ಶಾಶ್ವತ ನೀರಾವರಿ ಹೋರಾಟ ಸಮಿತಿಯ ಜಲಜಾಗೃತಿ ಪಾದಯಾತ್ರೆ ಕೋಲಾರ ನಗರಕ್ಕೆ ಆಗಮಸಿದಾಗ, ಕೋಲಾರ ಜಿಲ್ಲಾ ಸಂವಿಧಾನ ರಕ್ಷಣಾ ಪಡೆ ಪದಾಧಿಕಾರಿಗಳು ಪಾದಯಾತ್ರೆಯಲ್ಲಿ ಪಾಲ್ಗೊಂಡವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ಮಾರ್ಚ್ ೩ರಂದು ದಕ್ಷಿಣ ಭಾರತದ ಜಲಿಯನ್ ವಾಲಾ ಬಾಗ್ ಎಂದು ಕರೆಯಲಾಗುವ ಗೌರಿಬಿದನೂರಿನ ವಿದುರಾಶ್ವತ್ಥ ದಿಂದ ಆರಂಭವಾದ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಜಲಜಾಗೃತಿ ಪಾದಯಾತ್ರೆ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಪಾದಯಾತ್ರೆ ನಡೆಸಿ ಭಾನುವಾರ ಕೋಲಾರ ಜಿಲ್ಲಾ ಕೇಂದ್ರಕ್ಕೆ ಪ್ರವೇಶ ಮಾಡಿತು.
ಮುಳಬಾಗಿಲಿನಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಕೋಲಾರ ತಾಲ್ಲೂಕಿನ ವಡಗೂರು ಗೇಟ್ ಟಮಕ, ಹಾದಿಯಲ್ಲಿ ಪಾದಯಾತ್ರೆ ನಡೆಸಿ ಇಲ್ಲಿನ ಕೋರ್ಟ್ ಸರ್ಕಲ್ ಬಳಿ ಸಮೀಪಿಸುತ್ತಿದ್ದಂತೆ ಸಂವಿಧಾನ ರಕ್ಷಣಾ ಪಡೆಯ ಪದಾಧಿಕಾರಿಗಳು ಪಾದಯಾತ್ರಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ಇದೇ ವೇಳೆಯಲ್ಲಿ ಕೋರ್ಟ್ ಸರ್ಕಲ್ ಬಳಿಯ ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆಂಜನೇಯರೆಡ್ಡಿ, ಮತ್ತು ಎಲ್ಲಾ ಪಾದಯಾತ್ರಿಗಳಿಂದ ಮಾಲಾರ್ಪಣೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಸಂವಿಧಾನ ರಕ್ಷಣಾ ಪಡೆಯ ಮಿಲ್ಟ್ರೀ ರಾಮಯ್ಯ, ಮೋಚಿಪಾಳ್ಯ ನಾಗೇಶ್, ವೆಂಕಟೇಶ್, ಐಪಲ್ಲಿ ನಾರಾಯಣಸ್ವಾಮಿ, ರೈತ ಮುಖಂಡರಾದ ರಾಮುಶಿವಣ್ಣ, ಅಬ್ಬಿಣಿ ಶಿವಪ್ಪ, ಡಾ..ಡಿ.ಕೆ.ರಮೇಶ್ , ಜಿ.ನಾರಾಯಣಸ್ವಾಮಿ ಮುಂತಾದವರು ಇದ್ದರು.