• Fri. Apr 19th, 2024

PLACE YOUR AD HERE AT LOWEST PRICE

ಕೆಜಿಎಫ್:ಸೂರಿಲ್ಲದವರಿಗೆ ಸೂರು ಕಲ್ಪಿಸುವ ಆಶ್ರಯ ಯೋಜನೆ ಬಡಾವಣೆ ನಿರ್ಮಿಸಲು ಗುರುತಿಸುವ ಸ್ಥಳದಲ್ಲಿರುವ ಹಳೆಯ ಕಟ್ಟಡಗಳನ್ನು ತೆರವುಗೊಳಿಸುವಲ್ಲಿ ತಡಮಾಡಿದ ನಗರಸಭೆ ಅಧಿಆಕರಿಗಳ ವಿರುದ್ಧ ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ಘರಂ ಆದ ಘಟನೆ ನಡೆಯಿತು.

ಕೆಜಿಎಫ್ ನಗರದ ರೋಡ್ಜರ್ಸ್ ಕ್ಯಾಂಪ್ ಬಳಿ ಗುರುತಿಸಿರುವ 16 ಎಕರೆ  ಜಮೀನಿನ ಬಳಿ ಬಡಾವಣೆ ನಿರ್ಮಾಣ ಮತ್ತು ನಿವೇಶನಗಳನ್ನು ಗುರುತಿಸುವ ಕಾಮಗಾರಿ ವೀಕ್ಷಣೆಗೆ ಬಂದಿದ್ದ ವೇಳೆ ಹಳೆಯ ಕಟ್ಟಡಗಳನ್ನು ಕೆಡವದೆ ಇರುವ ಬಗ್ಗೆ ಘರಂ ಆದ ಅವರು ಕಟ್ಟಡ ಕೆಡವಲು ಜೆಸಿಬಿ ತರದ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬಡಾವಣೆ ನಿರ್ರಮಾಣ ಸ್ಥಳದಲ್ಲಿರುವ ಹಳೆಯ ಮತ್ತು ದಾಖಲೆಗಳಿಲ್ಲದ ಕಟ್ಟಡಗಳನ್ನು ತೆರವುಗೊಳಿಸಲು ಈ ಹಿಂದೆಯೇ ಸೂಚಿಸಲಾಗಿತ್ತು. ಅಳತೆಮಾಡಿ ಭೂಮಿ ಸಮತಟ್ಟು ಮಾಡಲು ತಿಳಿಸಲಾಗಿದ್ದರೂ ಈ ತನಕ ಹಳೆಯ ಕಟ್ಟಡಗಳನ್ನು ಮತ್ತು ದಾಖಲೆ ಇಲ್ಲದ ಕಟ್ಟಡಗಳನ್ನು ತೆಗೆಯದಿರುವ ಬಗ್ಗೆ ಅಸಮದಾಣ ವ್ಯಕ್ತಪಡಿಸಿದರು.

ಕಳೆದ ಎರಡು ತಿಂಗಳಿಂದ ಭೂಮಿಯನ್ನು ಸಮತಟ್ಟು ಮಾಡಿ ಮಾರ್ಕ್ ಮಾಡಲು ವ್ಯವಸ್ಥೆಗೊಳಿಸಲು ಆಗದೆ ಹೋದರೆ ಅಭಿವೃದ್ಧಿ ಮಾಡುವುದು ಹೇಗೆ ಎಂದು ಪ್ರಶ್ನಿಸಿದ ಅವರು ಇಂದೇ ಕಟ್ಟಡಗಳನ್ನು ತೆರವುಗೊಳಿಸಿ ಮಾರ್ಕಿಂಗ್ ಮಾಡಲು ವ್ಯವಸ್ಥೆಗೊಳಿಸಿ ಎಂದು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಸದರಿ ಜಮೀನಿನಲ್ಲಿ ಈ ಹಿಂದೆ ಕೊಳಚೆ ನಿರ್ಮೂಲನಾ ಮಂಡಳಿಯಿಂದ ನಿರ್ಮಾಣ ಮಾಡಿರುವ ಮನೆಗಳಲ್ಲಿ ಹಲವು ಖಾಲಿ ಇದ್ದು ಹಲವು ಮನೆಗಳಲ್ಲಿ ಕೆಲವರು ವಾಸಿಸುತ್ತಿರುತ್ತಾರೆ. ಆದರೆ ಈ ಮನೆಗಳಲ್ಲಿ ವಾಸಿಸುತ್ತಿರುವವರ ಬಳಿ ಮನೆ ಹಂಚಿಕೆ ಮಾಡಿರುವ ಬಗ್ಗೆ ಯಾವುದೇ ದಾಖಲೆ ಇರುವುದಿಲ್ಲ.

ಕೆಲವು ಕಟ್ಟಡಗಳಲ್ಲಿ ವಾಸಿಸುತ್ತಿರುವವರನ್ನು ತಾತ್ಕಾಲಿಕವಾಗಿ ಬೇರೆಡೆಗೆ ಹೋಗಲು ತಿಳಿಸಿ ಕೂಡಲೆ ಮನೆಗಳನ್ನು ತೆರವುಗೊಳಿಸಲು ತಿಳಿಸಿದರು. ಮನೆಗಳಲ್ಲಿ ವಾಸಿಸುವವರು ತಮಗೆ ಮುಂದಿನ ಪರಿಹಾರ ಹೇಗೆ ಹಾಗೂ ಸದ್ಯದಲ್ಲಿ ಎಲ್ಲಿ ವಾಸ ಇರುವುದು ಎಂದು ಶಾಸಕರನ್ನು ಮನವಿ ಮಾಡಿದರು.

ಿಲ್ಲಿನ ಕೆಲ ಮನೆಗಳಲ್ಲಿ ವಾಸಿಸುತ್ತಿದ್ದವರಿಗೆ ಬೇರೆಡೆ ಇರುವ ಕೊಳಚೆ ನಿರ್ಮೂಲನಾ ಮಂಡಳಿಯ ಮನೆಗಳಲ್ಲಿ ಇವರಿಗೆ ವಾಸ ಇರಲು ಅನುಕೂಲ ಮಾಡಿಕೊಡಲು ಪೌರಾಯುಕ್ತರಿಗೆ ಸೂಚಿಸಿ, ನಿವೇಶನ ಹಂಚಿಕೆ ಸಮಯದಲ್ಲಿ ಇಲ್ಲಿನ ವಾಸಿಗಳಿಗೆ ಆಧ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.

ನಗರ ಭಾಗದಲ್ಲಿ ಸಾವಿರಾರು ಕುಟುಂಬಗಳು ತಮಗೆ ಸ್ವಂತ ಮನೆ ಇಲ್ಲದೆ ಕಷ್ಟಪಡುತ್ತಿದ್ದು ಅಂತಹ ಕುಟುಂಬಗಳಿಗೆ ಇಲ್ಲಿ ನಿವೇಶನ ಹಂಚಿಕೆ ಮಾಡಲು ಪ್ರಯತ್ನಿಸುತ್ತಿದ್ದು ಸಹಕರಿಸಲು ಕೋರಿದರು. ಶಾಸಕರ ಮನವಿಯನ್ನು ಒಪ್ಪಿ ಹಾಲಿ ಮನೆಗಳಲ್ಲಿ ವಾಸಿಸುತ್ತಿರುವವರು ಮನೆಗಳನ್ನು ಖಾಲಿ ಮಾಡಿ ನಗರ ಸಭೆ ಅಧಿಕಾರಿಗಳು ಸೂಚಿಸಿದ ಕಡೆ ಸ್ಥಳಾಂತರಗೊಂಡರು.

ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತರಾದ ಅಂಬಿಕ, ಸಿ.ಓ. ಶಶಿಕುಮಾರ್ ಹಾಜರಿದ್ದರು.

Related Post

ಶೇ.೯೦ ರಷ್ಟು ದೇಶದ ಸಮುದಾಯಗಳು ಮುಖ್ಯವಾಹಿನಿ ಮಾದ್ಯಮಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಮತ್ತು ಅತ್ಯುನ್ನತ ಸರ್ಕಾರಿ ಹುದ್ದೆಗಳಲ್ಲಿ ಭಾಗವಹಿಸುವಿಕೆ ಇಲ್ಲ! : ರಾಹುಲ್ ಗಾಂಧಿ
ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿವೆ : ಸಮುದಾಯ ಮುಖಂಡರ ಆಕ್ರೋಶ,
ಸಂವಿಧಾನ ಉಳಿಸಲು ದೇಶದ ಸಮಗ್ರತೆ ಕಾಪಾಡಲು ಬಿಜೆಪಿಯನ್ನು ಸೋಲಿಸಿ: ಮಂಜುನಾಥ್ ಅಣ್ಣಯ್ಯ

Leave a Reply

Your email address will not be published. Required fields are marked *

You missed

error: Content is protected !!