• Sat. Mar 25th, 2023

ಬಂಗಾರಪೇಟೆ:ಕೃಷಿಕ ಸಮಾಜವು ಖಾಸಗಿ ಸಂಸ್ಥೆಯಾಗಿದ್ದು ರೈತರ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತದೆ ಎಂದು ಕೋಲಾರ ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ವಡಗೂರು ಡಿ.ಎಲ್. ನಾಗರಾಜ ಹೇಳಿದರು.

ಪಟ್ಟಣದ ಕೋಲಾರ ಮುಖ್ಯ ರಸ್ತೆಯಲ್ಲಿರುವ ಎಪಿಎಂಸಿ ಪ್ರಾಂಗಣ ಸಮೀಪ ಕರ್ನಾಟಕ ಪ್ರದೇಶ ಕೃಷಿಕ ಸಮಾಜ, ಕೋಲಾರ ಜಿಲ್ಲಾ ಕೃಷಿಕ ಸಮಾಜ, ಮತ್ತು ತಾಲೂಕು ಕೃಷಿಕ ಸಮಾಜ ಇವರ ಸಂಯುಕ್ತ ಆಶ್ರಯದಲ್ಲಿ ನೂತನ ಕೃಷಿ ಸಂಕೀರ್ಣ ಕಟ್ಟಡವನ್ನು ಉದ್ಘಾಟಿಸಿ ಅವರು  ಮಾತನಾಡಿದರು.

ಕರ್ನಾಟಕ ಪ್ರದೇಶ ಕೃಷಿಕ ಸಮಾಜವು ಮುಖ್ಯವಾಗಿ ರೈತರಿಗೆ ಕೃಷಿ ವಿಸ್ತರಣಾ ಸೇವೆಗಳನ್ನು ಒದಗಿಸಲು ಮತ್ತು ಕೃಷಿ ಸಮುದಾಯಕ್ಕೆ ಇತ್ತೀಚಿನ ತಾಂತ್ರಜ್ಞಾನವನ್ನು ವರ್ಗಾಯಿಸಲು, ಹೆಚ್ಚಿನ ಇಳುವರಿ ತಳಿಗಳ ಪರಿಚಯ, ಪ್ರಾತ್ಯಕ್ಷಿಕೆಗಳನ್ನು ನೀಡುವುದು.

ಕೌಶಲ್ಯ ಮತ್ತು ಜ್ಞಾನವನ್ನು ಹೆಚ್ಚಿಸಲು ರೈತರಿಗೆ ತರಬೇತಿಯನ್ನು ನೀಡಲು ಸಮಿತಿ ರಚಿಸುವುದು, ರೈತರ ಸಮಸ್ಯೆಗಳನ್ನು ಅಧ್ಯಯನ ಮಾಡಿ ಪರಿಹರಿಸುವುದು ಹಾಗೂ ಸರಕಾರಕ್ಕೆ ಸೂಕ್ತ ಸಲಹೆ ನೀಡುವುದು ಪ್ರಮುಖ ಜವಾಬ್ದಾರಿಗಳಾಗಿದೆ.

ಜೊತೆಗೆ ರೈತರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಅಭಿವೃದ್ಧಿ ಅಗತ್ಯಗಳನ್ನು ರಕ್ಷಿಸಲು ಕೃಷಿಕ ಸಮುದಾಯ ಬದ್ಧವಾಗಿದ್ದು, ಪ್ರಾರಂಭದಲ್ಲಿ 110 ರೂಗಳು ಶೇರುಗಳನ್ನು ನಮ್ಮ ಸಂಸ್ಥೆ ಒಳಗೊಂಡಿತ್ತು ಎಂದರು.

ತದನಂತರ 550 ರೂಗಳ ಷೇರುಗಳನ್ನು ಒಳಗೊಂಡಿದ್ದು, ಭಾರತ ದೇಶದಲ್ಲಿ ಮಾಲೂರು ಹಾಗೂ ಬಂಗಾರಪೇಟೆ ಅತ್ಯುನ್ನತ ಕೃಷಿಕ ಸಮಾಜ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ, ಬಂಗಾರಪೇಟೆಯಲ್ಲಿ ಒಂದು ಕೋಟಿ ವೆಚ್ಚದಲ್ಲಿ ಕೃಷಿ ಸಂಕೀರ್ಣವನ್ನು ನಿರ್ಮಿಸಲಾಗಿದೆ.

ಈ ಸಂಕೀರ್ಣ ನಿರ್ಮಾಣಗೊಳ್ಳಲು ಎ.ಪಿ.ಎಂ.ಸಿ ಮಾಜಿ ಅದ್ಯಕ್ಷ ದಿವಂಗತ ಎನ್.ಎರ್. ವಿಜಯಶಂಕರ್ ಮತ್ತು ಹಾಲಿ ಸದಸ್ಯ ಜಿ.ಎಸ್ ಶಿವಶಂಕರ್ ರವರು ಸೇರಿದಂತೆ ಆಡಳಿತ ಮತ್ತು ಅಧಿಕಾರಿಗಳು ತುಂಬಾ ಸಹಕಾರ ನೀಡಿದರು ಎಂದು ಸ್ಮರಿಸಿದರು.

ಒಂದೇ ಸೂರಿನ ಅಡಿಯಲ್ಲಿ ಕೃಷಿ ಪರಿಕರಗಳು ಲಭ್ಯವಾಗುವಂತೆ ಮಳಿಗೆಗಳನ್ನು ಸ್ಥಾಪಿಸಲಾಗಿದೆ, ಈ ಮಳಿಗೆಗಳಿಂದ ಬರುವಂತಹ ಹಣ ನೇರವಾಗಿ ಖಾತೆಗೆ ಜಮವಾಗುತ್ತದೆ ನಂತರ ಆಡಳಿತ ಮಂಡಳಿಯ ಸದಸ್ಯರೊಂದಿಗೆ ಚರ್ಚಿಸಿ ಕೃಷಿಕರ ಅಭ್ಯುದಯಕ್ಕಾಗಿ ವೆಚ್ಚ ಮಾಡಲಾಗುವುದು ಎಂದು ತಿಳಿಸಿದರು.

ಶಾಸಕ ಎಸ್.ಏನ್.ನಾರಾಯಣಸ್ವಾಮಿ ಮಾತನಾಡಿ ಮುಂಬರುವ ದಿನಗಳಲ್ಲಿ ಕೃಷಿಕ ಸಮಾಜದ ಒಳಿತಿಗಾಗಿ 25 ಲಕ್ಷ ರೂಗಳನ್ನು ನೀಡುವ ಭರವಸೆಯನ್ನು ನೀಡಿದರು, ಹಾಗೂ ರಾಜಾ ರೆಡ್ಡಿಯವರ ದೃಡ ಸಂಕಲ್ಪದಿಂದ “ಕೃಷಿಕ ಸಂಕೀರ್ಣ” ನಿರ್ಮಾಣವಾಗಿರುವುದು ಅತ್ಯಂತ ಹೆಮ್ಮೆಯ ವಿಚಾರ ಎಂದು ತಿಳಿಸಿದರು.

ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ರಾಜಾ ರೆಡ್ಡಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಕೃಷಿಕ ಸಮಾಜದ ವತಿಯಿಂದ ಆನೆ ತುಳಿತಕ್ಕೆ ಒಳಗಾದ ಕುಟುಂಬದ ಸದಸ್ಯರಿಗೆ ತಲಾ 25,000 ಸಾವಿ ರೂ ಸಹಾಯಧನ ನೀಡಲಾಯಿತು ಇದೇ ವೇಳೆ ಉಪಾದ್ಯಕ್ಷ ಕೃಷ್ಣಪ್ಪ ತಮ್ಮ ಸ್ವಂತ ಹಣ ತಲಾ 1ಸಾವಿರ ನೀಡಿದರು.

ಕಾರ್ಯಕ್ರಮದಲ್ಲಿ ಕೃಷಿಕ ಸಮಾಜದ ಗೌರವಾಧ್ಯಕ್ಷ ಕೆ.ಚಂದ್ರಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಕೆ.ಎಂ.ಮಂಜುನಾಥ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಎಸ್. ಪ್ರತಿಭಾ. ಡಿಸಿಸಿ ಬ್ಯಾಂಕ್ ನಿರ್ಧೇಶಕ ಪಿಚ್ಚಹಳ್ಳಿ ಗೋವಿಂದರಾಜು, ಪಿ.ಎಲ್.ಡಿ ಬ್ಯಾಂಕ್ ಅದ್ಯಕ್ಷ ಹೆಚ್.ಕೆ.ನಾರಾಯಣಸ್ವಾಮಿ, ಎ.ಪಿ.ಎಂ.ಸಿ ಮಾಜಿ ಅದ್ಯಕ್ಷರಾದ ಎಸ್.ನಾರಾಯಣಗೌಡ,  ಚಂಗಾರೆಡ್ಡಿ, ಸದಸ್ಯ ಜಿ.ಎಸ್.ಶಿವಶಿವಶಂಕರ್. ಮುಖಂಡರಾದ ಅಕ್ಕಮ್ಮನದಿನ್ನೆ ವೆಂಕಟೇಶಪ್ಪ, ಮಾದಮಂಗಲ ರಮೇಶ್, ಕಾರಹಳ್ಳಿ ಮೋಹನ್, ರಾಮನಾಯಕನಹಳ್ಳಿ ಎಂ.ಶ್ರೀನಿವಾಸಗೌಡ, ರವಿಕುಮಾರ್ ಮೊದಲಾದವರಿದ್ದರು.

Leave a Reply

Your email address will not be published. Required fields are marked *

You missed

error: Content is protected !!