• Fri. Apr 26th, 2024

ಸ್ವಾರ್ಥಪರ ದಲಿತ ಮುಖಂಡರು ಅಮಾಯಕ ದಲಿತ ಸಮುದಾಯವನ್ನು ದಿಕ್ಕು ತಪ್ಪಿಸುತ್ತಿದ್ದಾರೆ,ಅಂತಹ ನಾಯಕರನ್ನು ನಂಬಬೇಡಿ ವರ್ತೂರ್ ಪ್ರಕಾಶ್ ಕರೆ

PLACE YOUR AD HERE AT LOWEST PRICE

 

ಜಿಲ್ಲೆಯಲ್ಲಿ ಕೆಲವು ಸ್ವಾರ್ಥಪರ ದಲಿತ ಮುಖಂಡರು ಅಮಾಯಕ ದಲಿತ ಸಮುದಾಯವನ್ನು ದಿಕ್ಕು ತಪ್ಪಿಸುತ್ತಿದ್ದಾರೆ, ಸುಖಾಸುಮ್ಮನೆ ಬಿಜೆಪಿ ಪಕ್ಷದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಪಕ್ಷ ದಲಿತರಿಗೆ ದ್ರೋಹ ಬಗೆಯುತ್ತಿದೆ ಎಂದು ಹೇಳುತ್ತಾ, ಅವರು ಮಾತ್ರ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಅವರೊಂದಿಗೆ ಶ್ಯಾಮೀಲಾಗಿ ಹಣ ಮಾಡುವ ದಂದೆ ನಡೆಸುತ್ತಿದ್ದಾರೆ ಅಂತಹ ಡೋಂಗಿ ನಾಯಕರನ್ನು ನಂಬಬೇಡಿ ಎಂದು ಮಾಜಿ ಸಚಿವ ವರ್ತೂರ್ ಪ್ರಕಾಶ್ ಕರೆ ನೀಡಿದರು

ನಗರದ ಹೊರವಲಯದಲ್ಲಿರುವ ಕೋಗಿಲಹಳ್ಳಿ ನಿವಾಸದ ಬಳಿ ಗುರುವಾರ ಕೋಲಾರ ನಗರದಲ್ಲಿ ನಡೆಯಲಿರುವ ಬಿಜೆಪಿ ಎಸ್ ಸಿ ಸಮಾವೇಶದ ಪೂರ್ವಬಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನ ಬೆಂಬಲಿಸಿದರೆ ಸಂಸದ ಮುನಿಸ್ವಾಮಿರವರು ಕೇಂದ್ರ ಮಂತ್ರಿ ಆಗುವ ಸಾಧ್ಯತೆಗಳು ಹೆಚ್ಚಾಗಿದೆ. ದೇಶದಲ್ಲಿ ಅತಿ ಹೆಚ್ಚು ದಲಿತರು ಇರುವ ಲೋಕಸಭಾ ಕ್ಷೇತ್ರ ನಮ್ಮ ಕೋಲಾರ ಲೋಕಸಭಾ ಕ್ಷೇತ್ರವಾಗಿದೆ. ದೇಶದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ದಲಿತರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ತಂದಿದ್ದಾರೆ.

ದಲಿತರು ಈ ಯೋಜನೆಗಳನ್ನು ಉಪಯೋಗಿಸಿಕೊಂಡು ಆರ್ಥಿಕತೆಯಲ್ಲಿ ಮುಂದೆ ಬರುವ ಸಂದರ್ಭದಲ್ಲಿ, ಕಾಂಗ್ರೆಸ್ ಪಕ್ಷದವರು ದಲಿತರಿಗೆ ಸುಳ್ಳು ಹೇಳಿ ದಿಕ್ಕು ತಪ್ಪಿಸುತ್ತಿದ್ದಾರೆ, ಕಾಂಗ್ರೆಸ್ ಪಕ್ಷಕ್ಕೆ ದಲಿತರು ಮುಂದೆ ಬರುವುದು ಇಷ್ಟವಿಲ್ಲ, ಅವರು ದಲಿತರನ್ನ ಮತ ಬ್ಯಾಂಕ್ ಆಗಿ ಉಪಯೋಗಿ ಸಿಕೊಳ್ಳುತ್ತಿದ್ದಾರೆ ಹೊರತು ದಲಿತರ ಅಭಿವೃದ್ಧಿಗೆ ಏನೂ ಮಾಡಿಲ್ಲ ಎಂದರು.

ಸಂಸದ ಎಸ್. ಮುನಿಸ್ವಾಮಿ ಮಾತನಾಡಿ, ಕಾಂಗ್ರೆಸ್ ಪಕ್ಷ ೬೦ ವರ್ಷಗಳಿಂದ ದಲಿತರನ್ನು ತುಳಿಯುತ್ತಾ ಬಂದಿದೆ. ಇತ್ತೀಚೆಗೆ ಮುಸ್ಲಿಮರನ್ನು ಸಹ ತುಳಿಯುತ್ತಾ ಬಂದಿದೆ,ಇತ್ತೀಚೆಗೆ ನಗರದಲ್ಲಿ ಮುಸಲ್ಮಾರು ಸಮಾವೇಶದಲ್ಲಿ ಸಿದ್ದರಾಮಯ್ಯ ನವರು ಕೋಲಾರಕ್ಕೆ ಬಂದರೆ ಹಲಾಲ್ ಮಾಡುತ್ತೇವೆ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷದ ಕಳ್ಳಾಟದ ಚಟುವಟಿಕೆಗಳು ಜನಕ್ಕೆ ಗೊತ್ತಿದೆ ಎಂದ ಅವರು, ಸಿದ್ದರಾಮಯ್ಯನವರೇ, ೨೦೦೮ರಲ್ಲಿ ಕೋಲಾರದಲ್ಲಿ ಅಹಿಂದ ಸಮಾವೇಶ ನಡೆದಾಗ ನಾವೆಲ್ಲಾ ಕಾಂಗ್ರೆಸ್ ಪಕ್ಷದಲ್ಲೇ ಇದ್ದವರು. ಅಹಿಂದ ಸಮಾಜದಲ್ಲಿ ಮತ್ತೊಬ್ಬರು ಬೆಳೆಯಬಾರದು ಎಂದು ಉದ್ದೇಶದಿಂದ ನೀವು ನೀವು ದೊಡ್ಡ ದೊಡ್ಡವರನ್ನೇ ತುಳಿದು ಹಾಕಿದಿರಿ. ಈಗ ನಿಮಗೆ ಬುದ್ಧಿ ಕಲಿಸಲಿಕ್ಕೆ ನಮಗೆ ಒಳ್ಳೆಯ ಅವಕಾಶ ಸಿಕ್ಕಿದೆ, ಕೋಲಾರಕ್ಕೆ ಬನ್ನಿ.. ನೀವು ಏನೇ ಮಾಡಿದರು ಕೋಲಾರ ಜನತೆ ನಿಮ್ಮನ್ನ ಮನೆಗೆ ಕಳುಹಿಸುತ್ತಾರೆ ಎಂದರು.

ಸಿದ್ದರಾಮಯ್ಯನವರು ತಮ್ಮ ತವರು ಮನೆಯಲ್ಲೇ ಸೋತು ಹೋಗಿದ್ದಾರೆ, ಇನ್ನು ನಮ್ಮ ಮನೆಗೆ ಬಂದರೆ ಗೆಲ್ಲಕ್ಕಾಗುತ್ತಾ? ಇನ್ನೇನಿದ್ದರೂ ಸಿದ್ದರಾಮಯ್ಯನವರ ನಡೆ ಮನೆಯ ಕಡೆ, ಅವರು ಮುಂದಿನ ದಿನಗಳಲ್ಲಿ ಮೊಮ್ಮಕ್ಕಳೊಂದಿಗೆ ಆಟ ಆಡಿಕೊಂಡಿರಬೇಕಷ್ಟೆ ಎಂದು ವ್ಯಂಗ್ಯವಾಡಿದರು.

ವರ್ತೂರ್ ಪ್ರಕಾಶ್ ಗೆಲ್ಲುವುದು ನಿಜ ಸಚಿವರಾಗುವುದು ನಿಜ ಕೋಲಾರ ಜಿಲ್ಲೆಯ ದಲಿತರನ್ನ ೬೦ ವರ್ಷಗಳಿಂದ ಯಾಮಾರಿಸಿದ್ದು ಸಾಕು, ಈಗ ನಾವು ಬಂದಿದ್ದೇವೆ ನಾವು ಅವರನ್ನು ಆರ್ಥಿಕತೆಯಿಂದ ಅಭಿವೃದ್ಧಿ ಹೊಂದಲು ಹಲವಾರು ಯೋಜನೆಗಳನ್ನ ರೂಪಿಸಿದ್ದೇವೆ. ಅದನ್ನು ಕಾರ್ಯರೂಪಕ್ಕೆ ತಂದು ಅಭಿವೃದ್ಧಿಪಡಿಸುವುದು ನಮ್ಮ ಗುರಿ ಎಂದು ತಿಳಿಸಿದರು

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಸಿಎಸ್ ವೆಂಕಟೇಶ್, ಬಿಜೆಪಿ ಜಿಲ್ಲಾಧ್ಯಕ್ಷ ವೇಣುಗೋಪಾಲ್, ಸದಸ್ಯರಾದ ಅರುಣ್ ಪ್ರಸಾದ್, ತಾಲೂಕು ಅಧ್ಯಕ್ಷ ಸೂಲೂರು ಆಂಜನಪ್ಪ, ಸಿ.ಡಿ.ರಾಮಚಂದ್ರಗೌಡ, ಕ್ಯಾಲನೂರು ಜಿಲ್ಲಾ ಪಂಚಾಯತ್ ಸದಸ್ಯ ವೆಂಕಟೇಶ್ ಗೌಡ, ನಗರಸಭಾ ಸದಸ್ಯ ಪ್ರವೀಣ್ ಗೌಡ, ಮುಖಂಡ ಜನಾರ್ದನ್, ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!