ಕೆಜಿಎಫ್:ಸುಮಾರು 30-40 ವರ್ಷಗಳಿಂದ ಸ್ವಚ್ಚತೆ ಕಾಣದ ಕ್ಯಾಸಂಬಳ್ಳಿಯಲ್ಲಿನ ಮುಸ್ಲಿಂ ಸಮುದಾಯದ ಸ್ಮಶಾನವನ್ನು ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ಸಹಕಾರದೊಂದಿಗೆ ಸ್ಥಳೀಯ ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯರು ಸ್ವಚ್ಚತೆ ಮಾಡಿಸಿದರು.
ತಾಲ್ಲೂಕಿನ ಕ್ಯಾಸಂಬಳ್ಳಿ ಗ್ರಾಮದ ಮುಸ್ಲಿಂ ಸಮುದಾಯಕ್ಕೆ ಸೇರಿದ ಸುಮಾರು 1.4 ಎಕರೆ ವಿಸ್ತೀರ್ಣದ ಜಾಗವನ್ನು ಜೆಸಿಬಿ ಯಂತ್ರದ ಮೂಲಕ ತೆರವು ಗೊಳಿಸುವ ಕಾರ್ಯಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಚಾಲನೆ ನೀಡಿದರು.
ಈ ವೇಳೆ ಗ್ರಾಪಂ ಸದಸ್ಯೆ ಶ್ಯಾಮಲಮ್ಮ ಮಾತನಾಡಿ, ಮುಸ್ಲಿಂ ಸಮುದಾಯಕ್ಕೆ ಸೇರಿದ ಸ್ಮಶಾನವನ್ನು ಇದುವರೆಗೂ ಸುಮಾರು ವರ್ಷಗಳಿಂದ ಯಾರು ಸ್ವಚ್ಚತೆ ಮಾಡಲು ಮುಂದಾಗಿರಲಿಲ್ಲ, ಅದರೆ ಶಾಸಕಿ ರೂಪಕಲಾ ಶಶಿಧರ್ ಅವರ ಗಮನಕ್ಕೆ ತಂದ ಹಿನ್ನಲೆ ತಕ್ಷಣ ಸ್ವಂತ ವೆಚ್ಚದಲ್ಲಿಯೇ ಸ್ಮಶಾನವನ್ನು ಸ್ವಚ್ಚತೆ ಮಾಡಲಾಗುತ್ತಿದೆ ಎಂದರು.
ಕ್ಯಾಸಂಬಳ್ಳಿ ಗ್ರಾಪಂಯ ಎಲ್ಲಾ ಗ್ರಾಮಗಳ ಅಭಿವೃದ್ಧಿಗೆ ಶಾಸಕಿ ರೂಪಕಲಾ ಶಶಿಧರ್ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿ ಪಡಿಸಿದ್ದಾರೆ. ಕ್ಯಾಸಂಬಳ್ಳಿ ಗ್ರಾಮದ ಮುಸ್ಲಿಂ ಸಮುದಾಯದ ಸ್ಮಶಾನಕ್ಕೆ ಸ್ವಂತ ಹಣ ನೀಡಿರುವುದಕ್ಕೆ ಶಾಸಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕ್ಯಾಸಂಬಳ್ಳಿ ಕಾಂಗ್ರೆಸ್ ಪಕ್ಷದ ಯುವ ಮುಖಂಡ ವಿಕ್ಕಿರೆಡ್ಡಿ ನೇತೃತ್ವದ ಯುವಕರು ಜೆಸಿಬಿ ಯಂತ್ರದ ಮೂಲಕ ಬೃಹತ್ ಗಾತ್ರದ ಗಿಡ-ಮರಗಳು ಹಾಗೂ ಕಲ್ಲುಗಳನ್ನು ತೆರವು ಮಾಡಿ ಸ್ಮಶಾನವನ್ನು ಸಮತಟ್ಟಾಗಿ ಮಾಡಿದರು.
ಗ್ರಾಮದಲ್ಲಿ ಯಾರೇ ಮೃತ ಪಟ್ಟರು ಅತ್ಯಕ್ರಿಯೇ ಮಾಡಲು ತುಂಬ ತೊಂದರೆಯಾಗುತ್ತಿತ್ತು, ಇಷ್ಟು ವರ್ಷಗಳ ನಂತರ ಸ್ಮಶಾನದಲ್ಲಿನ ಜಾಲಿ ಗಿಡ ಮರಗಳನ್ನು ತೆರುವು ಮಾಡುವ ಮೂಲಕ ಸ್ವಚ್ಚತೆಗೊಳಿಸಿದ ಶಾಸಕರಿಗೆ ಸ್ಥಳೀಯರು ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕ್ಯಾಸಂಬಳ್ಳಿ ಸೊಸೈಟಿ ನಿರ್ದೇಶಕ ಪ್ರಕಾಶ್ ರೆಡ್ಡಿ, ನರೇಂದ್ರ ರೆಡ್ಡಿ, ಕೆ.ವಿ.ಶ್ರೀನಿವಾಸ್, ಅಶ್ವಿನಿ ಶ್ರೀನಿವಾಸ್ ಮೂರ್ತಿ, ಗ್ರಾಪಂ ಮಾಜಿ ಸದಸ್ಯ ಗೋಪಾಲ್, ಯುವ ಮುಖಂಡರಾದ ವಿಕ್ಕಿ ರೆಡ್ಡಿ, ಶಿವಾರೆಡ್ಡಿ, ಮುಸ್ಲಿಂ ಸಮುದಾಯದ ಮುಖಂಡರಾದ ಪ್ಯಾರುಸಾಬ್, ಅಸೇನ್ ಸಾಬ್, ರಿಜ್ವಾನ್, ಮಸ್ತನ್, ಹೂಸೆನ್, ಮದರ್ ಸಾಬ್, ಬಾಬು ಮೊದಲಾದವರಿದ್ದರು.