• Thu. Apr 25th, 2024

ಕೋಲಾರ I ವೇತನ ಪರಿಷ್ಕರಣೆಗಾಗಿ ೭ನೇ ವೇತನ ಆಯೋಗದ ಪ್ರಶ್ನೆಗಳಿಗೆ ಷಡಕ್ಷರಿ ಉತ್ತರ ಎನ್‌ಪಿಎಸ್ ರದ್ದುಗೊಳಿಸಿ ಹಳೆ ಪಿಂಚಣಿ ಜಾರಿ ಶಿಫಾರಸ್ಸಿಗೆ ನೌಕರಸಂಘ ಒತ್ತಾಯ

PLACE YOUR AD HERE AT LOWEST PRICE

ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಮತ್ತಿತರ ಅಂಶಗಳನ್ನೊಳಗೊಂಡ ೭ನೇ ವೇತನ ಆಯೋಗದ ಪ್ರಶ್ನಾವಳಿಗಳಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ನೇತೃತ್ವದಲ್ಲಿ ಅಗತ್ಯ ಮಾಹಿತಿಯೊಂದಿಗೆ ಉತ್ತರ ಸಲ್ಲಿಸಿದ್ದು, ರಾಜ್ಯದ ವಿವಿಧ ರಾಜ್ಯಗಳಲ್ಲಿ ಎನ್‌ಪಿಎಸ್ ಯೋಜನೆ ರದ್ದುಪಡಿಸಿರುವಂತೆ ರಾಜ್ಯದಲ್ಲೂ ರದ್ದುಗೊಳಿಸಿ ೧-೪-೨೦೦೬ರಿಂದ ಅನ್ವಯವಾಗುವಂತೆ ಹಳೆ ಪಿಂಚಣಿ ಯೋಜನೆ ಜಾರಿಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಮನವಿ ಮಾಡಲಾಗಿದೆ ಎಂದು ಕೋಲಾರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು, ವೇತನ ಆಯೋಗದ ಅಧ್ಯಕ್ಷರಾದ ಸುಧಾಕರರಾವ್ ಅವರು, ಕಳೆದ ಜ.೧೭ ರಂದು ಸರ್ಕಾರಿ ನೌಕರರ ವೇತನ ಭತ್ಯೆಗಳ ಪರಿಷ್ಕರಣೆ ಕುರಿತಂತೆ ಪ್ರಶ್ನಾವಳಿ ಬಿಡುಗಡೆ ಮಾಡಿದ್ದು, ಅದರಂತೆ ರಾಜ್ಯ ನೌಕರರ ಸಂಘ ಉತ್ತರ,ಅಭಿಪ್ರಾಯ ಮತ್ತು ಸಲಹೆಗಳನ್ನು ನೀಡಿದೆ ಎಂದು ತಿಳಿಸಿದ್ದಾರೆ.

ಹೊಸ ವೇತನ ಶ್ರೇಣಿ ರಚನೆಗೆ ಸಮಾನ ಕೆಲಸಕ್ಕೆ ಸಮಾನವೇತನ, ವಿದ್ಯಾರ್ಹತೆ, ಜವಾಬ್ದಾರಿಯ ಗುಣಮಟ್ಟ, ಕಾರ್ಯಕ್ಷಮತೆ, ಕಾರ್ಯಕ್ಷೇತ್ರದ ವ್ಯಾಪ್ತಿ, ನೆರೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ವೇತನ ಭತ್ಯೆಗಳ ಹೋಲಿಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಕಚೇರಿ ವೇಳೆ ಹೆಚ್ಚಿಸಿ, ವಾರದ ಕರ್ತವ್ಯ ೫ದಿನಕ್ಕೆ ಇಳಿಕೆ ಮಾಡುವುದು,ವೆಚ್ಚದಲ್ಲಿ ಆರ್ಥಿಕ ಮಿತವ್ಯಯ ಸಾಧಿಸಲು ಕೇಂದ್ರ ನೌಕರರಿಗಿರುವಂತೆ ಕಚೇರಿ ಸಮಯವನ್ನು ಬೆಳಗ್ಗೆ ೯-೩೦ ರಿಂದ ಸಂಜೆ ೬ ಗಂಟೆಯವರೆಗೂ ಬದಲಿಸಿ, ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರ ಸಾವ್ರತ್ರಿಕ ರಜೆ ನೀಡುವಂತೆ ಸಲಹೆ ನೀಡಲಾಗಿದೆ.

ವೇತನ ಪರಿಷ್ಕರಣೆಗೆ ಕೇಂದ್ರ ಸಮಾನ ವೇತನ, ಪಕ್ಕದ ಕೇರಳ ರಾಜ್ಯ ನೌಕರರ ವೇತನ ಭತ್ಯೆ ಪರಿಗಣಿಸುವುದು, ೬ನೇ ವೇತನ ಆಯೋಗದಲ್ಲಿ ಪ್ರಸ್ತುತ ಮೂಲವೇತನ ಹಾಲಿ ಇರುವ ಶೇ.೩೧ ರಷ್ಟು ತುಟ್ಟಿಭತ್ಯೆಯನ್ನು ವಿಲೀನಗೊಳಿಸಿ ಶೇ.೪೦ ರಷ್ಟು ಫಿಟ್‌ಮೆಂಟ್ ಸೌಲಭ್ಯವನ್ನು ೨೦೨೨ರ ಜುಲೈ ೧ ರಿಂದ ಜಾರಿಗೆ ತರಲು ಕೋರಲಾಗಿದೆ ಎಂದು ತಿಳಿಸಿದರು.
ಹಾಲಿ ಇರುವ ೨೫ ಮಾಸ್ಟರ್ ವೇತನ ಶ್ರೇಣಿ ಹಾಗೂ ೯೨ ವೇತನ ಶ್ರೇಣಿಗಳನ್ನು ಮುಂದುವರೆಸುವುದು, ೨೦೨೨ರ ಬೆಲೆ ಸೂಚ್ಯಾಂಕದ ಆಧಾರದ ಮೇಲೆ ೧೨ ತಿಂಗಳ ಸರಾಸರಿ ಆಧಾರದ ಮೇಲೆ ವೇತನ ಶ್ರೇಣಿ ದರ ನಿಗಧಿಗೆ ಮನವಿ ಮಾಡಲಾಗಿದೆ ಎಂದರು.

ಒಬ್ಬ ಸರ್ಕಾರಿ ನೌಕರನಿಗೆ ಸೇವಾವಧಿಯಲ್ಲಿ ಕನಿಷ್ಟ ೩ ರಿಂದ ೪ ಮುಂಬಡ್ತಿ ನೀಡಲು ಶಿಫಾರಸ್ಸು ಮಾಡುವುದು, ವಾರ್ಷಿಕ ವೇತನ ಬಡ್ತಿಯ ದರವನ್ನು ಕೇರಳ ರಾಜ್ಯದ ಮಾದರಿಯಲ್ಲಿ ಮೂಲ ವೇತನಕ್ಕೆ ಶೇ.೩ರಿಂದ ೪ ರಷ್ಟು ನಿಗಧಿಪಡಿಸಲು ಕೋರಿರುವುದಾಗಿ ತಿಳಿಸಿದ್ದಾರೆ.

ಪ್ರಯಾಣಭತ್ಯೆ, ದಿನಭತ್ಯೆ ಏರಿಕೆ, ಮರಣ ನಿವೃತ್ತಿ ಉಪದಾನ ಗರಿಷ್ಟ ಮಿತಿ ೨೦ ಲಕ್ಷದಿಂದ ೨೫ ಲಕ್ಷಕ್ಕೆ ಏರಿಸುವುದು. ಸೇವಾನಿರತ ನೌಕರರಿಗೆ ನೀಡುವ ವಾರ್ಷಿಕ ವೇತನ ಬಡ್ತಿ ದರದಲ್ಲಿಯೇ ನಿವೃತ್ತ ನೌಕರರಿಗೂ ಸಹಾ ಸಮಾನಾಂತರ ತುಟ್ಟಿಭತ್ಯೆ ನೀಡಲು ಶಿಫಾರಸ್ಸು ಮಾಡಲು ಕೋರಲಾಗಿದೆ ಎಂದಿದ್ದಾರೆ.

ಎನ್‌ಪಿಎಸ್ ಯೋಜನೆಗೆ ಒಳಪಟ್ಟು ವಯೋನಿವೃತ್ತಿ ಅಥವಾ ಮೃತರಾದ ನೌಕರರಿಗೆ ಹಳೆ ಪಿಂಚಣಿದಾರರ ಮಾದರಿಯಲ್ಲಿ ನಿವೃತ್ತಿ ವೇತನ ಹಾಗೂ ಸೌಲಭ್ಯ ಜಾರಿಗೊಳಿಸಲು ಕೋರಲಾಗಿರುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮಂಡಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರಾಜ್ಯ ನೌಕರರ ಸಂಘದ ಖಜಾಂಚಿ ಶ್ರೀನಿವಾಸ್, ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ್ ಬಳ್ಳಾರಿ, ಹಿರಿಯಉಪಾಧ್ಯಕ್ಷರಾದ ರುದ್ರಪ್ಪ,ರಾಜ್ಯಕಾರ್ಯದರ್ಶಿ ಸದಾನಂದ ನೆಲ್ಕುದುರಿ ರಾಜ್ಯದ ವಿವಿಧ ಜಿಲ್ಲೆಗಳ ಅಧ್ಯಕ್ಷರುಗಳು ಉಪಸ್ಥಿತರಿದ್ದರು.

 

ಸುದ್ದಿ ಓದಿ ಹಂಚಿ:

 

Related Post

ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ
ತಳಸಮುದಾಯವರು ಇಂದಿನ ಸುಳ್ಳುಗಳ ಜೊತೆಗೆ ಟ್ಯಾಗ್ ಆಗುತ್ತಿರುವುದು ದುರಂತ – ಎಲ್.ಎನ್.ಮುಕು0ದರಾಜ್
ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ರವರಿಗೆ ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತ ರಂಗ ಬೆಂಬಲ : ಡಾ.ಎಂ. ಚಂದ್ರಶೇಖರ್

Leave a Reply

Your email address will not be published. Required fields are marked *

You missed

error: Content is protected !!