PLACE YOUR AD HERE AT LOWEST PRICE
ಕೆಜಿಎಫ್:ಕೆಜಿಎಫ್ ವಿಧಾನಸಭಾ ಕ್ಷೇತ್ರದ ಸಿಪಿಐಎಂ ಅಭ್ಯರ್ಥಿಯನ್ನಾಗಿ ನಗರಸಭೆ ಸದಸ್ಯ ಪಿ.ತಂಗರಾಜ್ ಅವರನ್ನು ಆಯ್ಕೆ ಮಾಡಲಾಗಿದೆ.
ಕೆಜಿಎಫ್ ನಗರದ ಮಾರಿಕುಪ್ಪನ ಸೌತ್ ಗಿಲ್ ಬರ್ಟ್ಸ್ ನಲ್ಲಿ ನಡೆದ ಸಿಪಿಐಎಂ ರಾಜಕೀಯ ಸಮಾವೇಶದಲ್ಲಿ ತಂಗರಾಜ್ ಅವರ ಅಧಿಕೃತ ಆಯ್ಕೆ ನಡೆಯಿತು.
ಈ ವೇಳೆ ಸಿಪಿಐಎಂ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ.ಪ್ರಕಾಶ್ ಮಾತನಾಡಿ, ಈಗಿನ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಸಿಬೇಕು.
ಆಡಳಿತ ವೈಫಲ್ಯದ ಈ ಸರ್ಕಾರವನ್ನು ತೊಲಗಿಸಿ ಜ್ಯಾತ್ಯಾತೀತ ಮತ್ತು ಪ್ರಜಾಸತ್ತಾತ್ಮಕ ಸರ್ಕಾರ ಅಧಿಕಾರಕ್ಕೆ ತರಬೇಕಿದೆ ಎಂದರು.
ಇಂತಹ ಸಂದರ್ಭದಲ್ಲಿ ಇಲ್ಲಿನ ಜನರ ಕೆಲಸ ಮಾಡಲು ವಿಧಾನಸಭೆಯಲ್ಲಿ ಕೆಜಿಎಫ್ ನಿಂದ ಗೆದ್ದ ಸಿಪಿಐಎಂ ಶಾಸಕರು ಇರಬೇಕು ಎಂದರು.
ಕೆಜಿಎಫ್ ಕಾರ್ಮಿಕರು ಹೆಚ್ಚು ಇರುವ ಕ್ಷೇತ್ರವಾಗಿದ್ದು, ಮೊದಲ ಶಾಸಕರಿಂದ ಹಿಡಿದು ನಾಲ್ಕು ಬಾರಿ ಸಿಪಿಐಎಂ ಶಾಸಕರು ಇಲ್ಲಿಂದ ಆಯ್ಕೆಯಾಗಿದ್ದರು.
ಬೆಮೆಲ್ ಕಾರ್ಖಾನೆಯಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿದೆ. ಬೆಮೆಲ್ ನಲ್ಲಿ ದುಡಿಯುತ್ತಿರುವ ಗುತ್ತಿಗೆ ನೌಕರರಿಗೆ ಸೌಲಭ್ಯಗಳು ಸಿಗುತ್ತಿಲ್ಲ.
ನಗರದ ಇತರೆ ರಾಜಕೀಯ ಪಕ್ಷಗಳಿಗೆ ಅಭಿವೃದ್ಧಿಯ ಚಿಂತೆ ಇಲ್ಲ ಎಂದ ಅವರು ಸಿಪಿಐಎಂ ಪಕ್ಷ ಅಭಿವೃದ್ಧಿ ಪರವಾಗಿ ಸದಾ ಶ್ರಮಿಸುತ್ತದೆ ಎಂದರು.
ಈ ವೇಳೆ ಅಭ್ಯರ್ಥಿ ತಂಗರಾಜ್, ಮುಖಂಡರಾದ ಗಾಂಧಿನಗರ ನಾರಾಯಣಸ್ವಾಮಿ, ಪಿ.ಶ್ರೀನಿವಾಸನ್, ಎ.ಆರ್.ಬಾಬು, ಆನಂದನ್ ಮೊದಲಾದವರಿದ್ದರು.