• Thu. Apr 25th, 2024

PLACE YOUR AD HERE AT LOWEST PRICE

ಬಂಗಾರಪೇಟೆ:ಸ್ವಯಂಘೋಷಿತ ಅಭಿವೃದ್ಧಿ ಹರಿಕಾರರಾದ ಸ್ಥಳೀಯ ಶಾಸಕರು ಬಂಗಾರಪೇಟೆ ಪಟ್ಟಣದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ  ಎಂದು ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ಆರೋಪ ಮಾಡಿದರು.

ಪಟ್ಟಣದ ವಿವೇಕಾನಂದನಗರ ವಾರ್ಡ್ ನಲ್ಲಿ “ಮನೆ ಮನೆಗೆ ಮಲ್ಲೇಶ್ ಅಣ್ಣ, ರಾಜ್ಯಕ್ಕೆ ಕುಮಾರಣ್ಣ” ಎಂಬ ಶೀರ್ಷಿಕೆಯ ಅಡಿಯಲ್ಲಿ “ಪರಿವರ್ತನಾ ಯಾತ್ರೆಯ” ಮೂಲಕ ಮತ ಮಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಂಗಾರಪೇಟೆ ಪಟ್ಟಣದಲ್ಲಿ ಮೂಲಭೂತ ಸೌಲಭ್ಯಗಳು ಕಣ್ಮರೆಯಾಗಿದೆ. ನಗರದಾದ್ಯಂತ ಸಮರ್ಪಕವಾಗಿ ಒಳಚರಂಡಿ, ಕುಡಿಯುವ ನೀರು ನೀಡಿಲ್ಲ. ಹದಗೆಟ್ಟ ರಸ್ತೆಗಳು, ದುರಸ್ಥಿಯಾಗದ ವಿದ್ಯುತ್ ದೀಪಗಳು, ವಿಲೇವಾರಿಯಾಗದ  ಕಸದರಾಶಿಯಿಂದ ತೊಂದರೆಯಾಗುತ್ತಿದೆ.

ಕಾಂಗ್ರೆಸ್ ಪಕ್ಷದ  ದುರಾಡಳಿತಕ್ಕೆ ಸಾರ್ವಜನಿಕರು ಬೇಸತ್ತಿದ್ದಾರೆ. ಇದರಿಂದ ಕ್ಷೇತ್ರದ ಜನರು ಬದಲಾವಣೆಯ ಪರ್ವಕ್ಕೆ ಮುನ್ನುಡಿ ಬರೆಯಲು ಸಿದ್ದರಾಗಿದ್ದಾರೆ.  ಈಗಾಗಲೇ ಕ್ಷೇತ್ರದಾದ್ಯಂತ 21ಪಂಚಾಯಿತಿಗಳಲ್ಲಿ ಪರಿವರ್ತನಯಾತ್ರೆ ಯಶಸ್ವಿಯಾಗಿ ಪೂರ್ಣಗೊಂಡಿದೆ.

ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ 1ಲಕ್ಷ 50ಸಾವಿರಕ್ಕಿಂತಲೂ ಹೆಚ್ಚು ಮತದಾರರನ್ನು ಸಂಪರ್ಕಿಸಲಾಗಿದೆ, ಈ ಸಂದರ್ಭದಲ್ಲಿ ಸಾರ್ವಜನಿಕರು ತೋರುವ ಅಭೂತಪೂರ್ವ ಬೆಂಬಲ, ಪ್ರೀತಿ, ವಿಶ್ವಾಸ, ನನ್ನಲ್ಲಿ ಮತ್ತಷ್ಟು ಉತ್ಸಾಹ ಇಮ್ಮಡಿಸಿದೆ ಎಂದರು.

ಕೊಳಚೆ ನಿರ್ಮೂಲನ ಮಂಡಳಿ ವತಿಯಿಂದ ಪುರಸಭೆ ವ್ಯಾಪ್ತಿಯ ಗಂಗಮ್ಮನಪಾಳ್ಯ, ಸೇಟ್ ಕಾಂಪೌಂಡ್, ಸಂಜಯ್ ಗಾಂಧಿನಗರ, ರಾಮಕೃಷ್ಣ ಹೆಗಡೆ ಕಾಲೋನಿಯಲ್ಲಿ  ಮನೆಗಳ ನಿರ್ಮಾಣಕ್ಕೆ  ಸರಿಸುಮಾರು 21ಕೋಟಿ 47ಲಕ್ಷ 56 ಸಾವಿರ ರೂಗಳು ಮಂಜೂರಾಗಿದೆ.

ಇದಕ್ಕೆ ಟೆಂಡರ್ ಪ್ರಕ್ರಿಯೆ ಈಗಾಗಲೇ ನಡೆದಿರುತ್ತದೆ. ಆದರೆ ಇದುವರೆಗೂ ಕಾಮಗಾರಿಗಳು ಪೂರ್ಣಗೊಂಡಿಲ್ಲ, ಮನೆಗಳ ವಿತರಣೆಯಲ್ಲಿ ಭ್ರಷ್ಟಾಚಾರ ನಡೆದಿರುವ ಶಂಕೆಯನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕೆಲವು ಮಹಾನ್ ನಾಯಕರು ತಮ್ಮ ಬೆಂಬಲಿಗರಿಗೆ ಮನೆ ವಿತರಣೆ ಮಾಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ರಾಮಕೃಷ್ಣ ಹೆಗಡೆ ಕಾಲೋನಿಯ ಬಳಿ 110 ಮನೆಗಳ ಕಾಮಗಾರಿ ಪೂರ್ಣಗೊಳ್ಳದೆ ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿಣಮಿಸಿದೆ.

2023ರ ಚುನಾವಣೆಯಲ್ಲಿ ಜೆಡಿಎಸ್ ಗೆಲ್ಲುವುದು ಖಚಿತ ನಾನು ಶಾಸಕನಾದ ನಂತರ  ಕಾಮಗಾರಿಯನ್ನು ಪೂರ್ಣಗೊಳಿಸಿ ಅರ್ಹ ಫಲಾನುಭವಿಗಳಿಗೆ ಮನೆ ವಿತರಿಸಲಾಗುವುದು ಎಂದು ಭರವಸೆ ನೀಡಿದರು.

ನಂತರ ಮಾತನಾಡಿದ ಜೆಡಿಎಸ್ ಮಾಜಿ ಅಧ್ಯಕ್ಷ ದೇವರಾಜು ಸ್ಥಳೀಯ  ಶಾಸಕರ ಸರ್ವಾಧಿಕಾರಿ ಧೋರಣೆಯಿಂದ ಕ್ಷೇತ್ರದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಆತಂಕದಲ್ಲಿದೆ.  ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮತಯಾಚನೆ ಮಾಡುವುದು ನಮ್ಮ ಸಂವಿಧಾನಬದ್ಧ ಹಕ್ಕು.

ಆದರೆ ಸ್ಥಳೀಯ ಶಾಸಕರ ಕುಮ್ಮಕ್ಕಿನಿಂದ ಅವರ ಪಟಾಲಂ ನಾವು ಸೀ ರಹಿಂಕಾಂಪೌಂಡ್ ಮತ್ತು ಸೇಠ್ ಕಾಂಪೌಂಡ್ ನಲ್ಲಿ  ಮತ ಪ್ರಚಾರ ನಡೆಸುವ ಸಮಯದಲ್ಲಿ ನಮ್ಮ ವಿರುದ್ಧ ದೌರ್ಜನ್ಯ, ದಬ್ಬಾಳಿಕೆ, ಹಲ್ಲೆನಡೆಸಲು ವಿಫಲಯತ್ನ  ನಡೆಸಿ ಅಡ್ಡಿಪಡಿಸಿದ್ದರು.

ಆದರೆ ಪೊಲೀಸ್ ಇಲಾಖೆ ಮದ್ಯಪ್ರವೇಶದಿಂದ ಯಾವುದೇ ಅವಗಡ ನಡೆಯಲಿಲ್ಲ, ಎಲ್ಲಿಯವರಿಗೆ ಜನಾಶೀರ್ವಾದ ಹಾಗೂ ಸಂವಿಧಾನದ ಕಾನೂನು ವ್ಯವಸ್ಥೆ ಭದ್ರವಾಗಿರುತ್ತದೆಯೋ ಅಲ್ಲಿಯವರಿಗೆ ನ್ಯಾಯಕ್ಕೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಜಯ ಲಭಿಸುತ್ತದೆ.

ಈ ದಬ್ಬಾಳೀಕೆ ಮತ್ತು ದೌರ್ಜನ್ಯಗಳ ಬಗ್ಗೆ ಮತದಾರರಿಗೆ ಅರಿವಾಗಿದೆ. ಕಾಂಗ್ರೆಸ್ ಪಕ್ಷದ  ದುರಾಡಳಿತಕ್ಕೆ 2023ರ ಚುನಾವಣೆಯಲ್ಲಿ ಕ್ಷೇತ್ರದ ಜನ ತಕ್ಕ ಉತ್ತರ ನೀಡಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಸುನಿಲ್ ಕುಮಾರ್. ಮುಖಂಡರಾದ ರಾಜಪ್ಪ. ಯಲ್ಲಪ್ಪ ಸಾಗರ್ ಅಸ್ಲಾಂ. ಹೃದಯರಾಜ್. ರಾಜೇಂದ್ರಪ್ರಸಾದ್ ಮುಖಂಡರಾದ ರೂಪ ಮಂಜುನಾಥ್. ನಿರ್ಮಲ ನಾರಾಯಣಸ್ವಾಮಿ. ಹಾಗೂ ವಿಶ್ವನಾಥ್. ಜೀವಿತೇಶ್. ಪ್ರಸಾದ್. ಆಕಾಶ್ ಗೌಡ. ಸಿದ್ದಾರ್ಥ್. ಮೋಹನ್ ಗೌಡ. ಇತರರು ಉಪಸ್ಥಿತರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!