ಕೋಲಾರ ನಗರದ ಕೋಲಾರ ಅರ್ಬನ್ ಕೋ-ಅಪರೇಟಿವ್ ಕ್ರೆಡಿಟ್ ಸೊಸೈಟಿ ನೂತನ ಕಟ್ಟಡವನ್ನು ಸೊಸೈಟಿ ಅಧ್ಯಕ್ಷ ವಿ. ಕೃಷ್ಣ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ವಿ.ಕೃಷ್ಣರವರು ಮಾತನಾಡಿ, ಕೋಲಾರ ಅರ್ಬನ್ ಬ್ಯಾಂಕ್ ೧೧೫ ವರ್ಷ ಪೂರೈಸಿದ್ದು, ೧೨ ಮಳಿಗೆಗಳನ್ನು ಹೊಂದಿದ್ದು, ೨೦೨೦-೨೦೨೫ ನೇ ಸಾಲಿನ ನಮ್ಮ ಆಡಳಿತ ಮಂಡಳಿ ಸಹಕಾರದಿಂದ ಇಂದು ೭ ಮಳಿಗೆಗಳನ್ನು ನೂತನವಾಗಿ ನಿರ್ಮಾಣ ಮಾಡಿ ಉದ್ಘಾಟಿಸಲಾಗಿದೆ ಎಂದರು.
ಲಕ್ಷ್ಮಿ ಪೂಜೆಯಲ್ಲಿ ಮುಖ್ಯ ಅತಿಥಿಗಳಾಗಿ ನಗರಸಭಾ ಸದಸ್ಯರಾದ ಸೌಭಾಗ್ಯ ಮು.ರಾಘವೇಂದ್ರ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕೋಲಾರ ಅರ್ಬನ್ ಕೋ-ಅಪರೇಟಿವ್ ಕ್ರೆಡಿಟ್ ಸೊಸೈಟಿ ಆಡಳಿತ ಮಂಡಳಿ ಉಪಾಧ್ಯಕ್ಷ ಎಂ.ಮುನಿರಾಜು, ನಿರ್ದೇಶಕರಾದ ಎನ್.ರಾಜಣ್ಣ, ಎನ್. ವೆಂಕಟೇಶ್, ಎಸ್.ರವಿಚಂದ್ರನ್, ಎಸ್. ಎಂ. ನಾಗರಾಜ್, ಎಸ್. ಸುರೇಶ್, ಕೆ.ನಟರಾಜ್, ಎಸ್. ಪುಷ್ಪಲತಾ, ಕೆ. ಬಬಿತಾ, ಕಾರ್ಯದರ್ಶಿ ಡಿ. ಜೆ. ಸುಬ್ರಮಣಿ, ಹಿರಿಯ ಕಾರ್ಯದರ್ಶಿ ಎಲ್.ಸಿ.ಜಯಪ್ರಕಾಶ್, ಸಿಬ್ಬಂದಿಗಳಾದ ಎಸ್. ಸುಜಾತ ಎಂ. ಕನ್ನಪ್ಪ,ಎಂ. ಕನಕಪ್ರಸಾದ್ ಮತ್ತಿತರರಿದ್ದರು.