ಅಭಿವೃದ್ಧಿಯ ದೃಷ್ಟಿಯಿಂದ ಜೆಡಿಎಸ್ ಪಕ್ಷಕ್ಕೆ ನಿರೀಕ್ಷೆಗೂ ಮೀರಿ ಜನ ಬೆಂಬಲ ವ್ಯಕ್ತವಾಗುತ್ತಿದ್ದು, ಈ ಬಾರಿ ಜೆಡಿಎಸ್ ಸ್ವಂತ ಶಕ್ತಿಯಿಂದ ರಾಜ್ಯಾಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಬಂಗಾರಪೇಟೆ ಜೆಡಿಎಸ್ ಅಭ್ಯರ್ಥಿ ಎಂ.ಮಲ್ಲೇಶ್‌ಬಾಬು ಮುನಿಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಬಂಗಾರಪೇಟೆ ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಶುಕ್ರವಾರ ಮನೆ ಮನೆಗೆ ಬೇಟಿ ನೀಡಿ ಮತಯಾಚನೆ ಮಾಡುತ್ತಿದ್ದ ವೇಳೆ ಮಾದ್ಯಮಗಳೊಂದಿಗೆ ಮಾತನಾಡಿದರು. ಕಳೆದ ಎರಡು ತಿಂಗಳಿoದ ಗ್ರಾಮೀಣ ಪ್ರದೇಶದಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ಅಭೂತಪೂರ್ವ ಜನ ಸ್ಪಂದನೆ ಸಿಕ್ಕಿದೆ. ಗ್ರಾಮೀಣ ಪ್ರದೇಶದಲ್ಲಿ ಜೆಡಿಎಸ್ ಪಕ್ಷದ ಪರವಾದ ಅಲೆ ಈದೀಗ ಪಟ್ಟಣ ಪ್ರದೇಶಕ್ಕೂ ತಟ್ಟಿದೆ ಎಂದು ತಿಳಿಸಿದರು.
ಜೆಡಿಎಸ್ ಪಕ್ಷದ ಕಾರ್ಯಕ್ರಮಗಳನ್ನು ಮೆಚ್ಚಿ ವಿವಿಧ ಪಕ್ಷಗಳ ಜನ ಸ್ವಯಂ ಸ್ಪೂರ್ತಿಯಿಂದ ಸೇರ್ಪಡೆಯಾಗುತ್ತಿದ್ದಾರೆ. ಆದರೆ, ಹಾಲಿ ಶಾಸಕರು ಕಳೆದ ಬಾರಿ ಜೆಡಿಎಸ್ ಪಕ್ಷ ಪಡೆದ ಮತಗಳು ಜೆಡಿಎಸ್ ಪಕ್ಷದ್ದಲ್ಲ ಎಂದು ಜನರಿಗೆ ದಾರಿ ತಪ್ಪಿಸಲು ಪ್ರಯತ್ನ ಮಾಡುತ್ತಿರುವುದು ನೋಡಿದರೆ ಜೆಡಿಎಸ್ ಪಕ್ಷ ಬೆಳೆಯುತ್ತಿರುವ ವೇಗ ಅವರಲ್ಲಿ ಯಾವ ಮಟ್ಟಕ್ಕೆ ಆತಂಕ ಸೃಷ್ಟಿಸಿದೆ ಎಂದು ಅರ್ಥವಾಗುತ್ತದೆ. ಎಂದರು.
ಇದಕ್ಕೂ ಮುಂಚೆ ಜೆಡಿಎಸ್ ಪಕ್ಷದ ಅಪಾರ ಬೆಂಬಲಿಗರು ಹಾಗೂ ಮುಖಂಡರೊoದಿಗೆ ಪಟ್ಟಣದ ಕುವೆಂಪು ವೃತ್ತ, ಆಸ್ಪತ್ರೆ ವೃತ್ತ, ನಂದಿ ಮೆಡಿಕಲ್ಸ್, ವಿಜಯನಗರದ ನಿವಾಸಿಗಳು ಹಾಗೂ ವ್ಯಾಪಾರಿಗಳನ್ನು ಬೇಟಿ ಮಾಡಿ ಮತಯಾಚನೆ ಅಬ್ಬರದ ಪ್ರಚಾರಕೈಗೊಂಡಿದ್ದರು. ಜೆಡಿಎಸ್ ಪಕ್ಷದ ಸಾವಿರಾರು ಅಬಿಮಾನಿಗಳು ಸ್ವಯಂಪ್ರೇರಣೆಯಿoದ ಪಟಾಕಿ, ಬಾಣಬಿರುಸುಗಳನ್ನು ಸಿಡಿಸುವುದರ ಮೂಲಕ ತಮ್ಮ ಬೆಂಬಲವನ್ನು ಸೂಚಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ತಾಲ್ಲೂಕು ಅಧ್ಯಕ್ಷ ಮುನಿರಾಜು, ಉಪಾಧ್ಯಕ್ಷ ಕೀಲುಕೊಪ್ಪ ಯಲ್ಲಪ್ಪ, ಕಾರ್ಯಾಧ್ಯಕ್ಷ ಶ್ರೀನಿವಾಸಮೂರ್ತಿ, ವಿಶ್ವನಾಥ್‌ಗೌಡ, ಅಸ್ಲಂಪಾಷ, ಸಿರಾಜ್, ಗುಟ್ಟಳ್ಳಿ ಮಂಜುನಾಥ್, ಸುನೀಲ್, ಪ್ರವೀಣ್ ಸಿದ್ಧರ್ಥ್, ಸಕ್ಕನಹಳ್ಳಿ ವೆಂಕಟೇಶ್ ಸೇರಿದಂತೆ ಹಲವು ಹಿರಿಯ ಹಾಗೂ ಕಿರಿಯ ಮುಖಂಡರು ಸೇರಿ ಒಂದು ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಿದ್ದರು.