ಕೆಜಿಎಫ್:ಬೇತಮಂಗಲ ಹೊಸ ಬಡಾವಣೆಯಲ್ಲಿ ವಿಕ್ರಮ ರೈತ ಯುವಕರ ಕ್ಷೇಮಾಭಿವೃದ್ಧಿ ಸಂಘವು ಪ್ರತಿ ವರ್ಷದಂತೆ ಈ ವರ್ಷವೂ ಉಪ್ಪು ಮತ್ತು ಇತರೆ ಬಣ್ಣಗಳಿಂದ ಶಿವಮೂರ್ತಿ ಚಿತ್ರವನ್ನು ಅಲಂಕಾರವಾಗಿ ರಚನೆ ಮಾಡಲಾಯಿತು.
ಸಂಜೆ ಜಾಗರಣೆ ಪ್ರಯುಕ್ತ ಆರ್ಕೆಸ್ಟ್ರಾ ಇತರೆ ಮನರಂಜನೆ ಕಾರ್ಯಕ್ರಮ ಹಮ್ಮಿಕೊಂಡು ವಿಜೃಂಭನೆಯಿಂದ ಹಬ್ಬ ಆಚರಿಸಲಾಯಿತು. ಹಬ್ಬದ ಪ್ರಯುಕ್ತ ಬೇತಮಂಗಲ ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಗಳಿಂದ ನಾಗರಿಕರು ಪಾಲ್ಗೋಂಡು ಜಾಗರಣೆ ಇದ್ದು, ಮನರಂಜನೆ ಕಾರ್ಯಕ್ರಮ ವೀಕ್ಷಿಸಿದರು.
ಉಪ್ಪು ಮತ್ತು ಇತರೆ ಬಣ್ಣಗಳಿಂದ, ವಿದ್ಯುತ್ ದ್ವೀಪಗಳಿಂದ ಅಲಂಕಾರಗೊಂಡಿದ್ದ ಶಿವಮೂರ್ತಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ತೀರ್ಥ ಪ್ರಸಾದವನ್ನು ವಿತರಿಸಲಾಯಿತು. ಈ ಕಾರ್ಯಕ್ರಮಕ್ಕೆ ಹಲವಾರು ಮುಖಂಡರು ಆರ್ಥಿಕವಾಗಿ ಸಹಕಾರ ನೀಡಿರುವುದಾಗಿ ವಿಕ್ರಮ ರೈತ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ತಿಳಿಸಿದ್ದಾರೆ.