• Fri. Apr 26th, 2024

PLACE YOUR AD HERE AT LOWEST PRICE

ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಈವರೆವಿಗೂ ೧೫ ಚುನಾವಣೆ ನಡೆದಿದೆ. ೧೬ನೇ ಚುನಾವಣೆಗೆ ಸಿದ್ಧತೆ ನಡೆದಿದೆ. ಈವರೆವಿಗೂ ಕಾಂಗ್ರೆಸ್ ೫, ಜನತಾಪಕ್ಷ ೩ ಬಾರಿ, ಸಂಯುಕ್ತ ಜನತಾದಳ ಮತ್ತು ಜೆಡಿಎಸ್ ತಲಾ ೧ ಬಾರಿ, ಪಕ್ಷೇತರ ೫ ಬಾರಿ ಗೆಲುವು ಸಾಧಿಸಿದೆ.

೧೯೫೨ ರ ಮೊದಲ ಚುನಾವಣೆಯಲ್ಲಿಯೇ ಕೆ.ಪಟ್ಟಾಭಿರಾಮನ್ ಪಕ್ಷೇತರರಾಗಿ ಗೆದ್ದು ಕಾಂಗ್ರೆಸ್‌ಗೆ ಬಂಡಾಯ ಎದ್ದಿದ್ದರು. ಆನಂತರ ಪಿ.ವೆಂಕಟಗಿರಿಯಪ್ಪ ಎರಡು ಬಾರಿ ಪಕ್ಷೇತರಶಾಸಕರಾಗಿದ್ದರು. ಜನತಾಪರಿವಾರದ ಕೆ.ಶ್ರೀನಿವಾಸಯ್ಯ ೨ಬಾರಿ, ೨೦೦೮ ರಲ್ಲಿ ಜಿಲ್ಲೆಗೆ ಕಾಲಿಟ್ಟ ವರ್ತೂರು ಪ್ರಕಾಶ್ ಎರಡು ಬಾರಿ ಪಕ್ಷೇತರ ಶಾಸಕರಾದರು.

ಹಾಲಿ ಶಾಸಕ ಕೆ.ಶ್ರೀನಿವಾಸಗೌಡ ವಿವಿಧ ಪಕ್ಷಗಳಲ್ಲಿ ನಾಲ್ಕು ಬಾರಿ ಚುನಾವಣೆ ಗೆದ್ದಿದ್ದಾರೆ. ಈ ಬಾರಿ ಜೆಡಿಎಸ್‌ನಿಂದ ಗೆದ್ದಿದ್ದರೂ ಕಾಂಗ್ರೆಸ್ ಸೇರಿ ಸಿದ್ದರಾಮಯ್ಯರಿಗೆ ಕ್ಷೇತ್ರ ತ್ಯಾಗ ಮಾಡಿದ್ದಾರೆ.

ಸಿದ್ದರಾಮಯ್ಯ ಸ್ಪರ್ಧೆಯಿಂದ ಕ್ಷೇತ್ರ ರಂಗೇರಿದೆ. ಪಕ್ಷೇತರರಾಗಿ ೨ ಬಾರಿ ಗೆಲುವು ಸಾಽಸಿದ್ದ ವರ್ತೂರು ಪ್ರಕಾಶ್ ಒಂದು ಬಾರಿ ಸೋತಿದ್ದಾರೆ. ಈಗ ಬಿಜೆಪಿ ಅಭ್ಯರ್ಥಿಯಾಗುವ ತಯಾರಿ ನಡೆಸಿದ್ದಾರೆ. ಸಿಎಂಆರ್ ಶ್ರೀನಾಥ್ ಜಾತ್ಯತೀತ ಜನತಾದಳದ ಘೋಷಿತ ಅಭ್ಯರ್ಥಿಯಾಗಿ ಪ್ರಚಾರದಲ್ಲಿ ತೊಡಗಿದ್ದಾರೆ.

ಕೋಲಾರ ಕ್ಷೇತ್ರದಿಂದ ಹಿಂದೆ ಶಾಸಕರಾಗಿದ್ದವರು

೧. ೧೯೫೨ ಕೆ.ಪಟ್ಟಾಭಿರಾಮನ್ ಪಕ್ಷೇತರ
೨. ೧೯೫೭ ಡಿ.ಎ.ಅಬ್ದುಲ್ ರಷೀದ್ ಕಾಂಗ್ರೆಸ್
೩. ೧೯೬೨ ಪಿ.ವೆಂಕಟಗಿರಿಯಪ್ಪ ಪಕ್ಷೇತರ
೪. ೧೯೬೭ ಪಿ.ವೆಂಕಟಗಿರಿಯಪ್ಪ ಪಕ್ಷೇತರ
೫. ೧೯೭೨ ಡಿ.ವೆಂಕಟರಾಮಯ್ಯ ಕಾಂಗ್ರೆಸ್
೬. ೧೯೭೮ ಎಂ.ಅಬ್ದುಲ್ ಲತೀಫ್ ಕಾಂಗ್ರೆಸ್
೭. ೧೯೮೩ ಕೆ.ಆರ್.ಶ್ರೀನಿವಾಸಯ್ಯ ಜನತಾ ಪಕ್ಷ
೮. ೧೯೮೫ ಕೆ.ಆರ್.ಶ್ರೀನಿವಾಸಯ್ಯ ಜನತಾ ಪಕ್ಷ
೯. ೧೯೮೯ ಕೆ.ಎ.ನಿಸಾರ್ ಅಹಮದ್ ಕಾಂಗ್ರೆಸ್
೧೦. ೧೯೯೪ ಕೆ.ಶ್ರೀನಿವಾಸಗೌಡ ಜನತಾ ಪಕ್ಷ
೧೧. ೧೯೯೯ ಕೆ.ಶ್ರೀನಿವಾಸಗೌಡ ಸಂಯುಕ್ತ ಜನತಾದಳ
೧೨ ೨೦೦೪ ಕೆ.ಶ್ರೀನಿವಾಸಗೌಡ ಕಾಂಗ್ರೆಸ್
೧೩. ೨೦೦೮ ಆರ್.ವರ್ತೂರು ಪ್ರಕಾಶ್ ಪಕ್ಷೇತರ
೧೪. ೨೦೧೩ ಆರ್.ವರ್ತೂರು ಪ್ರಕಾಶ್ ಪಕ್ಷೇತರ
೧೫. ೨೦೧೮ ಕೆ.ಶ್ರೀನಿವಾಸಗೌಡ ಜಾತ್ಯತೀತ ಜನತಾದಳ
೧೬. ೨೦೨೩ ????? ?????

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!