• Fri. Apr 26th, 2024

PLACE YOUR AD HERE AT LOWEST PRICE

ಬಂಗಾರಪೇಟೆ:ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಅಭಿವೃದ್ಧಿಯ ಹೆಸರಿನಲ್ಲಿ ಸುಳ್ಳಿನ ಸರಮಾಲೆಯನ್ನೇ ರೂಪಿಸಿ ಅದರ ತಲಹದಿಯ ಆಧಾರದ ಮೇಲೆ ಭ್ರಷ್ಟ ಸಾಮ್ರಾಜ್ಯವನ್ನು ನಿರ್ಮಿಸಿದೆ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಆರೋಪಿಸಿದರು.

ಬೆಮೆಲ್ ನಗರದ ಬೇತಮಂಗಲ ಮುಖ್ಯರಸ್ತೆಯಲ್ಲಿನ ಮೈದಾನದಲ್ಲಿ ಹಮ್ಮಿಕೊಂಡಿದ್ದ “ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬೆಲೆ ಏರಿಕೆ ವಿರುದ್ಧ” ಬೃಹತ್ ಬೈಕ್ ರ್ಯಾಲಿಯಲ್ಲಿ ಅವರು ಮಾತನಾಡಿದರು.

ಲೋಕಾಯುಕ್ತ ಸಂಸ್ಥೆಯು ಬಿಜೆಪಿ ಶಾಸಕ ವೀರಭದ್ರಪ್ಪರ ಮನೆಯಲ್ಲಿ ಅಕ್ರಮವಾಗಿ 8 ಕೋಟಿ ಹಣವನ್ನು ಜಪ್ತಿ ಮಾಡಿದ್ದಾರೆ, ಇವರನ್ನು ಬಂಧಿಸ ಬೇಕಾಗಿದ್ದ ಮುಖ್ಯಮಂತ್ರಿಗಳು ತಮ್ಮ ಮನೆಯಲ್ಲಿ ರಕ್ಷಣೆಯನ್ನು ನೀಡಿದ್ದಾರೆಂದು ಆರೋಪಿಸಿದರು.

ಮಹಿಳೆಯರಿಗೆ ಉಚಿತ ಗ್ಯಾಸ್ ನೀಡುವ ಹುಸಿ ಭರವಸೆಯನ್ನು ನೀಡಿ ಪದೇ ಪದೇ ಗ್ಯಾಸ್ ಬೆಲೆಯನ್ನು 1200 ರೂ ಏರಿಕೆ ಮಾಡಿರುವುದರ ಜೊತೆಯಲ್ಲಿ ದಿನನಿತ್ಯದ ದಿನಬಳಕೆ ವಸ್ತುಗಳು, ಕಟಡ ನಿರ್ಮಾಣ ಸಾಮಗ್ರಿಗಳು, ಕೃಷಿ ಪರಿಕರಗಳ ಬೆಲೆ ಏರಿಕೆ  ಮಾಡಲಾಗಿದೆ.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತನ್ನ ಪಾಲುದಾರರಾದ ಅದಾನಿ, ಅಂಬಾನಿ, ಹಾಗೂ ಇನ್ನಿತರ ಶ್ರೀಮಂತ ವರ್ಗದವರ 10 ಲಕ್ಷ ಕೋಟಿ ಸಾಲ ಮನ್ನಾ ಮಾಡಿದಿಯೇ ಹೊರತು ರೈತರ, ಬಡವರ, ಕಾರ್ಮಿಕ ವರ್ಗದವರ, ಕಷ್ಟ ಕಾರ್ಪಣ್ಯ ಬವಣೆಗೆ ಸ್ಪಂದಿಸುತ್ತಿಲ್ಲವೆಂದು ದೂರಿದರು.

ಕುಮಾರಸ್ವಾಮಿಯವರು ತಾವು ಸಂಪೂರ್ಣವಾಗಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ಸ್ತ್ರೀಶಕ್ತಿ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡುತ್ತಿದ್ದಾರೆ, ಆದರೆ ರಾಜ್ಯದಲ್ಲಿ ಜೆಡಿಎಸ್ ಪಕ್ಷ 30 ಸ್ಥಾನಗಳಿಗೆ ಸೀಮಿತವಾಗಲಿದೆ.

ಜೆಡಿಎಸ್ ಅಧಿಕಾರಕ್ಕೆ ಬರಲ್ಲ ಸಾಲ ಮನ್ನಾ ಆಗಲ್ಲ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ಸಮ್ಮಿಶ್ರ ಸರ್ಕಾರದಲ್ಲಿ ಇದ್ದಂತ ಸಮಯದಲ್ಲಿ ಏಕೆ ಸಾಲ ಮನ್ನಾ ಮಾಡಲಿಲ್ಲ ಜನರಿಗೆ ಈಗ ಮಂಕು ಬೂದಿ ಎರಚಲು ಹೊರಟಿದ್ದಾರೆ ಎಂದು ಹೇಳಿದರು.

2018ರ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಶಾಸಕ ಎಂ ನಾರಾಯಣಸ್ವಾಮಿ ಕಾಂಗ್ರೆಸ್ ಪಕ್ಷದಿಂದ ಗೆದ್ದು, 30 ಪಡೆದು ಬಿಜೆಪಿ ಪಕ್ಷಕ್ಕೆ ಸೇರಿ ನಂತರ ಆ ಪಕ್ಕಕ್ಕೂ ವಂಚಿಸಿ, ಜೆಡಿಎಸ್ ಪಕ್ಷವನ್ನು ಬೆಂಬಲಿಸಿದರು.

ಈ ಹಿನ್ನೆಲೆಯಲ್ಲಿ ಮಲ್ಲೇಶ್ ಬಾಬುರವರು 48000 ಮತಗಳನ್ನು ಪಡೆಯಲು ಸಾಧ್ಯವಾಯಿತು.  ಚುನಾವಣೆಯ ನಂತರ  ಕ್ಷೇತ್ರದ ಜನರ ಸಂಕಷ್ಟಗಳಿಗೆ ಸ್ಪಂದಿಸದೆ ಕಣ್ಮರೆಯಾಗಿದ್ದ ಮಲ್ಲೇಶ್ ಬಾಬು  ಈಗ ಪುನಃ ಕ್ಷೇತ್ರದಲ್ಲಿ ಮತ ಕೇಳುತ್ತಿರುವುದು ಹಾಸ್ಯಾಸ್ಪದ ಎಂದರು.

ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದರೆ ಯರಗೋಳ್ ಜಲಾಶಯದ ಮೂಲಕ ದಾಸರ ಹೊಸಹಳ್ಳಿ, ಘಟ್ಟ ಕಾಮಧೇನಹಳ್ಳಿ, ಬಿ ಇ ಎಂ ಎಲ್ ನಗರ, ಚಿನ್ನಕೋಟೆ, ಡಿಕೆಹಳ್ಳಿ ಗಳಿಗೆ ಕುಡಿಯುವ ನೀರನ್ನು ಒದಗಿಸಲಾಗುವುದು.

ಕ್ಷೇತ್ರದಲ್ಲಿ ಕೈಗಾರಿಕ ಪ್ರದೇಶವನ್ನು ನಿರ್ಮಾಣ ಮಾಡಿ ಬೃಹತ್ ಪ್ರಮಾಣದ ಕಾರ್ಖಾನೆಗಳನ್ನು ತಂದು ನಿರುದ್ಯೋಗ ಸಮಸ್ಯೆ ಪರಿಹಾರ, ಡಿಸಿಸಿ ಬ್ಯಾಂಕ್ ನಿಂದ ನೀಡುತ್ತಿರುವ 50 ಸಾವಿರದ ಸಾಲದ ಪ್ರಮಾಣವನ್ನು 1 ಲಕ್ಷ ರೂಪಾಯಿಗೆ ಏರಿಸಲಾಗುವುದು.

ಡಿಕೆ ಹಳ್ಳಿ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮಾರ್ಪಡಿಸಿ ವಿಶೇಷ ಅನುದಾನಗಳನ್ನು ತರುವುದರೊಂದಿಗೆ ಮಾದರಿಯಾಗಿ ಅಭಿವೃದ್ಧಿಪಡಿಸಲಾಗಿವುದು, ಸ್ತ್ರೀ ಶಕ್ತಿ ಸಂಘಗಳ ಸಂಪೂರ್ಣ ಸಾಲ ಮನ್ನಾ ಮಾಡಲಾಗುವುದು.

ಜೊತೆಗೆ 10 ಕೆಜಿ ಅಕ್ಕಿ 200 ಯೂನಿಟ್ ಉಚಿತ ವಿದ್ಯುತ್,  ಕುಟುಂಬದ ಹಿರಿಯ ಮಹಿಳೆಗೆ ಮಾಸಿಕ 2 ಸಾವಿರ ರೂ ವೇತನ ಸೇರಿದಂತೆ ಜನಕಲ್ಯಾಣಕ್ಕೆ ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದರು.

ಬಂಗಾರಪೇಟೆ ಪಟ್ಟಣದ ಎಸ್ ಎನ್ ರಸಾರ್ಟಿನಿಂದ ಬೈಕುಗಳಲ್ಲಿ ಕಾರ್ಯಕರ್ತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇಶಹಳ್ಳಿ, ಚಿಕ್ಕ ವಲಗಮಾದಿ, ದೊಡ್ಡವಲಗಮಾದಿ. ಅಜ್ಜಪ್ಪನಹಳ್ಳಿ, ಚಿನ್ನಕೋಟೆ, ಮಾದಮುತ್ತನಹಳ್ಳಿ, ಘಟ್ಟ ಕಾಮಧೇನಹಳ್ಳಿ, ದೊಡ್ಡೋರು, ಡಿಕೆಹಳ್ಳಿ, ಮುಖಾಂತರ ಸಂಚರಿಸಲಾಗಿತ್ತು.

ಈ ಸಮಾವೇಶದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಾರ್ಥಸಾರಥಿ. ನಾಗರಾಜು. ಡಿಸಿಸಿ ಬ್ಯಾಂಕ್ ನಿರ್ಧೇಶಕ ಪಿಚ್ಚಹಳ್ಳಿ ಗೋವಿಂದರಾಜು, ಮುಖಂಡರಾದ  ಗೋಪಾಲರೆಡ್ಡಿ, ಪುರಸಭೆ ಮಾಜಿ ಅದ್ಯಕ್ಷ ಅಣ್ಣಾದೊರೈ, ಮುಖಂಡರಾದ ಚಂದು, ಗ್ರಾಪಂತಿ ಮಾಜಿ ಅಧ್ಯಕ್ಷರು ಆದಿನಾರಾಯಣ ಕುಟ್ಟಿ. ಮುಖಂಡರಾದ ಜೀವನ ರೆಡ್ಡಿ. ಮಹದೇವಪ್ಪ. ನಾಗರಾಜು. ಕುಪೇಂದ್ರ. ನಂಜಪ್ಪ. ರಘುನಾಥ್. ಮೇಸ್ತ್ರಿ ಸೀನಪ್ಪ. ಸುಬ್ರಮಣಿ. ಅರುಣ್ .ಕೃಷ್ಣಪ್ಪ .ಅಶೋಕ್. ಶಫಿ. ಗೋವಿಂದ. ಇತರರು ಉಪಸ್ಥಿತರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!