ನಮ್ಮ ಸುದ್ದಿ ಡಾಟ್ ನೆಟ್ ಆರಂಭವಾಗಿ ಸರಿಯಾಗಿ ಒಂದು ತಿಂಗಳು ಪೂರ್ಣಗೊಂಡಿದೆ. ಈ ಅವಧಿಯಲ್ಲಿ ಸರಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಮಂದಿ ವೆಬ್‌ಸೈಟ್‌ನ ಸುದ್ದಿ ಓದಿದ್ದಾರೆಂದು ಘೋಷಿಸಲು ಸಂತೋಷವಾಗುತ್ತದೆ.
ಅಕ್ಷರದವ್ವ ಸಾವಿತ್ರಿಬಾಯಿ ಪುಲೆ ಹುಟ್ಟು ಹಬ್ಬದ ದಿನ ಕೋಲಾರದ ಪತ್ರಕರ್ತರ ಭವನದಲ್ಲಿ ಜರುಗಿದ ಸಣ್ಣ ಕಾರ್ಯಕ್ರಮದಲ್ಲಿ ನಮ್ಮ ಸುದ್ದಿ ಡಾಟ್ ನೆಟ್ ಹುಟ್ಟಿತು. ಮೂವತ್ತು ದಿನಗಳ ಕಳೆಯುವುದರೊಳಗಾಗಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಜನ ನಿರೀಕ್ಷೆಗೂ ಮೀರಿ ನಮ್ಮ ಸುದ್ದಿಯನ್ನು ನಮ್ಮದೇ ಸುದ್ದಿಯೆಂದು ಭಾವಿಸಿ ಓದಿದ್ದಾರೆ.
ಕೋಲಾರದ ನೆಲದಿಂದ ಸುದ್ದಿಗಾಗಿಯೇ ವೆಬ್‌ಸೈಟ್ ಆರಂಭಿಸಬೇಕು ಹಾಗೂ ಜನಸಾಮಾನ್ಯರ ಮಾದ್ಯಮವಾಗಿ ಅರಳಿ ಮರದಂತಿರುವ ಈದಿನ ಡಾಟ್‌ಕಾಮ್‌ನ ಬಿಳಿಲಾಗಬೇಕೆಂಬ ಉದ್ದೇಶದಿಂದ ನಮ್ಮಸುದ್ದಿ ಡಾಟ್‌ನೆಟ್ ಅನ್ನು ಆರಂಭಿಸಲಾಗಿತ್ತು. ವೆಬ್‌ಸೈಟ್ ಯಾರ ಪರವೂ ಅಲ್ಲ ವಿರುದ್ಧವೂ ಅಲ್ಲ ಜನ ಸಾಮಾನ್ಯರ ಧ್ವನಿ ಎಂಬುದರ ಆಶಯವನ್ನು ಹೊತ್ತಿರಬೇಕೆಂಬ ಧ್ಯೇಯ ಸಂಕಲ್ಪ ತೊಟ್ಟು ಕೆಲಸ ಮಾಡುತ್ತಿದೆ.
ನಮ್ಮ ಸುದ್ದಿ ಡಾಟ್ ನೆಟ್ ವೆಬ್‌ಸೈಟ್‌ಗೆ ನಿತ್ಯವೂ ನಾಲ್ಕೈದು ಸಾವಿರ ಮಂದಿ ಭೇಟಿ ನೀಡಿ ಸುದ್ದಿ ಓದುತ್ತಿದ್ದಾರೆ. ಇದನ್ನು ಕನಿಷ್ಠ ಹತ್ತು ಸಾವಿರಕ್ಕೇರಿಸಬೇಕೆಂಬುದು ನಮ್ಮ ಗುರಿಯಾಗಿದೆ. ನಮ್ಮಸುದ್ದಿ ಡಾಟ್ ನೆಟ್ ಜನರ ಬಳಿಗೆ ಬಿಟ್ಟಿರುವ ಎರಡು ಸರ್ವೆಗಳಿಗೆ ಹತ್ತಾರು ಸಾವಿರ ಮಂದಿ ಸ್ಪಂದಿಸಿ ಓಟು ಚಲಾಯಿಸಿ ತಮ್ಮ ಅಭಿಪ್ರಾಯವನ್ನು ದಾಖಲಿಸಿದ್ದಾರೆ.
ಕೋಲಾರ ನಗರದಲ್ಲಿ ಜರುಗಿದ ಕಾಂಗ್ರೆಸ್ ಪ್ರಜಾಧ್ವನಿ ಕಾರ್ಯಕ್ರಮದ ಸುದ್ದಿಯನ್ನು ಅತಿಥಿಗಳು ಭಾಷಣ ಮಾಡಿ ಮುಗಿಸುತ್ತಿದ್ದಂತೆ ವೆಬ್‌ಸೈಟ್‌ನಲ್ಲಿ ಫೋಟೋ ಸಮೇತ ಅಪ್‌ಲೋಡ್ ಆಗಿದ್ದನ್ನು ಪತ್ರಕರ್ತ ಮಿತ್ರರೂ, ಓದುಗರು, ರಾಜಕಾರಣಿಗಳು ಮೆಚ್ಚಿಕೊಂಡಿದ್ದಾರೆ. ಬಹಳಷ್ಟು ಸುದ್ದಿಗಳನ್ನು ಮೊದಲಿಗೆ ಓದುಗರಿಗೆ ತಲುಪಿಸಿದ್ದೇವೆ. ನಮಗಿರುವ ಸೀಮಿತ ಸೌಲಭ್ಯಗಳಲ್ಲಿಯೇ ಅತ್ಯುತ್ತಮವಾದುದನ್ನು ನೀಡಿದ ಹೆಮ್ಮೆ ನಮಗೂ ಇದೆ.
ನಮ್ಮ ಸುದ್ದಿ ಡಾಟ್ ನೆಟ್‌ಗೆ ಕೇವಲ ಒಂದು ತಿಂಗಳ ಅವಧಿಯಲ್ಲಿ ಸಿಕ್ಕಿರುವ ಸ್ವಾಗತಕ್ಕೆ ಉಬ್ಬಿ ಹೋಗದೆ ಮತ್ತಷ್ಟು ಜವಾಬ್ದಾರಿಯಿಂದ ಕೆಲಸ ಮಾಡುವ ಸಂಕಲ್ಪ ನಮ್ಮದಾಗಿದೆ. ಚುನಾವಣೆಯ ಹೊತ್ತಿನಲ್ಲಿ ಯಾವ ಅಭ್ಯರ್ಥಿ, ಯಾವುದೇ ರಾಜಕೀಯ ಪಕ್ಷದ ಪರವಾಗಿ ವಿರುದ್ಧವಾಗಿ ನಿಲ್ಲದೆ ಎಲ್ಲರ ಸುದ್ದಿಯೂ ನಮಗೆ ಒಂದೇ ಎಂಬ ಜನಸಾಮಾನ್ಯರ ದೃಷ್ಠಿಕೋನದಿಂದ ನಮ್ಮ ಸುದ್ದಿ ಕೆಲಸ ಮಾಡುವುದನ್ನು ರೂಢಿ ಮಾಡಿಕೊಳ್ಳುತ್ತಿದೆ.
ನಮ್ಮ ಸುದ್ದಿ ಡಾಟ್ ನೆಟ್ ಅನ್ನು ಜನಸಾಮಾನ್ಯರ ವೆಬ್‌ಸೈಟ್ ಆಗಿ ಕೆಲಸ ಮಾಡಬೇಕಾದರೆ ಆರ್ಥಿಕ ಸಹಕಾರ ಅತ್ಯಗತ್ಯ. ಇದುವರೆವಿಗೂ ನಮ್ಮದೇ ದುಡಿಮೆಯ ಆದಾಯವನ್ನು ವೆಬ್‌ಸೈಟ್‌ಗೆ ಸುರಿದಿದ್ದೇವೆ. ನಮ್ಮ ಸುದ್ದಿ ಡಾಟ್ ನೆಟ್ ಅನ್ನು ನಿಮ್ಮೆಲ್ಲರ ಸುದ್ದಿಯಾಗಿ ಮುನ್ನಡೆಸಬೇಕಾದರೆ ಆರ್ಥಿಕ ನೆರವು ಅಗತ್ಯ. ಸುದ್ದಿಗಾಗಿ ಕಾಸನ್ನು ನಾವು ಇದುವರೆವಿಗೂ ಕೇಳಿಲ್ಲ, ಮುಂದೆಯೂ ಕೇಳುವುದಿಲ್ಲ.
ಸದ್ಯಕ್ಕೆ ನಿತ್ಯವೂ ನಾಲ್ಕೈದು ಸಾವಿರ ಮಂದಿಯನ್ನು ತಲುಪುತ್ತಿರುವ ನಮ್ಮಸುದ್ದಿ ಡಾಟ್ ನೆಟ್ ಅತ್ಯುತ್ತಮ ಜಾಹೀರಾತು ಮಾದ್ಯಮವಾಗಿದೆ. ಸುದ್ದಿ ಓದಿದವರು ವೆಬ್‌ಸೈಟ್‌ಗೆ ಸುಲಭ ದರದಲ್ಲಿ ಜಾಹೀರಾತು ನೀಡಿ ವೆಬ್‌ಸೈಟ್ ಮುನ್ನಡೆಗೆ ಸಹಕರಿಸಿ ಎಂದಷ್ಟೇ ಕೇಳುತ್ತಿದ್ದೇವೆ. ವೆಬ್‌ಸೈಟ್ ಅನ್ನು ವೀಡಿಯೋ ಸುದ್ದಿಗಳ ಮೂಲಕವೂ ಪರಿಪೂರ್ಣಗೊಳಿಸುವ ಗುರಿ ಇಟ್ಟುಕೊಂಡಿದ್ದೇವೆ.
ನಮ್ಮಸುದ್ದಿ ಡಾಟ್ ನೆಟ್ ಓದುಗ ಬಳಗಕ್ಕೆ ಧನ್ಯವಾದಗಳು…
ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಸಹಕಾರ ಹೀಗೆ ಮುಂದುವರೆಯಲಿ ಎಂದು ಆಶಿಸುತ್ತಾ…
ಕೆ.ಎಸ್.ಗಣೇಶ್ – 94483 11003
ಸಿ.ವಿ.ನಾಗರಾಜ್ – 9632188872
ಕೆ.ರಾಮಮೂರ್ತಿ – 9449675480