• Sun. Nov 3rd, 2024

ಕೋಲಾರ I ಸಿದ್ದರಾಮಯ್ಯ ಮತಯಾಚಿಸಿ ಹೋದ ಇಡೀ ಗ್ರಾಮ ಕಾಂಗ್ರೆಸ್‌ಗೆ ತಿರುಗೇಟು ಗ್ರಾಮದ ಪ್ರತಿ ಮತ ವರ್ತೂರು ಪ್ರಕಾಶ್‌ಗೆ-ಗ್ರಾಮಸ್ಥರ ಬಹಿರಂಗ ಘೋಷಣೆ

PLACE YOUR AD HERE AT LOWEST PRICE

ಕೋಲಾರ ತಾಲ್ಲೂಕಿನ ಕುರುಬರಹಳ್ಳಿ ಗ್ರಾಮದಲ್ಲಿ ಜನತೆ ಸಾಮೂಹಿಕವಾಗಿ ವರ್ತೂರು ಪ್ರಕಾಶ್‌ರನ್ನು ಕರೆಸಿ ಸನ್ಮಾನಿಸಿ, ನಮ್ಮ ಗ್ರಾಮದ ಒಂದು ಮತವೂ ಸಿದ್ದರಾಮಯ್ಯರಿಗೆ ಹಾಕುವುದಿಲ್ಲ ಎಂದು ಬಹಿರಂಗವಾಗಿ ಘೋಷಿಸುವ ಮೂಲಕ ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.

ಇತ್ತೀಚೆಗಷ್ಟೇ ತಮ್ಮದೇ ಕುರುಬ ಸಮುದಾಯ ಹೆಚ್ಚಿರುವ ಕುರುಬರಹಳ್ಳಿ ಗ್ರಾಮಕ್ಕೆ ಭೇಟಿ ನೀಡಿಹೋಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾವು ಮತ ಹಾಕಲ್ಲ, ನಮ್ಮ ನಾಯಕ ವರ್ತೂರು ಪ್ರಕಾಶ್ ಎಂದು ಹೇಳುವ ಮೂಲಕ ಗ್ರಾಮಸ್ಥರು ನಮ್ಮೂರಿನ ಪ್ರತಿಮತವೂ ವರ್ತೂರು ಪ್ರಕಾಶ್‌ಗೆ ಎಂದು ಮಾತುಕೊಟ್ಟ ಘಟನೆ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥರು, ನಮ್ಮ ಗ್ರಾಮದಿಂದ ಒಂದು ಮತ ಕೂಡ ಸಿದ್ದರಾಮಯ್ಯನವರಿಗೆ ಹಾಕುವುದಿಲ್ಲ ಸತತ ೧೫ ವರ್ಷಗಳಿಂದ ವರ್ತೂರ್ ಪ್ರಕಾಶ್ ರವರೆ ನಮಗೆ ದೇವರು ನಮ್ಮ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಸದಾ ನಮ್ಮೊಂದಿಗೆ ಇರುವ ಒಬ್ಬ ನಾಯಕ ಇಂತಹ ಅಭಿವೃದ್ಧಿ ಮಾಡುತ್ತಿರುವ ನಾಯಕನನ್ನು ಕಳೆದುಕೊಳ್ಳುವುದಕ್ಕೆ ನಾವು ಒಪ್ಪಿಕೊಳ್ಳುವುದಿಲ್ಲ ಎಂದು ಸಾರಿದರು.

ನಮ್ಮ ಬೆಂಬಲ ಮಾಜಿ ಸಚಿವ ಆರ್.ವರ್ತೂರ್ ಪ್ರಕಾಶ್ ರವರಿಗೆ ಎಂದು ತಿಳಿಸಿದ ಗ್ರಾಮಸ್ಥರು, ಸಿದ್ದರಾಮಯ್ಯ ಮತ ಪಡೆದು ಹೋದರೆ ಇಲ್ಲಿ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುವವರು ಯಾರು ಎಂದು ಪ್ರಶ್ನಿಸಿ, ನಾವೆಂದೂ ಪ್ರಕಾಶ್ ಕೈಬಿಡುವುದಿಲ್ಲ ಎಂದು ಘೋಷಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವರ್ತೂರ್ ಪ್ರಕಾಶ್, ನಾನು ೧೦ ವರ್ಷ ಶಾಸಕನಾಗಿದ್ದ ಸಂದರ್ಭದಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾರ್ಪಾಡು ಮಾಡಿದ್ದೆ. ಕ್ಷೇತ್ರದ ಪ್ರತಿ ಗ್ರಾಮದಲ್ಲೂ ಸಿಸಿ ರಸ್ತೆಗಳು ಕೊಳವೆ ಬಾವಿಗಳು ಶುದ್ಧ ಕುಡಿಯುವ ನೀರಿನ ಘಟಕಗಳು ಅನೇಕ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯ ಮಾಡಿದ್ದೇನೆ ಎಂದರು.

ಕ್ಷೇತ್ರದಲ್ಲಿ ೨೪ ಗಂಟೆ ಕಾರ್ಯ ನಿರ್ವಹಿಸುತ್ತಿದ್ದೇನೆ ಕ್ಷೇತ್ರದ ಜನತೆಗೆ ಸದಾ ಕೈಗೆ ಸಿಗುತ್ತಿದ್ದೇನೆ ಯಾರೇ ಕಷ್ಟ ಎಂದು ಬಂದರೆ ನನಗೆ ಅಧಿಕಾರ ಇಲ್ಲದಿದ್ದರೂ ಸಹ ಸ್ಪಂದಿಸಿ ಅವರ ಕಷ್ಟಗಳನ್ನು ದೂರ ಮಾಡುತ್ತಿದ್ದೇನೆ ಅಧಿಕಾರ ಇರುವವರು ನಿಮ್ಮ ಗ್ರಾಮದತ್ತ ಮುಖ ಮಾಡುತ್ತಿಲ್ಲ ಮುಖ ಮಾಡಿದರು ನಿಮ್ಮ ಕಷ್ಟಗಳನ್ನು ಕೇಳುವರೇ ಇಲ್ಲ ಎಂದರು.

ಸಿದ್ದರಾಮಯ್ಯನವರು ಬಂದರೂ ಸಹ ನೀವುಗಳು ಅವರಿಗೆ ಬೆಂಬಲ ಕೊಡುವುದಿಲ್ಲ ನನಗೆ ಬೆಂಬಲ ಕೊಡುತ್ತೇನೆ ಎಂದು ಹೇಳುತ್ತಿರುವುದು ಸಂತಸ ತಂದಿದೆ ನಿಮ್ಮ ಈ ಅಭಿಮಾನಕ್ಕೆ ಈ ನಂಬಿಕೆಗೆ ಎಂದು ದ್ರೋಹ ಬಗೆಯಲಾರೆ ಕುರುಬರಹಳ್ಳಿ ಗ್ರಾಮದ ಸಿಸಿ ರಸ್ತೆ ಶುದ್ಧ ಕುಡಿಯುವ ನೀರಿನ ಘಟಕ ಬೀದಿ ದೀಪಗಳ ವ್ಯವಸ್ಥೆ ಸ್ಮಶಾನಕ್ಕೆ ಹೋಗುವ ರಸ್ತೆಯನ್ನು ಆದಷ್ಟು ಬೇಗ ನಿರ್ಮಾಣ ಮಾಡಿಸುತ್ತೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬೆಗ್ಲಿ ಸೂರ್ಯ ಪ್ರಕಾಶ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಮಾಜಿ ಸದಸ್ಯ ಅರುಣ್ ಪ್ರಸಾದ್, ಬಿಜೆಪಿ ತಾಲೂಕು ಅಧ್ಯಕ್ಷ ಸಿ.ಡಿ.ರಾಮಚಂದ್ರಗೌಡ, ಪೊಲೀಸ್ ಚಲಪತಿ, ಸೂಲೂರು ಆಂಜಿನಪ್ಪ, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್, ಕುರುಬರಹಳ್ಳಿ ಗ್ರಾಮದ ಯುವ ಮುಖಂಡರಾದ ಮುರಳಿ, ವಿಜಯ್ ಕುಮಾರ್, ನಾಗೇಂದ್ರ , ಕೆ.ಎಸ್.ಮಂಜುನಾಥ್, ಸುಬ್ರಮಣಿ, ಮೇಸ್ತ್ರಿ ಕುಮಾರ್, ರಾಮ್ ಮೂರ್ತಿ, ನಟರಾಜು, ಆಟೋ ಸುಬ್ಬಣ್ಣ, ಶ್ರೀಕಾಂತ್, ಕೆ.ಸಿ.ಮಂಜುನಾಥ್, ಗಂಗಾಧರ್, ಕಿರಣ್, ವಿನೋದ್, ಆಟೋ ನಟರಾಜ್, ಕೆ.ಆರ್.ಸತೀಶ್, ನಾರಾಯಣ ಮೂರ್ತಿ, ರಾಜಕಲ್ಲಳ್ಳಿ ನಿವೃತ್ತ ಶಿಕ್ಷಕ ಶಿವಾರೆಡ್ಡಿ,ಹಾಗೂ ಗ್ರಾಮದ ಯುವ ಮುಖಂಡ ಉಪಸ್ಥಿತರಿದ್ದರು.

 

Related Post

ದೇವನಹಳ್ಳಿಯಿಂದ ಹೊಸೂರು ವರಗೆ 3190 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಅನುಮೋದನೆ: ಕೊತ್ತೂರು ಮಂಜುನಾಥ್
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾ ಸಮತಾ ಸಂಘರ್ಷ ಸಮಿತಿ  ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು
ಚನ್ನಪಟ್ಟಣ ಉಪ ಚುನಾವಣೆ: ಕಾಂಗ್ರೆಸ್‌ನಿಂದ ನಾಮಪತ್ರ ಸಲ್ಲಿಸಿದ ಯೋಗೇಶ್ವರ್, ಎನ್‌ಡಿಎ ಅಭ್ಯರ್ಥಿಯಾಗಿ ನಿಖಿಲ್

Leave a Reply

Your email address will not be published. Required fields are marked *

You missed

error: Content is protected !!