• Wed. Apr 24th, 2024

PLACE YOUR AD HERE AT LOWEST PRICE

ಸಮಾಜವಾದಿ ಮುಖವಾಡ ಧರಿಸಿರುವ ಸಿದ್ಧರಾಮಯ್ಯ ದಲಿತ ರಾಜಕಾರಣಿಗಳನ್ನು ತನ್ನ ಕುತಂತ್ರದಿoದ ದಲಿತ ಸಮುದಾಯದವರನ್ನೇ ಬಳಸಿಕೊಂಡು ದಲಿತ ರಾಜಕಾರಣಿಗಳನ್ನು ನಿರ್ಣಾಮ ಮಾಡುತ್ತಾ ಹೊರಟ ಸಿದ್ದರಾಮಯ್ಯರನ್ನು ಅವರು ಎಲ್ಲೇ ಸ್ಪರ್ಧೆ ಮಾಡಿದರೂ ಮತದಾರರು ಸೋಲಿಸಬೇಕೆಂದು ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಹೆಬ್ಬಾಳ ವೆಂಕಟೇಶ್ ಕರೆ ನೀಡಿದರು.

ಅವರು ಶನಿವಾರ ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದರು. ಜೆಡಿಎಸ್ ಪಕ್ಷದಿಂದ ಉಚ್ಚಾಟನೆಗೊಂಡ ಸಿದ್ಧರಾಮಯ್ಯನವರನ್ನು ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದವರು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿದ್ದ ಬಿಎಸ್ಪಿ ಅಭ್ಯರ್ಥಿಯನ್ನು ಸ್ಪರ್ಧಿಸದಂತೆ ಮಾಡಿ ರಾಜಕೀಯ ಮರುಜೀವ ನೀಡಿದರು. ಒಂದು ವೇಳೆ ಅಂದು ಬಿಎಸ್‌ಪಿ ಅಭ್ಯರ್ಥಿ ಸ್ಪರ್ಧಿಸಿದ್ದರೆ ಸಿದ್ದರಾಮಯ್ಯನವರ ರಾಜಕೀಯ ಜೀವನ ಅಂದೇ ಮುಕ್ತಾಯವಾಗುತ್ತಿತ್ತು ಎಂದರು.

ಈ ರೀತಿಯಾಗಿ ತ್ಯಾಗ ಮಾಡಿದ ದಲಿತರಿಗೆ ಸಿದ್ಧರಾಮಯ್ಯ ಮಾಡಿದ್ದಾದರೂ ಏನೂ ಮಲ್ಲಿಖಾರ್ಜುನ ಖರ್ಗೆಯವರಿಂದ ಹಿಡಿದು ಡಾ.ಜಿ.ಪರಮೇಶ್ವರ್ ವರೆಗೆ ದಲಿತ ನಾಯಕರನ್ನು ತುಳಿದಿದ್ದೇ. ಡಾ.ಜಿ.ಪರಮೇಶ್ವರ್ ಗೆದ್ದರೆ ಮುಖ್ಯಮಂತ್ರಿಯಾಗುತ್ತಾರೆAದು ಮನಗಂಡು ಅವರನ್ನು ಒಳಸಂಚು ರೂಪಿಸಿ ಕುತಂತ್ರದಿoದ ಸೋಲಿಸಿದರು.

ಅಹಿಂದ ಮುಖವಾಡ ಧರಿಸಿರುವ ಸಿದ್ಧರಾಮಯ್ಯ ಸಾಮಾಜಿಕ ನ್ಯಾಯಕ್ಕೆ ಧ್ವನಿ ಎತ್ತುವ ನಾಯಕರನ್ನು ತುಳಿದಿದ್ದಾರೆ. ಶ್ರೀನಿವಾಸಪ್ರಸಾದ್ ಅವರನ್ನು ಯಾವುದೇ ಮುನ್ಸೂಚನೆ ನೀಡದೆ ಏಕಾ ಏಕಿ ಸಚಿವ ಸ್ಥಾನದಿಂದ ಕೆಳಗಿಳಿಸಿದರು. ದೇವರಾಜು ಅರಸು ರವg ಕಿಂಚಿತ್ತು ಗುಣಗಳೂ ಸಿದ್ಧರಾಮಯ್ಯನವರಲ್ಲಿಲ್ಲ, ಬಂದ ದಾರಿಯನ್ನು ಮರೆತು ಯಾರೂ ತನಗಿಂತ ಮುಂದೆ ಬರದಂತೆ ನಾಶ ಮಾಡುವ ನಕಲಿ ನಿಯತ್ತಿನ ರಕ್ತದ ಗುಣ ಇವರದ್ದು.

ಖರ್ಗೆ, ಶ್ರೀನಿವಾಸಪ್ರಸಾದ್, ಪರಮೇಶ್ವರ್, ದ್ರುವನಾರಾಯಣ್, ಮುಂತಾದ ದೊಡ್ಡ ದೊಡ್ಡ ದಲಿತರ ನಾಯಕರಿಗೆ ಮುಖ್ಯಮಂತ್ರಿ ಆಗುವ ಅವಕಾಶವನ್ನು ತಪ್ಪಿಸಿ ದ್ರೋಹ ಮಾಡಿದರುವ ಸಿದ್ಧರಾಮಯ್ಯನವರನ್ನು ರಾಜ್ಯದ ಯಾವುದೇ ಕ್ಷೇತ್ರದಲ್ಲಿ ನಿಂತರೂ ಸೋಲಿಸಬೇಕೆಂದು ಹೇಳಿದರು.

ಭಾರತೀಯ ದಲಿತ ಸೇನೆ ರಾಜ್ಯಾಧ್ಯಕ್ಷ ದಲಿತ ನಾರಾಯಣಸ್ವಾಮಿ ಮಾತನಾಡಿ, ದಲಿತ ಮುಖ್ಯಮಂತ್ರಿ ಮಾಡಬೇಕೆನ್ನುವ ನಮ್ಮ ಸಂಘಟನೆಯ ಬೇಡಿಕೆ ಈಡೇರುವ ತನಕ ನಮ್ಮ ಹೋರಾಟ ಮುಂದುವರೆಯಲಿದೆ. ಕೋಲಾರ ವಿಧಾನ ಸಭಾ ಕ್ಷೇತ್ರಕ್ಕೆ ಸಂಬoಧಿಸಿದoತೆ ಮಾತನಾಡುವುದಾದರೆ, ಸ್ಥಳೀಯ ಅಭ್ಯರ್ಥಿಗಳೇ ನಮ್ಮ ಆಯ್ಕೆ, ಯಾವುದೇ ಪಕ್ಷವಾಗಲೀ ಸ್ಥಳೀಯ ಅಭ್ಯರ್ಥಿಗಳಿಗೇ ಅವಕಾಶ ನೀಡಬೇಕು. ಸಿದ್ಧರಾಮಯ್ಯ ಕೋಲಾರಕ್ಕೆ ಬಂದರೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.

ಇನ್ನೂ ಶುಕ್ರವಾರ ಸಂಜೆ ಮಾದ್ಯಮಗಳಲ್ಲಿ ಪ್ರಕಟವಾದಂತೆ ಸಿದ್ಧರಾಮಯ್ಯನವರಿಗೆ ಕೋಲಾರಕ್ಕಿಂತ ವರುಣಾ ಕ್ಞೇತ್ರವೇ ಸೇಫ್ ಎಂದು ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ತಿಳಿಸಿದ್ದು, ಸಿದ್ಧರಾಮಯ್ಯನವರ ಜೊತೆ ೧೫ ನಿಮಿಷಗಳ ಮಾತುಕಥೆಯಲ್ಲಿ ಕ್ಷೇತ್ರ ಬದಲಾವಣೆ ಬೇಡ, ಸ್ವಕ್ಷೇತ್ರ ವರುಣಾದಿಂದಲೇ ಸ್ಪರ್ಧಿಸಲು ಸೂಚಿಸಿರುವುದಾಗಿ ತಿಳಿಸಿದ್ದಾರೆನ್ನಲಾಗಿದ್ದು, ಇದು ಸ್ವಾಗತಾರ್ಹ ಎಂದರು.

ಈ ಸಂದರ್ಭದಲ್ಲಿ ದಲಿತ ಸಂಘಟನೆಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ಮೈಸೂರಿನ ಶಿವಣ್ಣ ಕಂದೇಗಾಲ, ಅತ್ತಿಗುಂದ ಕರಿಯಪ್ಪ, ಉಪಸ್ಥಿತರಿದ್ದರು.

Related Post

ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ
ತಳಸಮುದಾಯವರು ಇಂದಿನ ಸುಳ್ಳುಗಳ ಜೊತೆಗೆ ಟ್ಯಾಗ್ ಆಗುತ್ತಿರುವುದು ದುರಂತ – ಎಲ್.ಎನ್.ಮುಕು0ದರಾಜ್
ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ರವರಿಗೆ ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತ ರಂಗ ಬೆಂಬಲ : ಡಾ.ಎಂ. ಚಂದ್ರಶೇಖರ್

Leave a Reply

Your email address will not be published. Required fields are marked *

You missed

error: Content is protected !!