• Thu. Mar 28th, 2024

ಬಾಲಕಿಗೆ ತಿಂಡಿ ಕೊಡಿಸುವುದಾಗಿ ನಂಬಿಸಿ ಅತ್ಯಾಚಾರ ಆರೋಪಿಗೆ ಪೋಕ್ಸೊ ಕಾಯಿದೆ ಅಡಿ ೨೦ ವಷ ಸಜೆ

PLACE YOUR AD HERE AT LOWEST PRICE

ಬಾಲಕಿಗೆ ತಿಂಡಿ ಕೊಡಿಸುವುದಾಗಿ ನಂಬಿಸಿ ಅತ್ಯಾಚಾರವೆಸಗಿದ ಬಾಲಕ ಆರೋಪಿಗೆ ನ್ಯಾಯಾಲಯವು ಪೋಕ್ಸೋ ಕಾಯ್ದೆಯಡಿ ೨೦ ವರ್ಷ ಸಜೆ ೨೫ ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ.

ಮಾಲೂರು ತಾಲೂಕಿನ ತೊರ‍್ನಹಳ್ಳಿ ಗ್ರಾಮದ ಮಹೇಶ್ ಬಿನ್ ಲೇಟ್ ಕೃಷಪ್ಪ ಎಂಬಾತ, ೧೩ ವಷದ ಅಪ್ರಾಪ್ತ ವಯಸ್ಸಿನ ನೊಂದ ಬಾಲಕಿಯು ಕೊರೊನಾ ರಜೆಯ ಕಾರಣದಿಂದ ಮನೆಯಲ್ಲಿ ಇದ್ದ ಸಮಯದಲ್ಲಿ ಆಗಾಗ ಅವರ ಮನೆಗೆ ಹೋಗಿ ಬರುತ್ತಿದ್ದು, ನೊಂದ ಬಾಲಕಿಗೆ ತಿಂಡಿ ಕೊಡಿಸುತ್ತೇನೆಂದು ನಂಬಿಸಿ, ಅಕೆಯ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿರುವ ಪ್ರಯುಕ್ತ, ನೊಂದ ಬಾಲಕಿಯು ಗರ್ಭಿಣಿಯಾಗಿದ್ದು, ದಿನಾಂಕ ೨೭-೦೮-೨೦೨೧ ರಂದು ನೊಂದ ಬಾಲಕಿಯ ಹೇಳಿಕೆಯ ಪಡೆದು, ಅದರ ಅನ್ವಯ ಮಾಲೂರು ಪೋಲೀಸ್ ಠಾಣಾಽಕಾರಿ ಸಿ.ಆರ್. ೨೬೨/೨೦೨೧ ರಂತೆ ಕಲಂ ೩೭೬ (೨) (ಎನ್) ಐ.ಪಿ.ಸಿ. ಮತ್ತು ಪೋಕ್ಸೊ ಕಾಯ್ದೆ ಅಡಿ ಪೋಲೀಸರು ಪ್ರಕರಣವನ್ನು ದಾಖಲಿಸಿಕೊಂಡು, ತನಿಖೆ ನಡೆಸಿದ ವೃತ್ತ ನಿರೀಕ್ಷಕ ಮಾರ್ಕೋಡಯ್ಯ ಆರೋಪಿಯ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದಾರೆ.

ಸ್ಪೆಷಲ್ ಸಿ. (ಪೋಕ್ಸೋ) ೫೮/೨೦೨೧ ರ ಪ್ರಕರಣದ ವಿಚಾರಣೆ ನಡೆಸಿದ ಪೋಕ್ಸೊ ನ್ಯಾಯಾಲಯದ ನ್ಯಾಯಾಽಶ ಬಿ.ಪಿ.ದೇವಮಾನೆ ವಿಚಾರಣೆ ನಡೆಸಿದ್ದು, ಆರೋಪ ರುಜುವಾತಾದ ಹಿನ್ನಲೆ ಕಲಂ ೩೭೬ ಐ.ಪಿ.ಸಿ. ಮತ್ತು ೬ ಪೋಕ್ಸೊ ಕಾಯ್ದೆ ಅಡಿ ೨೭-೦೨-೨೦೨೩ ರಂದು ಆರೋಪಿಗೆ ೨೦ ವಷ ಸಜೆ ಜೊತೆಗೆ ರೂ. ೨೫,೦೦೦ ಗಳ ದಂಡ ವಿಧಿಸಿ ದಂಡ ತೆರಲು ವಿಫಲರಾದಲ್ಲಿ ೬ ತಿಂಗಳ ಸಜೆಯನ್ನು ವಿಧಿಸಿ, ನೊಂದ ಬಾಲಕಿಗೆ ೫ ಲಕ್ಷ ರೂ. ಗಳನ್ನು ಪರಿಹಾರ ನೀಡುವಂತೆ ತೀರ್ಪು ಪ್ರಕಟಿಸಿದ್ದಾರೆ. ಸದರಿ ಪ್ರಕರಣದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕ ಡಿ.ಲಲಿತ ಕುಮಾರಿ ವಾದ ಮಂಡಿಸಿದ್ದರು.

Leave a Reply

Your email address will not be published. Required fields are marked *

You missed

error: Content is protected !!