*ಗಳಿಗೆ ಕಲ್ಪಿಸುವೆ:ಶಾಸಕಿ ರೂಪಕಲಾ.*
ಕೆಜಿಎಫ್:ನಿತ್ಯ ಸಣ್ಣ ವ್ಯಾಪಾರದ ಮೂಲಕ ಜೀವನ ನಡೆಸುತ್ತಿರುವ ಸಣ್ಣ ವ್ಯಾಪಾರಿಗಳಿಗೆ ಮೂಲ ಭೂತ ಸೌಲಭ್ಯ ಕಲ್ಪಿಸುವುದಾಗಿ ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ಭರವಸೆ ನೀಡಿದರು.
ಬೇತಮಂಗಲದ ಸಂತೆ ಮೈದಾನ ಸೇರಿದಂತೆ ಬೀದಿ ಬದಿಯಲ್ಲಿ ತರಕಾರಿ ಅಂಗಡಿಗಳು, ಹೂವು ಅಂಗಡಿಗಳು ಹಾಗೂ ಹಣ್ಣು ಅಂಗಡಿಗಳು ಸೇರಿದಂತೆ ಇತರೆ ಸಣ್ಣ ವ್ಯಾಪಾರ ನಡೆಸುತ್ತಿರುವ ಸಂತೆ ಮೈದಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.
ಗ್ರಾಮದ ಸಂತೆ ಮೈದಾನದಲ್ಲಿ ಸುಮಾರು ದಿನಗಳಿಂದ ಅಂಗಡಿಗಳನ್ನು ಹಾಕಿಕೊಂಡು ಸಣ್ಣ ವ್ಯಾಪಾರದ ಮೂಲಕ ಜೀವನ ನಡೆಸುತ್ತಿರುವವರಿಗೆ ಶೀಘ್ರವಾಗಿ ಶೆಡ್ಡುಗಳನ್ನು ನಿರ್ಮಿಸುವ ಯೋಜನೆ ರೂಪಿಸುವುದಾಗಿ ಭರವಸೆ ನೀಡಿದರು.
ಸಂತೆ ವ್ಯಾಪಾರಿಗಳಿಗಾಗಿ ಗ್ರಾಪಂನಿಂದ ಸುಸಜ್ಜಿತವಾಗಿ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ, ಶೀಘ್ರವಾಗಿ ಕಾಮಗಾರಿ ಪೂರ್ಣ ಗೊಳಿಸಿ ಉದ್ಘಾಟನೆ ಮಾಡಿ ಜನರ ಉಪಯೋಗಕ್ಕೆ ನೀಡುವುದಾಗಿ ತಿಳಿಸಿದರು.