ಯುಗಾದಿ ಉತ್ಸವವನ್ನು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಮಾ. ೨೨ ರಂದು ಬುಧುವಾರ ಸಂಜೆ ೭ ಗಂಟೆಗೆ ಆಯೋಜನೆ ಮಾಡಲಾಗಿದೆ ಎಂದು ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ವಿ.ಗೋಪಿನಾಥ್ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿಎಂಆರ್ ಫೌಂಡೇಶನ್ ಮತ್ತು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಹಾಗೂ ನಾಗರೀಕರ ವೇದಿಕೆ ಆಶ್ರಯದಲ್ಲಿ ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಡಿ. ದೇವರಾಜ್ ಅವರು ಆಯೋಜಿಸಿರುವ ಯುಗಾದಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ವಿಗೆ ಜನತೆ ಸಹಕರಿಸಿ ಎಂದು ಮನವಿ ಮಾಡಿದರು.
ಯುಗಾದಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ಅನುರಾಧ ಭಟ್ ಸೇರಿ ಜನಪದ ಕಲಾವಿದೆ ಮಂಗ್ಲಿ, ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆಗೆ ಅನುಶ್ರೀ ಇತರರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದರು.
ಪತ್ರಕರ್ತರ ಸಂಘ ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು ಮಾತನಾಡಿ, ನಗರದ ಹೃದಯ ಭಾಗದ ಜೂನಿಯರ್ ಕಾಲೇಜು ಮೈದಾನದಲ್ಲಿ ೨ನೇ ವರ್ಷದ ಯುಗಾದಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮವೂ ಹೊಸ ವರ್ಷದ ಆಚರಣೆಯಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಸಹ ಯುಗಾದಿಯ ಉತ್ಸವ ಕಾರ್ಯಕ್ರಮದ ಸಂಗೀತವನ್ನು ಸವಿಸುವ ನಿಟ್ಟಿನಲ್ಲಿ ಯಶಸ್ಸಿಗೆ ಮುಂದಾಗಿ ಎಂದರು.
ಸುದ್ದಿಗೋಷ್ಟಿಯಲ್ಲಿ ಡಿಎಂಆರ್ ಫೌಂಡೇಶನ್ ಕಾರ್ಯದರ್ಶಿ ರಘುನಾಥರೆಡ್ಡಿ, ಮಹೇಶ್, ಎಪಿಎಂಸಿ ಪುಟ್ಟರಾಜು, ಕುರುಬರಪೇಟೆ ವೆಂಕಟೇಶ್, ಚಿನ್ನಿ ವೆಂಕಟೇಶ್, ಬಿ.ವಿ.ವಿ.ಗಿರಿ, ಚಂದ್ರಕಾAತ್, ಸೂರ್ಯವಂಶಿ, ಗಿರಿಯಪ್ಪ ಉಪಸ್ಥಿತರಿದ್ದರು.