ಕೋಲಾರದ ಹುಲಿ ಮುಂದೆ ಮೈಸೂರು ಟಗರಿನ ಆಟ ನಡೆಯೋದಿಲ್ಲ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಸವಾಲು ಎಸೆದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸಿದರೆ ಹಿನ್ನಡೆ ಎಂಬ ಅಂಶವನ್ನು ಆಂಧ್ರಪ್ರದೇಶದ ಖಾಸಗಿ ಏಜೆನ್ಸಿ ಸರ್ವೆ ನಡೆಸಿ ಆ ವರದಿಯನ್ನ ರಾಹುಲ್ ಗಾಂಽ ರವರಿಗೆ ತಿಳಿಸಿದ್ದು ರಾಹುಲ್ ಗಾಂಽ ಸಿದ್ದರಾಮಯ್ಯನವರು ಕೋಲಾರದಲ್ಲಿ ಸ್ಪರ್ಧೆ ಬೇಡ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ ಅವರು ಮಾತನಾಡಿದರು.
ನಾನು ಒಂದು ವರ್ಷದಿಂದ ಕೋಲಾರದಲ್ಲಿ ಬೂತ್ ಮಟ್ಟದಿಂದ ಬಿಜೆಪಿ ಪಕ್ಷವನ್ನು ಸಂಘಟನೆ ಮಾಡುತ್ತಿದ್ದೇನೆ, ಕ್ಷೇತ್ರದ ಪ್ರತಿ ಗ್ರಾಮದಲ್ಲೂ ಶೇಕಡ ೭೫ ರಷ್ಟು ಬಿಜೆಪಿ ಕಾರ್ಯಕರ್ತರು ಇದ್ದಾರೆ, ದೇಶದಲ್ಲಿ ನರೇಂದ್ರ ಮೋದಿಜಿ ಅಭಿವೃದ್ಧಿ ಕೆಲಸಗಳು ರಾಜ್ಯದಲ್ಲಿ ಬಸವರಾಜ್ ಬೊಮ್ಮಾಯಿ ಜನಪರ ಯೋಜನೆಗಳು, ಕೋಲಾರ ಜಿಲ್ಲೆಯಲ್ಲಿ ಸಂಸದ ಎಸ್.ಮುನಿಸ್ವಾಮಿ ಅಭಿವೃದ್ಧಿ ಕಾರ್ಯಗಳು ಮೆಚ್ಚಿ ಜಿಲ್ಲೆಯ ಪ್ರತಿ ನಾಗರಿಕರು ಮೆಚ್ಬಿದ್ದಾರೆ.
ಜನ ಬಿಜೆಪಿ ಪಕ್ಷಕ್ಕೆ ಮತ ನೀಡಲು ತಯಾರಿದ್ದಾರೆ. ಯಾವಾಗ ಚುನಾವಣೆ ಬರೆಯುತ್ತೋ ನಾವು ಬಿಜೆಪಿ ಪಕ್ಷಕ್ಕೆ ಮತ ನೀಡಬೇಕು ಎಂದು ಕಾರ್ಯಕರ್ತರು ಕಾಯುತ್ತಿದ್ದಾರೆ, ಕ್ಷೇತ್ರದಲ್ಲಿ ಶೇಕಡ ೯೦ ರಷ್ಟು ಕಾಂಗ್ರೆಸ್ ಪಕ್ಷಕ್ಕೆ ಬೂತ್ ಏಜೆಂಟ್ ಇರುವುದಿಲ್ಲ, ಹೀಗಿರುವಾಗ ಕಾಂಗ್ರೆಸ್ ಪಕ್ಷ ಗೆಲುವು ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದರು.
ಕ್ಷೇತ್ರದಲ್ಲಿ ಘಟ್ ಬಂದನ್ ನಾಯಕರಿಂದ ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗೆ ತಪ್ಪು ಸಂದೇಶ ರವಾನಿಸಿದ್ದಾರೆ, ಇಲ್ಲಿನ ಕಾಂಗ್ರೆಸ್ ನಾಯಕರಿಂದ ಹಣದ ಆಸೆಗೆ ಸಿದ್ದರಾಮಯ್ಯರವರನ್ನು ಅಭ್ಯರ್ಥಿಯ ಮಾಡಲು ಹೊರಟಿದ್ದಾರೆ, ನಾನು ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿದ್ದು, ನಾನು ಕೋಲಾರದ ಹುಲಿ ಮೈಸೂರಿನ ಟಗರುನ ಆಟ ಕೋಲಾರದಲ್ಲಿ ನಡೆಯುವುದಿಲ್ಲ, ನನಗೆ ಸಿದ್ದರಾಮಯ್ಯ ಅಲ್ಲ ರಾಹುಲ್ ಗಾಂಽನೇ ಬರಲಿ ನನಗೆ ಯಾವುದೇ ರೀತಿಯ ಭಯವಿಲ್ಲ ನನ್ನ ಗೆಲುವು ಮೊದಲೇ ನಿಶ್ಚಿತವಾಗಿದೆ ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದರು.
ಸುದ್ದಿ ಓದಿ ಹಂಚಿ: