• Wed. May 1st, 2024

ಕೋಲಾರ I ಹಗ್ಗ ಕಡಿದು ಕೆಳಕ್ಕೆ ಬಿದ್ದು ಬಣ್ಣದ ಕಾರ್ಮಿಕ ಸಾವು

PLACE YOUR AD HERE AT LOWEST PRICE

ಕೋಲಾರ ತಾಲೂಕಿನ ವಕ್ಕಲೇರಿ ಗ್ರಾಮದಲ್ಲಿ ಹಳೆಯ ಕಟ್ಟಡವೊಂದರಲ್ಲಿ ಪೈಂಟಿಂಗ್ ಕೆಲಸ ಮಾಡುತ್ತಿದ್ದಾಗ ಕಟ್ಟಡದ ಮೇಲಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಪಾರ್ಶ್ವಗಾನಹಳ್ಳಿ ನಿವಾಸಿ ರಾಜಪ್ಪ ಎಂಬ ಕಟ್ಟಡ ಕಾರ್ಮಿಕ ಗುರುವಾರ ಬೆಳಿಗ್ಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮೊನ್ನೆ ಮಂಗಳವಾರ ಬೆಳಿಗ್ಗೆ 9-30 ರ ಸಮಯದಲ್ಲಿ ವಕ್ಕಲೇರಿ ಗ್ರಾಮದಲ್ಲಿ ಹಳೆಯ ಕಟ್ಟಡವೊಂದರ ಹೊರ ಭಾಗದ ಗೋಡೆಗೆ ಪೈಂಟಿಂಗ್ ಮಾಡಲು ಹಗ್ಗದ ಸಹಾಯದಿಂದ ಪ್ಲೈನ್ ಇಳಿದಿದ್ದರು. ಪ್ಲೈನ್ ಬಿಟ್ಟಿದ್ದ ಹಗ್ಗ ಮತ್ತು ಕಾರ್ಮಿಕ ಕುಳಿತಿದ್ದ ಮರದ ಹಲಗೆಗೆ ಕಟ್ಟಿದ್ದ ಹಗ್ಗ ತುಂಡಾಗಿ ಕಾರ್ಮಿಕ ಕಾಂಪೌಂಡ್ ಮೇಲೆ ಬಿದ್ದಿದ್ದಾನೆ. ಕಾಂಪೌಂಡ್ ಮೇಲೆ ಇರಿಸಿದ್ದ ಚೂಪಾದ ಕಬ್ಬಿಣದ ಗ್ರಿಲ್ ರಾಜಪ್ಪನ ಹೊಟ್ಟೆಯ ಎರಡು ಕಡೆ ತೀವ್ರವಾಗಿ ಗಾಯಗೊಳಿದೆ ಮತ್ತು ಕಾಲು ಮುರಿದಿದೆ.

ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಗ್ರಾಮಸ್ಥರ ನೆರವಿನಿಂದ ಆರ್.ಎಲ್‌.ಜಾಲಪ್ಪ ಆಸ್ಪತ್ರೆಗೆ ಸೇರಿಸಿದ್ದಾರೆ. ಅಂದು ರಾತ್ರಿ 5 ಗಂಟೆಗಳ ಕಾಲ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದರೂ ರಾಜಪ್ಪನನ್ನು ಬದುಕಲಿಲ್ಲ. ರಾಜಪ್ಪನಿಗೆ ಮೂವರು ಮಕ್ಕಳು, ಪತ್ನಿಯನ್ನು ಅಗಲಿದ್ದಾರೆ. ರಾಜಪ್ಪನ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಸಣ್ಣ ವಯಸ್ಸಿನವರು ಆಗಿದ್ದಾರೆ. ರಾಜಪ್ಪ ಪೈಂಟಿಂಗ್ ಕೆಲಸ ಮಾಡಿಕೊಂಡು ಕುಟುಂಬವನ್ನು ಪೋಷಣೆ ಮಾಡುತ್ತಿದ್ದ, ಇದೀಗ ರಾಜಪ್ಪನ ಸಾವಿನಿಂದ ಇಡೀ ಕುಟುಂಬ ಕಷ್ಟದಲ್ಲಿ ಕೈತೊಳೆಯುವಂತಾಗಿದೆ.

ರಾಜಪ್ಪನ ನಿಧನಕ್ಕೆ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಕೋಲಾರ ಜಿಲ್ಲಾ ಸಮಿತಿಯು ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಇತ್ತೀಚಿಗೆ ಕೋಲಾರದಲ್ಲಿ ಇಂತಹ ದುರ್ಘಟನೆಗಳು ಹೆಚ್ಚಾಗುತ್ತಿರುವುದು ಅತ್ಯಂತ ಕಳವಳಕಾರಿ ವಿಷಯವಾಗಿದೆ. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಕೆಲಸ ಮಾಡುವಾಗ ಸುರಕ್ಷರತೆ ಹೆಚ್ಚಿನ ಗಮನ ನೀಡಬೇಕಾಗಿದೆ.

 
 ಸುದ್ದಿ ಓದಿ ಹಂಚಿ:

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!