ಇಷ್ಟು ವರ್ಷಗಳ ಕನ್ನಡ ಸಿನೆಮಾರಂಗದಲ್ಲಿ ಜನಪ್ರಿಯ/ಸ್ಟಾರ್/ಲೆಜೆಂಡ್ ಅಂದರೆ ಅದು ಕೇವಲ ಡಾ.ರಾಜ್‌ಕುಮಾರ್/ಅಣ್ಣಾವ್ರು ಒಬ್ಬರೇ.
ಸ್ಟಾರ್ ನಟರು ಯಾವುದೋ ಒಂದು ಮಾದರಿಯ ಪಾತ್ರವನ್ನು ಮಾಡಿದರೆ ಮಾತ್ರ ಅವರ ಸಿನೆಮಾನ ಪ್ರೇಕ್ಷಕರು ನೋಡುತ್ತಾರೆ ಎಂಬ ಇಂದಿನ ಕಾಲದಲ್ಲಿ ನಾವಿದ್ದೇವೆ.
ಆದರೆ ಅಣ್ಣಾವ್ರು ಆ ಬಿಗ್ ಮಿಥ್‌ನ ಒಡೆದಿದ್ದವರು. ಅವರು ಯಾವ ಪಾತ್ರ ಮಾಡಿದರೂ ಪ್ರೇಕ್ಷಕರು ಅವರ ಸಿನೆಮಾ ನೋಡುತ್ತಿದ್ದರು.
ಬಹುಶಃ ಭವಿಷ್ಯದಲ್ಲಿ ಯಾವ ಸ್ಟಾರ್ ನಟರು ಬಂದರೂ ಅಣ್ಣಾವರಷ್ಟು ವೈವಿಧ್ಯಮಯ ಪಾತ್ರಗಳಿಗೆ ಜೀವ ತುಂಬಲು ಸಾಧ್ಯವೇ ಇಲ್ಲಾ.
ಈಗಿನ ಸ್ಟಾರ್ ನಟರಿಗೆ ಸ್ಟಾರ್‌ಗಿರಿ ಉಳಿಯಬೇಕೆಂದರೆ ನಿರ್ಧಿಷ್ಟ ಪಾತ್ರ ಮಾಡಿದರೆ ಮಾತ್ರ ಗೆಲುವು ಭವಿಷ್ಯ. ಆದರೆ ಅಣ್ಣಾವ್ರು ಮಾಡಿದ ಪಾತ್ರಗಳಿಗೆಲ್ಲಾ ಗೆಲುವು ಸಿಕ್ಕಿತ್ತು.
ಸನಾದಿ ಅಪ್ಪಣ್ಣ ಮಾಡಿದವರೇ ಆಪರೇಷನ್ ಡೈಮಂಡ್ ರಾಕೆಟ್ ಮಾಡಿದರು, ಒಂದು ಮುತ್ತಿನ ಕತೆ ಮಾಡಿವರೇ ಜೀವನಚೈತ್ರ ಕೂಡ ಮಾಡಿದರು.
ಭೂದಾನದಲ್ಲಿ ಕಲ್ಯಾಣ್‌ಕುಮಾರ್, ಉದಯ್‌ಕುಮಾರ್ ಅವರ ತಂದೆಯ ಪಾತ್ರ ಮಾಡಿದವರೇ ಮಯೂರವರ್ಮನಾಗಿಯೂ ತೆರೆಯ ಮೇಲೆ ಮೆರೆದರು.
ನಿರ್ಧಿಷ್ಟ Genreಗೆ ಸಿಲುಕದ ನಿರ್ದೇಶಕ ಸ್ಪಿಲ್‌ಬರ್ಗ್ ರವರಷ್ಟೇ ನಟನೆಯಲ್ಲಿ ಯಾವುದೇ ನಿರ್ಧಿಷ್ಟ Genreಗೆ ಸಿಲುಕದ ಏಕೈಕ ನಟ ನಮ್ ಅಣ್ಣಾವ್ರು.
ಸಿನೆಮಾರಂಗದಲ್ಲಿ ಇವರಿಬ್ಬರೂ ಎಂದೆಂದಿಗೂ ನನಗೆ inspiration.
//ಮಂಸೋರೆ.
ಚಲನಚಿತ್ರ ನಿರ್ಧೇಶಕರು.