ಕೆಜಿಎಫ್
ಕೋಲಾರ
ತಾಲ್ಲೂಕು ಸುದ್ದಿ
ದೇಶ
ನಮ್ಮ ಕೋಲಾರ
ಪ್ರಪಂಚ
ಬಂಗಾರಪೇಟೆ
ಮಾಲೂರು
ಮುಳಬಾಗಿಲು
ರಾಜ್ಯ ಸುದ್ದಿ
ಶ್ರೀನಿವಾಸಪುರ
PLACE YOUR AD HERE AT LOWEST PRICE
ಬೇತಮಂಗಲ ಗ್ರಾಮದ ಬಸ್ ನಿಲ್ಧಾಣದಲ್ಲಿ ನೂರಾರೂ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಕ್ರೇನ್
ಮೂಲಕ ಬೃಹತ್ ಹೂವಿನ ಹಾರ ಹಾಕುವ ಮೂಲಕ ಆದ್ದೂರಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ
ಸ್ವಾಗತ ಕೋರಿದರು.
ಮುಳಬಾಗಿಲಿನಲ್ಲಿ ಪ್ರಜಾಧ್ವನಿ ಕಾರ್ಯಕ್ರಮವನ್ನು ಮುಗಿಸಿ ಕೆಜಿಏಫ್ ಕ್ಷೇತ್ರದ ಕಾರ್ಯಕ್ರಮಕ್ಕೆ ಆಗಮನಿಸುವ ವೇಳೆ ಬೇತಮಂಗಲದಲ್ಲಿ ಗ್ರಾಮಾಂತರ ಭಾಗದ ಕಾಂಗ್ರೆಸ್ ಮುಖಂಡರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು
ಸೇರಿದಂತೆ ನೂರಾರೂ ಅಭಿಮಾನಿಗಳು ಆದ್ದೂರಿಯಾಗಿ ಸ್ವಾಗತಿಸಿದರು.
ಮದ್ಯಾಹ್ನದಿಂದಲ್ಲೇ ಡಿ.ಕೆ.ಶಿವಕುಮಾರ್ ಆಗಮನಕ್ಕಾಗಿ ಕಾಯುತ್ತಿದ್ದು ಬೃಹತ್ ಹಾರ ಹಾಗೂ ತಮಟೆ ವಾದ್ಯ ಹಾಗೂ ಪಟಾಕಿಗಳೊಂದಿಗೆ ಭರ ಮಾಡಿಕೊಂಡ ಕಾಂಗ್ರೆಸ್ ಕಾರ್ಯಕರ್ತರು ಡಿ.ಕೆ, ಡಿ.ಕೆ ಎಂಬ ಘೋಷಣೆಗಳಿಂದ
ಸಂಭ್ರಮಿಸಿದರು.
ಗ್ರಾಮಾಂತರ ಭಾಗದ ಕಾಂಗ್ರೆಸ್ ಮುಖಂಡರಾದ ಅ.ಮು.ಲಕ್ಷ್ಮೀನಾರಾಯಣ್, ದುರ್ಗಾಪ್ರಸಾದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಕೃಷ್ಣರೆಡ್ಡಿ, ರಾಂಬಾಬು, ವಿಜಯ್ ಶಂಕರ್, ಕಮ್ಮಸಂದ್ರ ನಾಗರಾಜ್, ರಾಮಚಂದ್ರ, ವಿನು
ಕಾರ್ತಿಕ್, ನಲ್ಲೂರು ಶಂಕರ್, ರಾಜಣ್ಣ ಸೇರಿದಂತೆ ಅನೇಕರು ಸ್ವಾಗತ ಕೋರಿದರು.