ಬಂಗಾರಪೇಟೆ:ಪಟ್ಟಣದ ಸಿ.ರಹೀಂ ಕಾಂಪೌಂಡ್ ನಲ್ಲಿ ಜೆಡಿಎಸ್ ಮುಖಂಡ ಇಮ್ರಾನ್ ಪಾಷಾ ಎಂಬುವವರು ಶಾಸಕ ಎಸ್ ಎನ್ ನಾರಾಯಣಸ್ವಾಮಿರಿಗೆ ಕೊಲೆ ಬೆದರಿಕೆ ಹಾಕಿದ್ದು ಈ ಕೂಡಲೆ ಆತನನ್ನು ಮತ್ತು ಕುಮ್ಮಕ್ಕು ನೀಡಿದವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಶಾಸಕರ ಬೆಂಬಲಿಗರಿಂದ ಪೊಲೀಸ್ ಠಾಣೆ ಮುಂದೆ ನೆನ್ನೆ ರಾತ್ರಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ವೇಳೆ ಮಾತನಾಡಿದ ಶಾಸಕ ಎಸ್ ಎನ್ ನಾರಾಯಣಸ್ವಾಮಿ ಬೆಂಗಳೂರಿನ ಬಿಬಿಎಂಪಿ ಮಾಜಿ ಸದಸ್ಯ ಹಾಗೂ ಜೆಡಿಎಸ್ ಮುಖಂಡ ಇಮ್ರಾನ್ ಪಾಷಾರಿಂದ ಪಟ್ಟಣದ ಸಿ ರಹೀಂ ಕಾಂಪೌಂಡ್ ನಲ್ಲಿ ನನಗೆ ಕೊಲೆ ಬೆದರಿಕೆ ಹಾಕಿದ್ದು, ಬೆದರಿಕೆ ಹಾಕಿದವರನ್ನು ಮತ್ತು ಕುಮ್ಮಕ್ಕು ನೀಡಿದವರನ್ನು ಬಂಧಿಸಬೇಕೆಂದು ಒತ್ತಾಯ ಮಾಡಿದರು.
ಇಮ್ರಾನ್ ಪಾಷಾ ನೆನ್ನೆ ಬಂಗಾರಪೇಟೆ ಪಟ್ಟಣದಲ್ಲಿ ನಡೆದ ಜೆಡಿಎಸ್ ಕಾರ್ಯಕ್ರಮ ಮುಗಿಸಿಕೊಂಡು ಬಂದು ಸಿ ರಹೀಂ ಕಾಂಪೌಂಡ್ ನಲ್ಲಿ ಮಾತನಾಡುವ ವೇಳೆ ಶಾಸಕ ೆಸ್.ಎನ್.ನಾರಾಯಣಸ್ವಾಮಿ ಮನೆಗೆ ನುಗ್ಗಿ ಹೊಡೆಯುತ್ತೇವೆ ಎಂದು ಹೇಳುವ ಮೂಲಕ ಕೊಲೆ ಬೆದರಿಕೆ ಹಾಕಿದ್ದಾರೆಂದರು.
ಆ ಮೂಲಕ ಮನೆಗೆ ನುಗ್ಗಿ ನಿನ್ನ ಹೊಡೆದು ಸಾಯಿಸುತ್ತೇನೆಂದು ನನ್ನ ವಿರುದ್ಧ ಮಾತನಾಡಿದ್ದಾರೆ.ಇಮ್ರಾನ್ ಪಾಷಾಗೆ ಸ್ಥಳೀಯ ಪುರಸಭೆ ಸದಸ್ಯರು ಹಾಗೂ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ಅವರು ಹೇಳಿಕೊಟ್ಟು ನನ್ನ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿಸಿದ್ದಾರೆ ಎಂದು ಆರೋಪಿಸಿದರು.
ಕೂಡಲೇ ಇಮ್ರಾನ್ ಪಾಷಾ ಮತ್ತು ಕುಮ್ಮಕ್ಕು ನೀಡಿದವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರಗಿಸಿ ಅವರನ್ನು ಬಂಧಿಸಬೇಕು ಎಂದು ಒತ್ತಾಯ ಮಾಡಿ, ಈ ಚುನಾವಣೆ ಮುಗಿಯುವ ತನಕ ಇಮ್ರಾನ್ ಪಾಷಾ ರಾಜಕೀಯ ವಿಚಾರವಾಗಿ ಬಂಗಾರಪೇಟೆಗೆ ಬಾರದಂತೆ ನಿರ್ಬಂಧ ಹೇರಬೇಕೆಂದು ಆಗ್ರಹಿಸಿದರು.
ಆಜಂ ಷರೀಫ್ ದೂರು ನೀಡಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ಗುಲ್ಲಹಳ್ಳಿ ನಾಗರಾಜ್, ಡಿಸಿಸಿ ಬ್ಯಾಂಕ್ ನಿರ್ಧೇಶಕ ಪಿಚ್ಚಹಳ್ಳಿ ಗೋವಿಂದರಾಜು, ಪುರಸಭೆ ಮಾಜಿ ಅದ್ಯಕ್ಷರಾದ ಶಂಶುದ್ದೀನ್ ಬಾಬು, ಅಣ್ಣಾದೊರೈ, ಸದಸ್ಯರಾದ ಸಾಧಿಕ್ ಪಾಷಾ, ಎಸ್.ವೆಂಕಟೇಶ್, ಎಂ.ಜಿ.ಗೋವಿಂದ, ಮುಖಂಡರಾದ ಚಂದು, ಸುಹೈಲ್, ಮುಕ್ತಿಯಾರ್ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.