• Thu. Mar 28th, 2024

PLACE YOUR AD HERE AT LOWEST PRICE

ಬಂಗಾರಪೇಟೆ:ಶಾಸಕರು ದೌರ್ಜನ್ಯ ನಿಲ್ಲಿಸಬೇಕು. ನಿಮ್ಮಗಳ ದೌರ್ಜನ್ಯಕ್ಕೆ ನಾವು ಹಿಂಜರಿಯುವುದಿಲ್ಲ. ಹಾಗೂ ನಮ್ಮ ವೇಗವನ್ನು ನಿಲ್ಲಿಸಲಿಕ್ಕಾಗುವುದಿಲ್ಲ ಎಂದು ಜೆ.ಡಿ.ಎಸ್ ಯುವ ಘಟಕದ ರಾಜ್ಯದ್ಯಕ್ಷ ನಿಖಿಲ್ ಕುಮಾರಸ್ವಾಮಿ ಎಚ್ಚರಿಸಿದರು.

ಪಟ್ಟಣದ ಶ್ಯಾಂ ಆಸ್ಪತ್ರೆ ಮುಂಭಾಗ ಏರ್ಪಡಿಸಿದ್ದ ಜೆ.ಡಿ.ಎಸ್ ಕಾರ್ಯಕರ್ತರ ಬೃಹತ್ ಸಮಾವೇಶ ಮತ್ತು ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶಾಸಕರು ಅಧಿಕಾರ ದುರುಪೋಯಗ ಮಾಡಿಕೊಳ್ಳುತ್ತಿದ್ದಾರೆ.

ಪಕ್ಷದ ಸಮಾವೇಶಕ್ಕೆ ಬೈಕುಗಳಲ್ಲಿ ರ್ಯಾಲಿ ಮೂಲಕ ಬಂದಂತಹ  ಯುವ ಸಮುದಾಯದ ಶಕ್ತಿಯೇ ಮುಂದಿನ ಚುನಾವಣೆಯ ಗೆಲುವಿನ ದಿಕ್ಸೂಚಿ, ತಾಲ್ಲೂಕು ಕಾಂಗ್ರೇಸ್ ಪಕ್ಷದವರು ಗೆದ್ದೇ ಗೆಲ್ಲುತ್ತೇವೆಂಬ ಹರಕೆ ಮಾಡಿಕೊಂಡರೂ ಪ್ರಯೋಜನವಿಲ್ಲ.

ಯುವಶಕ್ತಿಯೊಂದಿಗೆ ಹೋರಾಟ ಮಾಡುತ್ತಿರುವ ಮಲ್ಲೇಶ್ ಬಾಬುರನ್ನು ಮತ್ತು ಪಕ್ಷದ ಯುವಕರನ್ನು ನೀವು ಎಷ್ಟೇ ಬೆದರಿಸಿದರು ಅವರು ಹಿಂಜರಿಯುದಿಲ್ಲ. ಪ್ರತಿದಿನವೂ ನಮ್ಮ ಶಕ್ತಿ ಹೆಚ್ಚುತ್ತಲೇ ಇರುತ್ತದೆ ಎಂದರು.

ಜೆಡಿಎಸ್ ಪಕ್ಷ ದಿನೇ ದಿನೇ ಬಲಗೊಳ್ಳುತ್ತಿರುವುದನ್ನು ಸಹಿಸಿಕೊಳ್ಳಲಾಗದೆ ಶಾಸಕರು ದೌರ್ಜನ್ಯ ಮತ್ತು ದಬ್ಬಾಳಿಕೆಯ ಮಾರ್ಗ ಹಿಡಿದಿದ್ದಾರೆ. ಆದರೆ ಮತದಾರ ಬಂಧುಗಳು ಜೆಡಿಎಸ್ ಕಡೆ ಮುಖಮಾಡಿದ್ದಾರೆ ಎಂದರು.

ರಾಜ್ಯದ 6.5 ಕೋಟಿ ಜನತೆ ಬದಲಾವಣೆ ಬಯಸಿದ್ದಾರೆ. 75 ವರ್ಷಗಳಿಂದ ರಾಜ್ಯ ದೇಶವನ್ನಾಳುತ್ತಿರುವ ಕಾಂಗ್ರೇಸ್ ಮತ್ತು ಬಿ.ಜೆ.ಪಿ ಪಕ್ಷದವರು ಎಷ್ಟು ಮಂದಿ ಯುವಕರಿಗೆ ಉದ್ಯೋಗ ಸೃಷ್ಠಿಸಿದ್ದಾರೆ. ಈ ಎರಡೂ ರಾಷ್ಟ್ರೀಯ ಪಕ್ಷಗಳು ದೇಶದಲ್ಲಿ ನಿರುದ್ಯೋಗ ಸೃಷ್ಠಿ ಮಾಡಿದ್ದಾರೆಂದರು.

ಕುಮಾರಣ್ಣನವರು ಚಾಲನೆ ನೀಡಿರುವ ಪಂಚರತ್ನ ಯೋಜನೆಗಳನ್ನು ರಾಜ್ಯದ ಎಲ್ಲಾ ವರ್ಗದ ಜನತೆಗೂ ಅನ್ವಯಿಸುತ್ತದೆ. ಕಳೆದ ಬಾರಿ ಕಾಂಗ್ರೇಸ್-ಜೆ.ಡಿ.ಎಸ್ ನ ಸಂಯುಕ್ತ ಸರ್ಕಾರದಲ್ಲಿ ಕೇವಲ 39 ಸೀಟು ಪಡೆದುಕೊಂಡ ಹಿನ್ನೆಲೆಯಲ್ಲಿ ಕಾಂಗ್ರೇಸ್ಸಿಗರ ಕಿರುಕುಳ ತಾಳಲಾರದೆ ಬೇಸತ್ತು ಸರ್ಕಾರವನ್ನು ಕೈಬಿಡಲಾಯಿತು.

ಎರಡೂ ರಾಷ್ಟ್ರೀಯ ಪಕ್ಷಗಳು ಕುಮಾರಣ್ಣರ ಮನೆಗೆ ಬಂದು ನಮಗೆ ಸಹಕರಿಸಿ ಎಂದು ಅಂಗಲಾಚಿದರು. ನಂತರ ಚಿತ್ರಹಿಂಸೆ ನೀಡಲು ಪ್ರಾರಂಬಿಸಿದರು. ಕೊಟ್ಟ ಮಾತಿನಂತೆ ಸಿಕ್ಕಂತಹ ಅಲ್ಪ ಸಮಯದಲ್ಲಿ ಕುಮಾರಣ್ಣ ರೈತರ ಮತ್ತು ಮಹಿಳೆಯರ ಪರ ನಿಂತರು ಎಂದರು.

ರೈತರ ಕೂಲಿಕಾರ್ಮಿಕರ ಹಣ ತೆರಿಗೆ ರೂಪದಲ್ಲಿ ಈಗ ಸರ್ಕಾರ ನಡೆಸುತ್ತಿರುವ ಲೂಟಿಕೋರರ ಕೈ ಸೇರುತ್ತಿದೆ. 40% ಕಮೀಷನ್ ದಂದೆ ನಡೆಸುವ ಬಿ.ಜೆ.ಪಿಯವರು ಲೂಟಿಕೋರ ಸರ್ಕಾರವಾಗಿದೆ ಎಂದು ದೂರಿದರು.

ಬೆಂಗಳೂರು-ಮೈಸೂರು ಎಕ್ಸ್‍ಪ್ರೆಸ್ ಹೈವೇ ಯನ್ನು ತರಾತುರಿಯಲ್ಲಿ ಉದ್ಘಾಟಿಸಿದರು. ಟೋಲ್ ಶುಲ್ಕ ಎಲ್ಲಿಗೆ ಹೋದರೂ 270 ರೂಗಳು, ಆತುರದ ಉದ್ಘಾಟನೆ ಏನಕ್ಕೆ ಬೇಕಿತ್ತು. ಈ ರಸ್ತೆಯನ್ನು  ಶ್ರೀಮಂತರಿಗೋಸ್ಕರ ಈ ರಸ್ತೆ ಮಾಡಿದ್ದೀರಾ ಎಂದು ಪ್ರಶ್ನಿಸಿದರು.

50 ಕಿ.ಮೀ ಒಳಗೆ ಪ್ರೈಮರಿ ಆರೋಗ್ಯ ಕೇಂದ್ರವಿರಬೇಕು. ಸ್ವಚ್ಚಭಾರತ್ ಎನ್ನುವ ನೀವು ಶೌಚಾಲಯ ನಿರ್ಮಿಸಿದ್ದೀರಾ. ಯಾವುದೂ ಇಲ್ಲ, ವಿಜಯ ಸಂಕಲ್ಪ ಅಂದರೆ 40% ಮಾಡಿರುವ ನೀವು ಮತ್ತೊಮ್ಮೆ ಗೆಲ್ಲಿಸಿದರೆ 100% ಕಮಿಷನ್ ಮಾಡುವುದು ಪಕ್ಕಾ ಎಂದರು.

ಜೆ.ಡಿ.ಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ಮಾತನಾಡಿ, ಶಾಸಕರು ತಾಲ್ಲೂಕಿನ ಯುವಕರ ವಿರುದ್ಧ  ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಅದೇ ಯುವಕರ ಸಹಾಯದಿಂದ ಬಂಗಾರಪೇಟೆ ತಾಲ್ಲೂಕಿನಲ್ಲಿ ಜೆ.ಡಿ.ಎಸ್ ಬಾವುಟ ಹಾರಿಸುತ್ತೇನೆಂದರು.

ಇನ್ನು ಮುಂದೆ ನಮ್ಮ ಯುವಕರ ಮೇಲೆ ಏನಾದರೂ ದೌರ್ಜನ್ಯ ಮಾಡುವುದು ಕಂಡುಬಂದರೆ ಯುವಶಕ್ತಿ ಏನೆಂದು ತೋರಿಸುತ್ತೇನೆ. ಪ್ರಜ್ಞಾವಂತ ಯುವಕರನ್ನು ಕೆಣಕಿದವರಿಗೆ ಉಳಿಗಾಲವಿಲ್ಲ ಎಂದರು.

ಹಿರಿಯರ ಮಾರ್ಗದರ್ಶನ ಮತ್ತು ಯುವಕರ ಶಕ್ತಿಯಿಂದ ಮುಂದಿನ ಚುನಾವಣೆ ಗೆಲ್ಲಲ್ಲಿದ್ದೇನೆ. ನಮ್ಮ ಪಕ್ಷಕ್ಕೆ ತಾಲ್ಲೂಕಿನ ಯುವಕರೆ ಶಕ್ತಿ, ಕೇವಲ ಒಂದು ಪೋನು ಕರೆ ಮಾಡಿ ಸಮಾವೇಶ ಇದೇ ಎಂದು ಹೇಳಿದಕ್ಕೆ 2000 ಸಾವಿರಕ್ಕೂ ಮಿಗಿಲಾದ ಯುವಕರು ಬೈಕುಗಳಲ್ಲಿ ಆಗಮಸಿದ್ದಾರೆ.

ಹೆಚ್ಚಿನ ಪ್ರಚಾರ ಮಾಡಿದ್ದರೆ ನಮ್ಮ ಕಾರ್ಯಕರ್ತರ ಸಂಖ್ಯೆ ನೀವೇ ಊಹೆ ಮಾಡಿಕೊಳ್ಳಿ. ಈ ಚುನಾವಣೆ ಪಕ್ಷದ ಅಥವಾ ನನ್ನ ಚುನಾವಣೆ ಅಲ್ಲ,.ಇದೊಂದು ಯುವಕರ, ರೈತರ, ಮಹಿಳೆಯರ ಚುನಾವಣೆ, ಎಂದರು.

ಈ ಸಂಧರ್ಭದಲ್ಲಿ ಜೆಡಿಎಸ್ ರಾಜ್ಯ ಘಟಕದ ಅದ್ಯಕ್ಷ ಸಿ.ಎಂ. ಇಬ್ರಾಹಿಂ, ಎಂ.ಎಲ್.ಸಿ ಇಂಚರ ಗೋವಿಂದರಾಜು, ಚೌಡರೆಡ್ಡಿ, ಮುಖಂಡರಾದ ಬನಕನಹಳ್ಳಿ ನಟರಾಜ್, ವಡಗೂರು ಹೆರೀಶ್, ತಾಲ್ಲೂಕು ಅದ್ಯಕ್ಷ ಮುನಿರಾಜು, ಮಾಜಿ ಅದ್ಯಕ್ಷ  ದೇವರಾಜ್, ಪುರಸಭಾ ಸದಸ್ಯರಾದ ಸುನೀಲ್ ಕುಮಾರ್, ವೆನ್ನಿಲ, ಜಿಪಂ ಮಾಜಿ ಅದ್ಯಕ್ಷೆ ಮಂಗಮ್ಮ ಮುನಿಸ್ವಾಮಿ, ಮುಖಂಡರಾದ ಎ.ಶ್ರೀನಿವಾಸ್, ಮಾಲೂರು ಜೆ.ಡಿ.ಎಸ್ ಅಭ್ಯರ್ಥಿ ರಾಮೇಗೌಡ, ಮುಳಬಾಗಿಲು ಅಭ್ಯರ್ಥಿ  ಸಮೃದ್ದಿ ಮಂಜುನಾಥ್, ಇರಗಸಂದ್ರ ವಿಶ್ವನಾಥ್, ಸಿರಾಜ್, ಅಸ್ಲಂ ಪಾಷ, ಚಾನ್ ಪಾಷ, ಅಹಮದ್, ಶಾಹಬಾಜ್, ವಸೀಮ್, ಗ್ರಾಪಂ ಮಾಜಿ ಅದ್ಯಕ್ಷ ಗುಟ್ಟಹಳ್ಳಿ ಮಂಜುನಾಥ್, ಮೊದಲಾದವರಿದ್ದರು.

Leave a Reply

Your email address will not be published. Required fields are marked *

You missed

error: Content is protected !!