೆಗೆ ಅಬಕಾರಿ ಉಪ ಆಯುಕ್ತರು ಕೋಲಾರ ರವರ  ಮಾರ್ಗದರ್ಶದಲ್ಲಿ ವಿಶ್ವನಾಥಬಾಬು ಅಬಕಾರಿ ಉಪ ಅಧೀಕ್ಷಕರು ಕೆಜಿಎಫ್ ರವರ ನಿರ್ದೇಶನದಂತೆ ಅರುಣ್ ಕುಮಾರ್ ಅಬಕಾರಿ ನಿರೀಕ್ಷಕರು ಮತ್ತು ರವೀಂದ್ರ ಅಬಕಾರಿ ಉಪನಿರೀಕ್ಷರು ರವರ ನೇತೃತ್ವದಲ್ಲಿ ದಾಳಿ ಮಾಡಲಾಗಿತ್ತು.
ದಾಳಿ ವೇಳೆ ಆರೋಪಿಯನ್ನು ಮಾಲು ಸಮೇತ ವಶಕ್ಕೆ ಪಡೆಯಲಾಗಿದ್ದು, ದಾಳಿಯಲ್ಲಿ ಸಿಬ್ಬಂದಿಯಾದ
ಲಕ್ಷ್ಮಣ್,ಹನುಮಂತು ಮತ್ತು ಭರತ್ ಇದ್ದರು.
ಆಂದ್ರದಲ್ಲಿ ಮದ್ಯ ದುಬಾರಿಯಾಗಿರುವುದರಿಂದ ಮತ್ತು ರಾಜ್ಯದಲ್ಲಿ ಮದ್ಯ  ಕಡಿಮೆ ಬೆಲೆಗೆ ಸಿಗುವುದರಿಂದ ಇಲ್ಲಿಂದ ಅನಧಿಕೃತವಾಗಿ ಸಾಗಿಸಿ ಅಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಆರೋಪಿ ಪ್ರಶಾಂತ್ ಈ ಕೃತ್ಯದಲ್ಲಿ ತೊಡಗಿದ್ದ ಎನ್ನಲಾಗಿದೆ, ಅಬಕಾರಿ ಕಾಯ್ದೆ 1965 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಅಬಕಾರಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!