ಕೋಲಾರ ಜಿಲ್ಲೆಯ ದಲಿತರಿಗೆ ಸ್ಮಶಾನ ಹಾಗೂನಿವೇಶನ, ಭೂಮಿಗಾಗಿ,ಸರ್ಕಾರಿ ಗೋಮಾಳ ಹಂಚಿಕೆ ಸೇರಿದಂತೆ ಹಲವಾರು ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೋಲಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಇದೇ ತಿಂಗಳ 13 ರಂದು ಬೆಳ್ಳಿಗ್ಗೆ 11 ಗಂಟೆಯಿಂದ 2 ಗಂಟೆವರೆಗೆ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆಯಂದು ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ಸಂಸ್ಥಾಪಕ ಅಧ್ಯಕ್ಷ ಡಾ.ಕೋದಂಡ ರಾಮ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಅವರು ಮಾತನಾಡುತ್ತಾ, ಎಲ್ಲಾ ಪಕ್ಷಗಳ ಪ್ರತಿನಿಧಿಗಳು ಚುನಾವಣೆ ಸಂಧರ್ಭದಲ್ಲಿ ಮುಗಿಬಿದ್ದು ಜನರನ್ನು ದೇವಾಲಯಗಳಿಗೆ ಕಳುಹಿಸುತ್ತಾರೆ ಇದರಿಂದ ಏನು ಪ್ರಯೋಜನ ಇದರ ಬದಲಯ ಅವರ ಬದಕುಗಳು ಹಸನಾಗಲು ಜನರಿಗೆ ಭೂಮಿ ನೀಡುವ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದಿದ್ದರೂ ಇನ್ನೂ ದಲಿತರು ತಮ್ಮ ಹಕ್ಕುಗಳಿಗಾಗಿ ಬೇಡಿಕೊಳ್ಳುವುದು ತಪ್ಪಿಲ್ಲವೆಂದ ಅವರು ಮೂಲಭೂತ ಸೌಲಭ್ಯಗಳನ್ನು ನೀಡದೆ ಚುನಾಬಣೆಯಲ್ಲಿ ಗೆಲ್ಲಲು ಆಮೀಷಗಳನ್ನು ಎಲ್ಲಾ ಪಕ್ಷಗಳು ನೀಡುತ್ತಿರುವುದು ಖಂಡನೀಯವೆಂದರು.
ಜಿಲ್ಲೆಯ ವಸತಿ ಹೀನರಿಗೆ ಸರ್ಕಾರಿ ಗೋಮಾಳ,ಖರಾಬು ಜಾಗವನ್ನು ವಸತಿ ನಿವೇಶನಗಳಿಗೆ ಮಂಜೂರು ಮಾಡಬೇಕು,ದಲಿತ ಸಮುದಾಯದ ರುದ್ರಭೂಮಿಗೆ ಭೂಮಿ ಮಂಜೂರಾತಿ ಮಾಡಿ ಅಭಿವೃದ್ಧಿ ಪಡಿಸಬೇಕು,ದಲಿತರ ಅನುದಾನ ದುರುಪಯೋಗ ಪಡಿಸಿಕೊಂಡ ಅಧಿಕಾರಿಗಳ ವಿರುದ್ದ ಕ್ರಮ ಜರಿಗಿಸಬೇಕು,ವಿದ್ಯಾರ್ಥಿ ವೇತನ ಹಾಗೂ ಭೋಜನ ವೆಚ್ಚ ಹೆಚ್ಚಿಸ ಬೇಕು ಹಾಗೂ ಸಂಖ್ಯೆಗೆ ಅನುಗುಣವಾಗಿ ವಸತಿ ಸೌಕರ್ಯ ಒದಗಿಸಿ ಮೂಲ ಭೂತ ಸೌಲಭ್ಯಗಳನ್ನು ನೀಡಬೇಕು,ವಿವಿಧ ನಿಗಮಗಳ ಆರ್ಥಿಕ ಮತ್ತು ಭೌತಿಕ ಗುರಿ ಹೆಚ್ಚಿಸ ಬೇಕು,ದಲಿತ ಸಮುದಾಯದ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದವರ ವಿರುದ್ದ ಕ್ರಮ ಜರಿಗಿಸುವಂತೆ ಪ್ರತಿಭಟನೆಯಲ್ಲಿ ಒತ್ತಾಯಿಸಲಾಗುವುದಮದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ರಾಜ್ಯ ಉಪಾಧ್ಯಕ್ಷ ಆನಂದಕುಮಾರ್.ಎಂ,ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಈ.ಮಂಜುನಾಥ್, ರಾಜ್ಯ ಕಾರ್ಯದರ್ಶಿ ರಾಜೇಂದ್ರ ಬಾಬು,ಬೆಂ.ಗ್ರಾ.ಜಿಲ್ಲಾ ಅಧ್ಯಕ್ಷ ವೈ.ಎಸ್.ಕೆ.ಸಂತೋಷ್,ಕೋಲಾರ ಜಿಲ್ಲಾ ಅಧ್ಯಕ್ಷ ಮಂಜುನಾಥ್, ಚಿಕ್ಕಬಳ್ಳಾಪುರ ಜಿ.ಅಧ್ಯಕ್ಷ ಶ್ರೀಕಂಠ,ಬೆಂ.ನಗರ ಮಹಿಳಾ ಅಧ್ಯಕ್ಷೆ ಗೀತಾ ಬಾಯಿ ಮುಂತಾದವರು ಉಪಸ್ಥಿತರಿದ್ದರು.