ಉತ್ತಮ ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದು ಎಂದು ಕೋಲಾರ ತಾಲೂಕು ಆರೋಗ್ಯ ಅಽಕಾರಿ ಡಾ.ಎ.ವಿ.ನಾರಾಯಣಸ್ವಾಮಿ ಅಭಿಪ್ರಾಯ ಪಟ್ಟರು.
ಕೋಲಾರ ನಗರದ ಸ್ಕೌಟ್ ಭವನದಲ್ಲಿ ತಾಲೂಕು ಆರೋಗ್ಯ ಇಲಾಖೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ರೋಟರಿ ನಂದಿನಿ ವತಿಯಿಂದ ಶಿಕ್ಷಕರಿಗೆ ಆಯೋಜಿಸಿದ್ದ ಆರೋಗ್ಯ ಇಲಾಖೆಯ ಪನರ್ ಮನನ ಮಾಹಿತಿ ಕಾರ್ಯಗಾರದಲ್ಲಿ ಉದ್ಘಾಟಿಸಿ ಮಾತಾನಾಡುತ್ತಾ, ಶಿಕ್ಷಕರು ನಮ್ಮ ಇಲಾಖೆಯ ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿಯನ್ನು ಪಡೆದು ತಮ್ಮ ವ್ಯಾಪ್ತಿಯ ಗ್ರಾಮ , ಪಟ್ಟಣಗಳಲ್ಲಿನ ಸಾರ್ವಜನಿಕರಿಗೆ ತಲುಪಿಸುವ ಮೂಲಕ ಉತ್ತಮ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬಹುದು ಆರೋಗ್ಯ ಇಲಾಖೆಯ ಕಾರ್ಯಕ್ರಮಗಳು ಸಾರ್ವಜನಿಕರಿಗೆ ಬೇಗ ತಲುಪುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಗಿತ್ತು ಇದೇ ರೀತಿಯ ಸಹಕಾರ ಸದಾ ಸಿಗಲಿ ಎಂದು ಆಶಿಸಿದ್ದರು.
ಶಿಕ್ಷಣ ಸಂಯೋಜಕ ಕೆ.ಶ್ರೀನಿವಾಸ್ ಮಾತನಾಡಿ ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆ ಒಂದೇ ನಾಣ್ಯದ ಎರಡು ಮುಖಗಳಿಂದಂತೆ ಸಮಾಜಕ್ಕೆ ಉತ್ತಮ ಸೇವೆಯನ್ನು ಸಲ್ಲಿಸುವ ಮೂಲಕ ಆರೋಗ್ಯವಂತ ಸಮಾಜದಲ್ಲಿ ನಿರ್ಮಾಣ ಮಾಡಬಹುದು ಕೋವಿಡ್ ಬಂದ ಮೇಲೆ ಹೆಚ್ಚುಗಮನ ನೀಡುತ್ತಿದ್ದಾರೆ. ರೋಗ ಬಂದ ಮೇಲೆ ಕ್ರಮ ಕೈಗೊಳ್ಳುವ ಮೊದಲು ರೋಗ ಬರದಂತೆ ಇರಲು ಏನು ಅಭ್ಯಾಸಗಳನ್ನು ಮಾಡಿಕೊಳ್ಳಬೇಕು ಎಂಬುದನ್ನು ಶಾಲಾ ಹಂತದಿಂದಲೇ ನಾವು ಮಕ್ಕಳಿಗೆ ಅರಿವು ನೀಡುವುದರ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬಹುದು ಎಂದು ತಿಳಿಸಿದ್ದರು.
ಜಿಲ್ಲಾ ಕಾರ್ಯದರ್ಶಿ ವಿ.ಎಂ.ನಾರಾಯಣಸ್ವಾಮಿ ಮಾತನಾಡಿ, ಸ್ಕೌಟ್ಸ್ ಗೈಡ್ಸ್ ಸಂಸ್ಥೆ ೩ ವರ್ಷದ ಬಾಲಕರಿಂದ ಆರೋಗ್ಯ ಶಿಕ್ಷ ನೀಡುತ್ತಿದ್ದು ಈ ಸೇವೆ ಕೇವಲ ನಮ್ಮ ಸಂಸ್ಥೆಯ ಸದಸ್ಯರಿಗಾಗಲ್ಲ ತರಬೇತಿ ಪಡೆದ ಮಕ್ಕಳು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವ ಮೂಲಕ ಉತ್ತಮ ಹವ್ಯಾಸಗಳನ್ನು ರೂಡಿಕೊಳ್ಳುತ್ತಿದ್ದರೆ ಎಂದು ತಿಳಿಸಿದ್ದರು. ತಾಲೂಕು ಆರೋಗ್ಯಶಿಕ್ಷಣಾಽಕಾರಿ ಸತ್ಯನಾರಾಯಣಗೌಡ, ಸಂಪನ್ಮೂಲವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದರು.
ಜಿಲ್ಲಾ ಆಯುಕ್ತ ಕೆ.ಆರ್ ಸುರೇಶ್, ಜಿಲ್ಲಾ ಸಹ ಕಾರ್ಯದರ್ಶಿ ಸ್ಕೌಟ್ ಬಾಬು, ಜಿಲ್ಲಾ ಸಂಘಟಕ ವಿಶ್ವನಾಥ.ವಿ.ಕೋಲಾರ, ಹಾಗೂ ಪದಾಽಕಾರಿಗಳಾದ ವಿಠಲ್ ರಾವ್, ಶಶಿಕುಮಾರ್, ಮುನಿಸ್ವಾಮಿರೆಡ್ಡಿ, ಮುನಿನಾರಾಯಣಪ್ಪ, ಡಾ.ಕೆ.ಆರ್.ಮಂಜುಳ ಹಾಗೂ ಸ್ಕೌಟ್ಸ್ ಗೈಡ್ಸ್, ಎನ್.ಸಿ.ಸಿ, ಎನ್,ಎಸ್,ಎಸ್ ಶಿಕ್ಷಕರುಗಳು ಮುತಾಂದವರು ಉಪಸ್ಥಿತರಿದ್ದರು.