• Wed. Oct 23rd, 2024

PLACE YOUR AD HERE AT LOWEST PRICE

ಕರ್ನಾಟಕ ರಾಜ್ಯ ಸರ್ಕಾರಿ ಅಭಿಯೋಜಕ (ಪಬ್ಲಿಕ್ ಪ್ರಾಸಿಕ್ಯೂಟರ್ ಅಸೋಸಿಯೇಟ್) ಸಂಘದ ರಾಜ್ಯಾಧ್ಯಕ್ಷರಾಗಿ ಇದೇ ಪ್ರಥಮ ಬಾರಿಗೆ ಕೋಲಾರದ ಕೆ.ವಿ.ಅಶ್ವಥನಾರಾಯಣಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇದೇ ಮೊದಲ ಬಾರಿಗೆ ಕೋಲಾರ ಮೂಲದ ಅದರಲ್ಲೂ ಕಿರಿಯ ವಯಸ್ಸಿನ ರಾಜ್ಯಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಕೆ.ವಿ,ಅಶ್ವಥನಾರಾಯಣಗೌಡ ಅವರು, ಮುಳಬಾಗಿಲು ತಾಲೂಕಿನ ತಟ್ಟನಗುಂಟೆ ಗ್ರಾಮದವರಾಗಿದ್ದು, ಕಾನೂನು ವಿದ್ಯಾಭ್ಯಾಸದ ನಂತರ ಜಿಲ್ಲೆಯ ಹಿರಿಯ ವಕೀಲ ಕೆ.ವಿ.ಶಂಕರಪ್ಪ ಅವರ ಗರಡಿಯಲ್ಲಿ ಐದು ವರ್ಷಗಳ ಕಾಲ ವಕೀಲರಾಗಿ ಕಾರ್ಯನಿರ್ವಹಿಸಿದರು.

ನಂತರ ಅಭಿಯೋಜಕರ ಪರೀಕ್ಷೆಯಲ್ಲಿ ರಾಜ್ಯದಲ್ಲೇ ೨ನೇ ಸ್ಥಾನದ ಉತ್ತೀರ್ಣತೆ ಪಡೆದು ಸಹಾಯಕ ಸರ್ಕಾರಿ ಅಭಿಯೋಜಕರಾಗಿ ಆಯ್ಕೆಯಾಗಿ ೬ ವರ್ಷಗಳ ಕಾಲ ಹೊಸಕೋಟೆ ಹಾಗೂ ದೇವನಹಳ್ಳಿ ನ್ಯಾಯಾಲಯಗಳಲ್ಲಿ, ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರಾಗಿ ಬೆಂಗಳೂರು ಮೆಯೋ ಹಾಲ್ ನ್ಯಾಯಾಲಯದಲ್ಲಿ ೪ ವರ್ಷಗಳ ಕಾಲ, ಕಳೆದ ೩ ವರ್ಷಗಳಿಂದ ಅಭಿಯೋಜಕರಾಗಿ ಬೆಂಗಳೂರು ಸೆಷನ್ ಜಿಲ್ಲಾ ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸುಮಾರು ೬೦೦ ಮಂದಿ ಸದಸ್ಯತ್ವದ ಅಧಿಕಾರಿಗಳನ್ನೊಳಗೊಂಡ ಸರ್ಕಾರಿ ಅಭಿಯೋಜಕರ ಅಧ್ಯಕ್ಷರ ಸ್ಥಾನಕ್ಕೆ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಕ್ಯಾಂಪಸ್‌ನಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು. ಇತರೆ ಜಿಲ್ಲೆಯ ಯಾರೊಬ್ಬರು ನಾಮಪತ್ರ ಸಲ್ಲಿಸದ ಹಿನ್ನಲೆಯಲ್ಲಿ ಅಶ್ವಥನಾರಾಯಣಗೌಡ ಅವರ ಆಯ್ಕೆ ಸುಗಮವಾಯಿತು. ಚುನಾವಣಾಧಿಕಾರಿಯಾಗಿ ಬಿ.ಎಂ. ಬಿಸ್ಟಗೊಂಡ ಅವರು ಕಾರ್ಯನಿರ್ವಹಿಸಿದರು.

 

Related Post

ಜಾತಿ ಗಣತಿ ವರದಿಯನ್ನು ಅಂಗೀಕರಿಸಿ ಶೀಘ್ರದಲ್ಲಿ ಅನುಷ್ಠಾನಗೊಳಿಸಲು ದಲಿತ ಸಂಘರ್ಷ ಸಮಿತಿ ಒತ್ತಾಯ
ಮುಡಾ ಅಧ್ಯಕ್ಷ ಮರೀಗೌಡ ರಾಜೀನಾಮೆ ನೀಡಿದ್ದಾರೆ. ಆದರೆ,‌ ರಾಜೀನಾಮೆ ನೀಡಲು ಸಿದ್ದರಾಮಯ್ಯ ಭಂಡತನ ಪ್ರದರ್ಶಿಸುತ್ತಿದ್ದಾರೆ : ಮಾಜಿ ಸಂಸದ ಎಸ್.ಮುನಿಸ್ವಾಮಿ
ನಾವು ಆಸೆಗಳಿಗೆ ಮಿತಿಯಿಲ್ಲದೆ ಬದುಕುತ್ತೇವೆ,ಸಮಾಜಕ್ಕೆ ಒಂದಷ್ಟು ಕೊಡುಗೆಯಾಗಿ ನೀಡಿದಾಗ ನಮ್ಮ ಜನ್ಮ ಸಾರ್ಥಕವಾಗುತ್ತದೆ: ಶಿಕ್ಷಕ ಕೆ.ಹೆಚ್.ಸಂಪತ್ ಕುಮಾರ್

Leave a Reply

Your email address will not be published. Required fields are marked *

You missed

error: Content is protected !!