• Fri. Apr 26th, 2024

PLACE YOUR AD HERE AT LOWEST PRICE

ಇಂದಿನ ಆಧುನಿಕ ಹಾಗೂ ಯಾಂತ್ರಿಕ ಯುಗದಲ್ಲಿ ಮನುಷ್ಯ ಸಕಲವನ್ನು ಮರೆತು ಐಶ್ವರ್ಯದೆಡೆಗೆ ಸಾಗುತ್ತಿದ್ದಾನೆ, ದೈವಭಕ್ತಿ ಕೆಲವರಲ್ಲಿ ಮಾತ್ರ ಇದೆ, ಇನ್ನು ಕೆಲವರಲ್ಲಿ ನಾಸ್ತಿಕತೆ, ತುಂಬಿ ತುಳುಕುತ್ತಿದೆ ಆ ಕಾರಣಕ್ಕಾಗಿ ಸಕಲರಿಗೆ ಒಳ್ಳೆಯದಾಗಲಿ, ಲೋಕಕಲ್ಯಾಣವಾಗಲಿ ಎಂಬ ಮಹದಾಸೆಯಿಂದ ಶ್ರೀ ಆದಿಪರಾಶಕ್ತಿ ದೇವಾಲಯದಲ್ಲಿ ಶತಚಂಡಿ ಮಹಾ ಯಾಗವನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯದ ತಿಮ್ಮಪ್ಪ ಸ್ವಾಮೀಜಿ ತಿಳಿಸಿದರು.

ಮುಳಬಾಗಿಲು ತಾಲೂಕಿನ ಅವಣಿ ಹೋಬಳಿ ಪಿಚ್ಚಗುಂಟ್ಲಹಳ್ಳಿ ಗ್ರಾಮದ ಸಮೀಪ ಇರುವ ಶ್ರೀ ಆದಿಪರಾಶಕ್ತಿ ದೇವಾಲಯದಲ್ಲಿ ಶ್ರೀ ಆದಿಪರಾಶಕ್ತಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಈ ಶತಚಂಡಿ ಮಹಾಯಾಗವನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಗೆ ತಾಲೂಕಿಗೆ ಉತ್ತಮ ಶಾಸಕರು ಆಯ್ಕೆ ಆಗಲಿ ಹಾಗೂ ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸುವ ಸರ್ಕಾರ ಬರಲಿ ಎಂದು ಈ ಶತಚಂಡಿ ಮಹಾಯಾಗವನ್ನು ಸಂಪನ್ನಗೊಳಿಸುವ ಮೂಲಕ ಆ ದೇವಿ ಆದಿಪರಾಶಕ್ತಿಯನ್ನು ಬೇಡಿಕೊಳ್ಳಲಾಗುತ್ತದೆ ಎಂದು ತಿಮ್ಮಪ್ಪ ಸ್ವಾಮೀಜಿ ಅವರು ತಿಳಿಸಿದರು.

ಕಳೆದ 4 ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ ಯಜ್ಞ ಯುಗಾದಿಗಳು, ಹೋಮ ಹವನಗಳು ನಿರ್ವಿಘ್ನವಾಗಿ ನಡೆಯುತ್ತಿದ್ದು ಪ್ರತಿದಿನ ಭಕ್ತಾದಿಗಳು ನೂರಾರು ಸಂಖ್ಯೆಯಲ್ಲಿ ಆಗಮಿಸಿ ಯಾಗಗಳಲ್ಲಿ ಭಕ್ತಿಯಿಂದ ಪಾಲ್ಗೊಂಡು ಇಷ್ಟಾರ್ಥಗಳನ್ನು ದೇವಿಯ ಮುಂದೆ ಸಲ್ಲಿಸಿ ಪುನೀತರಾಗುತ್ತಿದ್ದಾರೆ ಎಂದರು.

ಈ ಯಾಗಗಳಲ್ಲಿ ದೂರದ ತಿರುಪತಿ, ಧರ್ಮಗಿರಿ, ಶ್ರೀಶೈಲಂ, ಶೃಂಗೇರಿ ಸೇರಿದಂತೆ ಇತರೆ ಧಾರ್ಮಿಕ ದೇವಾಲಯಗಳ ಸುಮಾರು 10 ಜನ ಅರ್ಚಕರು ಈ ಒಂದು ಯಾಗ ನಡೆಸಿಕೊಡುತ್ತಿದ್ದು ಮಾರ್ಚ್ 16ರ ಗುರುವಾರದಂದು ಶತಚಂಡಿಯಾಗ ಪೂರ್ಣಗೊಳ್ಳಲಿದೆ ಎಂದ ಅವರು ಅಂದು ದೇವಾಲಯದಲ್ಲಿ ವಿಶೇಷ ಪೂಜೆ ಕೈಂಕರ್ಯಗಳು ಅಭಿಷೇಕ , ಕಳಶ ಪ್ರತಿಷ್ಠಾಪನೆ, ಮಹಾ ಮಂಗಳಾರತಿ, ಅನ್ನದಾನ ಕಾರ್ಯಕ್ರಮಗಳು ನಡೆಯಲಿದ್ದು ಕೋಲಾರ ಜಿಲ್ಲೆ ಸೇರಿದಂತೆ ತಾಲೂಕಿನ ವಿವಿಧ ಕಡೆಗಳಿಂದ ಭಕ್ತಾದಿಗಳು ಆಗಮಿಸಲಿದ್ದು ಈ ಶುಭ ಕಾರ್ಯದಲ್ಲಿ ತಾಲೂಕಿನ ಜನತೆ ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶತಚಂಡಿಯಾಗ ಯಶಸ್ವಿಯಾಗಲು ಸಹಕಾರ ನೀಡಬೇಕೆಂದು ತಿಮ್ಮಪ್ಪ ಸ್ವಾಮೀಜಿ ಭಕ್ತಾದಿಗಳಲ್ಲಿ ಮನವಿ ಮಾಡಿದ್ದಾರೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!