• Mon. May 29th, 2023

ಕೋಲಾರದಲ್ಲಿ ಸಿದ್ದರಾಮಯ್ಯನವರು ಸ್ಪರ್ಧಿಸಿದರೆ ನಾನೇಕಾಯಾ-ವಾಚಾ-ಮನಸಾ ದುಡಿಯುತ್ತೇನೆ -ಎ.ಶ್ರೀನಿವಾಸ್

ಕೋಲಾರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ನನಗೆ ನೀಡುತ್ತಾರೆ. ಪಕ್ಷದ ಹಿರಿಯ ನಾಯಕರುಗಳು ಸಹ ಹೇಳಿದ್ದಾರೆ. ಒಂದು ವೇಳೆ ಸಿದ್ದರಾಮಯ್ಯನವರೆ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ನಾನೂ ಸಹ ಕಾಯಾ ವಾಚಾ ಮನಸಾ ದುಡಿಯುತ್ತೇನೆ ಎಂದು ಕಾಂಗ್ರೆಸ್ ಟಿಕೇಟ್ ಅಕಾಂಕ್ಷಿ ಎ.ಶ್ರೀನಿವಾಸ್ ಅಭಿಪ್ರಾಯಪಟ್ಟರು.

ತಾಲೂಕಿನ ವೇಮಗಲ್ ಪಟ್ಟಣದ “ಸಿ”ಬ್ಲಾಕ್ ನ ಚನ್ನಪ್ಪನಹಳ್ಳಿ ರಸ್ತೆಯ ತೆಂಗಿನ ಬಾವಿ ಬಳಿ ಇರುವ ಶ್ರೀ ಸಪ್ಪಲಮ್ಮ ದೇವಿಯ 8ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ತಾವೂ ಸಹ ಕೋಲಾರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದು ಅರ್ಜಿ ಸಲ್ಲಿಸಿದ್ದೇನೆ. ನನಗೆ ಟಿಕೆಟ್ ಸಿಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಸಪ್ಪಲಮ್ಮ ದೇವಿಗೆ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿ ಸಪ್ಪಲಮ್ಮ ದೇವಾಲಯ ಅಭಿವೃದ್ಧಿಗಾಗಿ ನಗದು 50 ಸಾವಿರ ರೂಪಾಯಿಗಳನ್ನು ನೀಡಿದರು.

ಚನ್ನಪ್ಪನಹಳ್ಳಿ ಗ್ರಾಮದ ಯುವಕರು ಮುಂದಿನ ತಿಂಗಳು ಮಾರ್ಚ್ 5, 6 ಕ್ರಿಕೆಟ್ ಟೂರ್ನಮೆಂಟ್ ಗೆ ಸಹಾಯ ಮಾಡಲು ಕೋರಿದಾಗ ಎ.ಶ್ರೀನಿವಾಸ್ ರವರು ಮೊದಲನೇ ಬಹುಮಾನ ದ್ವಿತೀಯ ಬಹುಮಾನ ಊಟದ ವ್ಯವಸ್ಥೆ ಪೆಂಡಾಲ್ ವ್ಯವಸ್ಥೆ ಹಾಗೂ ಟಿ ಶರ್ಟ್ ನೀಡುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಎ.ಶ್ರೀನಿವಾಸ್ ರನ್ನು ಪಟಾಕಿ ಸಿಡಿಸಿ ವಾದ್ಯಗಳೊಂದಿಗೆ ಅದ್ದೂರಿಯಾಗಿ ಸ್ವಾತಿಸಲಾಯಿತು.

ಈ ಸಂದರ್ಭದಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಅಕಾಂಕ್ಷಿ ಎ.ಶ್ರೀನಿವಾಸ್ ಎ.ಎಸ್.ಎಸ್.ಕೆ ರಾಜ್ಯಾಕ್ಷರಾದ ಸಂದೇಶ್, ಸೀಮಲಪ್ಪ ನವರ ಶ್ರೀನಿವಾಸ್, ವಿ.ಎಂ.ರಾಜಗೋಪಾಲ್, ನಾರಾಯಣಸ್ವಾಮಿ, ಪಾನಿಪುರಿ ಶ್ರೀನಿವಾಸ್, ನಾಗರಾಜ್, ವಿ.ಎಂ.ಪ್ರಕಾಶ್, ರಮೇಶ್, ಮುನಿರಾಜ್,ಬಾಬು ಹಾಗೂ ಗ್ರಾಮದ ಹಲವಾರು ಯುವ ಮುಖಂಡರು ಹಿರಿಯರು ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು‌

Leave a Reply

Your email address will not be published. Required fields are marked *

You missed

error: Content is protected !!