PLACE YOUR AD HERE AT LOWEST PRICE
ಶ್ರೀನಿವಾಸಪುರ:ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಸ್ಪಂದನೆ ನೀಡುತ್ತಿಲ್ಲ ಹಾಗೂ ಯಾವುದೇ ವಾರ್ಡ್ ಗಳಲ್ಲಿನ ಸಮಸ್ಯೆಗಳ ಬಗ್ಗೆ ಮುಖ್ಯಾಧಿಕಾರಿ ಸತ್ಯನಾರಾಯಣರ ಬಳಿ ಚರ್ಚೆ ಮಾಡಿದರು ಸಹ ತಲೆಕೆಡಿಸಿಕೊಳ್ಳುತ್ತಿಲ್ಲವೆಂದು ಪುರಸಭೆ ಅಧ್ಯಕ್ಷರಾದ ಲಲಿತಾ ಶ್ರೀನಿವಾಸ್ ಆರೋಪಿಸಿದರು.
ಪುರಸಭೆ ಮುಖ್ಯಾಧಿಕಾರಿ ಮತ್ತು ಅಧಿಕಾರಿಗಳ ನಿರ್ಲಕ್ಷತೆ ವಿರೋಧಿಸಿ ಆದಿ ಜಾಂಬವ ಚಾರಿಟೇಬಲ್ ಟ್ರಸ್ಟ್, ಆದಿ ಜಾಂಬವ ಸೇವಾ ಸಮಿತಿ, ಪ್ರಗತಿಪರ ದಲಿತಪರ ಸಂಘಟನೆಗಳ ಒಕ್ಕೂಟ ಸಂಯುಕ್ತಾಕ್ಷರದಲ್ಲಿ ಪುರಸಭೆ ಕಚೇರಿಯ ಮುಂದೆ ನಡೆದ ಧರಣಿಯಲ್ಲಿ ಅವರು ಮಾತನಾಡಿದರು.
ಪುರಸಭೆ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಸ್ಪಂದನೆ ನೀಡುತ್ತಿಲ್ಲ ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ ವಿರುದ್ಧ ಮೇಲಾಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರು ಸಹ ಯಾವುದೇ ಪ್ರಯೋಜನವಾಗಿಲ್ಲ. ಪಟ್ಟಣದಲ್ಲಿನ ಕಂದಾಯ ಇಲಾಖೆಯ ವ್ಯಾಪ್ತಿಗೆ ಬರುವ ಸರ್ವೆ ನಂಬರಗಳನ್ನು ಕಾನೂನು ನಿಯಮಗಳನ್ನು ಉಲ್ಲಿಂಗಿಸಿ, ಈ ಸ್ವತ್ತುಗಳನ್ನು ಮಾಡಿರುತ್ತಾರೆಂದು ಆರಪಿಸಿದರು.
ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಮುಖ್ಯ ಅಧಿಕಾರಿಯನ್ನು ಕೂಡಲೇ ಸಸ್ಪೆಂಡ್ ಮಾಡಬೇಕು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಇಲ್ಲವಾದರೆ ನ್ಯಾಯ ದೊರೆಯುವ ತನಕ ಹೋರಾಟ ಮುಂದುವರಿಸುತ್ತೇವೆಂದು ಅವರು ಎಚ್ಚರಿಸಿದರು.