ಕೋಲಾರ ಸಿದ್ಧರಾಮಯ್ಯ ಕ್ಷೇತ್ರವಲ್ಲ, ಇದು ಅಲ್ಪಸಂಖ್ಯಾತರ ಕ್ಷೇತ್ರ, ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡದಿದ್ದರೆ, ಇಂಡಿಯನ್ ಮೂವ್‌ಮೆಂಟ್ ಪಾರ್ಟಿ ಕೇವಲ ೫ ರೂಪಾಯಿಗೆ ಬಿ.ಫಾರಂ ನೀಡಲಿದೆ – ಅಬ್ದುಲ್ ಸುಭಾನ್
ಕಾಂಗ್ರೆಸ್ ಪಕ್ಷ ಕೋಲಾರದಲ್ಲಿ ಒಬ್ಬ ಅಲ್ಪಸಂಖ್ಯಾತ ಅಭ್ಯರ್ಥಿಗೇ ಟಿಕೆಟ್ ನೀಡಬೇಕು, ಇಲ್ಲವಾದರೆ ಇಂಡಿಯನ್ ಮೂವ್‌ಮೆಂಟ್ ಪಾರ್ಟಿ ಕೇವಲ ಐದು ರೂಪಾಯಿಗೆ ಅಲ್ಪಸಂಖಾತ ಅಭ್ಯರ್ಥಿಗೆ ಬಿ.ಫಾರಂ ನೀಡಲಿದೆ ಎಂದು ಇಂಡಿಯನ್ ಮೂವ್‌ಮೆಂಟ್ ಪಾರ್ಟಿ ರಾಷ್ಟಿçÃಯ ಅಧ್ಯಕ್ಷ ಅಬ್ದುಲ್ ಸುಬಾನ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ಧಿಗಾರರೊಂದಿಗೆ ಅವರು ಮಾತನಾಡಿದರು. ಕೋಲಾರ ವಿಧಾನಸಭಾ ಕ್ಷೇತ್ರ ಸಿದ್ಧರಾಮಯ್ಯನವರ ಕ್ಷೇತ್ರವಲ್ಲಾ, ಇಲ್ಲಿ ಅಲ್ಪಸಂಖ್ಯಾತರೇ ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಇದು ಅಲ್ಪಸಂಖ್ಯಾತರ ಕ್ಷೇತ್ರವಾಗಿದೆ, ಕಾಂಗ್ರೆಸ್ ಪಕ್ಷ ಸಿದ್ಧರಾಮಯ್ಯನವರಿಗೆ ಟಿಕೆಟ್ ನೀಡಬಾರದು, ಬದಲಾಗಿ ಅಲ್ಪಸಂಖ್ಯಾರೊಬ್ಬರಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡುವಲ್ಲಿ ತಪ್ಪಿದರೆ, ಇಂಡಿಯನ್ ಮೂವ್‌ಮೆಂಟ್ ಪಾರ್ಟಿ ತಮ್ಮದೇ ಪಕ್ಷದ ಅಲ್ಪಸಂಖ್ಯಾತರ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಲ್ಲದೆ, ಅಭ್ಯರ್ಥಿಯ ಎಲ್ಲಾ ಚುನಾವಣೆ ಖರ್ಚು ವೆಚ್ಚಗಳನ್ನು ಪಕ್ಷದ ವತಿಯಿಂದಲೇ ಭರಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಹೆಬ್ಬಾಳ ವೆಂಕಟೇಶ್,ಪ್ರಧಾನ ಕಾರ್ಯದರ್ಶಿ ಮಹದೇವ್ ಬುದಗಾವಿ, ಸಂಘಟನಾ ಕಾರ್ಯದರ್ಶಿ ಎಂ.ಐ. ನರಗುಂದ್, ರಾಜ್ಯ ಕಾರ್ಯದರ್ಶಿ ಗೋಪಿ ಬಳ್ಳಾರಿ ಹಾಗೂ ಇತರರು ಉಪಸ್ಥಿತರಿದ್ದರು.