ಕೋಲಾರ ನಗರದಲ್ಲಿ ಮಹರ್ಷಿ ವಾಲ್ಮೀಕಿ ಭವನವನ್ನು ವಾಲ್ಮೀಕಿ ಸಮುದಾಯದವರಿಗೆ ಮಾಹಿತಿ ನೀಡದೆ ಉದ್ಘಾಟನೆ ಮಾಡಲು ಹೊರಟಿದ್ದ ಜಿಲ್ಲಾಡಳಿತ ನಡೆಯನ್ನು ಖಂಡಿಸಿ ವಾಲ್ಮೀಕಿ ಸಮುದಾಯದ ಮುಖಂಡರು ಜಿಲ್ಲಾಽಕಾರಿಗಳನ್ನು ಭೇಟಿ ಮಾಡಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
ಮಹರ್ಷಿ ವಾಲ್ಮೀಕಿ ಭವನದ ಜಮೀನನ್ನು ಪಕ್ಕದ ಕಟ್ಟಡದಾರರು ಒತ್ತುವರಿ ಇನ್ನು ತೆರವು ಆಗಿರುವುದಿಲ್ಲ. ಭವನದ ಸುತ್ತ ಕಾಂಪೌಂಡ್ ಪೂರ್ಣ ಪ್ರಮಾಣದಲ್ಲಿ ಮುಗಿದಿಲ್ಲ. ಈಗಿದ್ದರೂ ತರಾತುರಿಯಲ್ಲಿ ಭವನವನ್ನು ಉದ್ಘಾಟನೆ ಮಾಡಲು ಹೊರಟಿರುವುದು ಸಮುದಾಯದವರ ಆಕ್ರೋಶಕ್ಕೆ ಕಾರಣವಾಗಿದೆ.
ಜಿಲ್ಲಾ ಕೇಂದ್ರದಲ್ಲಿ ತಲೆ ಎತ್ತಿರುವ ಭವನವನ್ನು ಸಮುದಾಯದ ಸ್ವಾಮೀಜಿಗಳು, ಸಮುದಾಯದ ರಾಜ್ಯ ಮುಖಂಡರುಗಳ ಉಪಸ್ಥಿತಿಯಲ್ಲಿ ಹಾಗೂ ವಾಲ್ಮೀಕಿ ಸಮುದಾಯದವರ ವಿಶ್ವಾಸದೊಂದಿಗೆ ಸುಂದರ ಸಮಾರಂಭದಲ್ಲಿ ಭವನವನ್ನು ಉದ್ಘಾಟಿಸಲು ಸಮುದಾಯದ ಮುಖಂಡರು ಜಿಲ್ಲಾಽಕಾರಿಗಳನ್ನು ಬೇಟಿಯಾಗಿ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಇಲಾಖಾಧಿಕಾರಿಗಳನ್ನು ಸಂಪರ್ಕಿಸಿ ಉದ್ಘಾಟನಾ ಕಾರ್ಯಕ್ರಮವನ್ನು ರದ್ದುಪಡಿಸಿ ಮುಂದೊಂದು ದಿನ ಸುಂದರ ವಾತಾವರಣದಲ್ಲಿ ಕಾರ್ಯಕ್ರಮವನ್ನು ನಡೆಸುವುದಾಗಿ ಮುಖಂಡರುಗಳಿಗೆ ಆಶ್ವಾಸನೆ ನೀಡಿದರು.
ಜಿಲ್ಲಾಧಿಕಾರಿಗಳ ಭೇಟಿ ಮಾಡಿದ ನಿಯೋಗದಲ್ಲಿ ಜಿಲ್ಲಾ ಮುಖಂಡರುಗಳಾದ ನರಸಿಂಹಯ್ಯ, ಆನಂದ್‌ಕುಮಾರ್, ಕೋಟೆ ಶ್ರೀನಿವಾಸ್, ಆಂಜಿನಪ್ಪ, ನವೀನ್, ಶ್ರೀನಿವಾಸಪುರ ವೆಂಕಟ್, ರಾಜು, ತರ‍್ನಹಳ್ಳಿ ಆಂಜಿ, ತಿರುಮಲೇಶ್, ತಿಮ್ಮಣ್ಣ, ಕೆ.ಎಸ್.ಆರ್.ಟಿ.ಸಿ.ಮುನಿಯಪ್ಪ, ಸುಗಟೂರು ವೇಣು ಇನ್ನಿತರರು ಉಪಸ್ಥಿತರಿದ್ದರು.