ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳ ಅಂತರ್ಜಲ ಮಟ್ಟ ಸುಧಾರಿಸುವ ಕೆಸಿ ವ್ಯಾಲಿ ಯೋಜನೆ ಅಂತರರಾಷ್ಟ್ರೀಯ ಸಂಶೋಧನೆಗೆ ಆಯ್ಕೆಯಾಗಿದ್ದು, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್,ಬ್ರಿಟೀಷ್ ಕೌನ್ಸಿಲ್ ಜೊತೆ ಮಾಡಿಕೊಂಡಿರುವ ಒಡಂಬಡಿಕೆಯನ್ವಯ ಬೆಂಗಳೂರು ಉತ್ತರ ವಿವಿ ಆಯ್ಕೆಯಾಗಿದೆ ಎಂದು ವಿವಿಯ ಕುಲಪತಿ ಪ್ರೊ.ನಿರಂಜನವಾನಳ್ಳಿ ತಿಳಿಸಿದ್ದಾರೆ.
ಈ ಒಡಂಬಡಿಕೆಯನ್ವಯ ಬೆಂಗಳೂರು ಉತ್ತರವಿವಿ ಸೇರಿದಂತೆ ರಾಜ್ಯದ ಮೂರು ವಿಶ್ವವಿದ್ಯಾಲಯಗಳು ಇಂಗ್ಲೇಂಡಿನ ಮೂರು ವಿಶ್ವವಿದ್ಯಾಲಯಗಳೊಂದಿಗೆ ಒಂದು ವರ್ಷದ ಸಂಶೋಧನೆಗೆ ಸಹಭಾಗಿತ್ವ ಹೊಂದಲಿವೆ ಎಂದು ತಿಳಿಸಿದ್ದಾರೆ.
ಈ ಒಡಬಂಡಿಕೆಯಡಿ ರಾಜ್ಯದ ಬೆಂಗಳೂರು ಉತ್ತರ ವಿವಿ, ಗುಲ್ಬರ್ಗಾ ವಿವಿ, ಬೆಂಗಳೂರು ನಗರ ವಿವಿ ಸೇರಿದ್ದು, ಬೆಂಗಳೂರು ಉತ್ತರ ವಿವಿಯೂ ಇಂಗ್ಲೇಂಡಿ ಹೈಲ್ಯಾಂಡ್ಸ್ ಅಂಡ್ ಐಲ್ಯಾಂಡ್ ವಿಶ್ವವಿದ್ಯಾಲಯದೊಂದಿಗೆ ಜಂಟಿಯಾಗಿ ಕೋಲಾರ,ಚಿಕ್ಕಬಳ್ಳಾಪುರ ಜನತೆಯ ಆರ್ಥಿಕ,ಸಾಮಾಜಿಕ ಮತ್ತು ಆರೋಗ್ಯದ ಮೇಲೆ ಕೆಸಿ ವ್ಯಾಲಿ ಯೋಜನೆಯ ಪರಿಣಾಂದ ಕುರಿತು ಸಂಶೋಧನೆ ನಡೆಸಲಿವೆ ಎಂದು ತಿಳಿಸಿದ್ದಾರೆ.
ಒಂದು ವರ್ಷದ ಈ ಯೋಜನೆಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ಥ ನಾರಾಯಣ ಇವರ ಸಮ್ಮುಖದಲ್ಲಿ ಬೆಂಗಳೂರಿನ ಉನ್ನತ ಶಿಕ್ಷಣ ಪರಿಷತ್ತಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರಿಷತ್ತಿನ ಗೌರವ ನಿರ್ದೇಶಕ ಡಾ.ಗೋಪಾಲಕೃಷ್ಣ ಜೋಶಿ ಬ್ರಿಟೀಷ್ ಕೌನ್ಸಿಲ್‌ನ ಪದಾಧಿಕಾರಿ ಜನಕಾ ಅವರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದರು ಎಂದು ತಿಳಿಸಿದ್ದಾರೆ.
ಈ ಸಂಶೋಧನೆಯಿಂದ ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ನೀರುಹರಿಸಿರುವುದರಿಂದ ಆಗಿರುವ ಅಂತರ್ಜಲ ಅಭಿವೃದ್ದಿ, ಜನರ ಆರೋಗ್ಯದ ಮೇಲಾಗಿರುವ ಪರಿಣಾಮಗಳ ಕುರಿತು ಸಂಶೋಧನೆ ಬೆಳಕು ಚೆಲ್ಲಲಿದೆ ಎಂದು ತಿಳಿಸಿದ್ದಾರೆ.