ಬಂಗಾರಪೇಟೆ:ವಹ್ನಿಕುಲ ಕ್ಷತ್ರಿಯರ ಸಮುದಾಯ ಭವನ ನಿರ್ಮಾಣಕ್ಕೆ ಶ್ರಿ ಧರ್ಮಸ್ಥಳ ಪೂಜ್ಯರಾದ ವೀರೇಂದ್ರ ಹೆಗ್ಗಡೆಯವರು 3 ಲಕ್ಷ ಅನುದಾನ ನೀಡಿದ್ದಾರೆ ಎಂದು ಶ್ರೀ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ನಿರ್ದೇಶಕರಾದ ಮುರಳಿದರ್ ಶೆಟ್ಟಿ ಹೇಳಿದರು.
ಅವರು ಪಟ್ಟಣದ ಶ್ರೀ ಧರ್ಮರಾಯ ದೇವಸ್ಥಾನದ ಆವರಣದಲ್ಲಿ ವಹ್ನಿಕುಲ ಕ್ಷತಿಯರ ಸಮುದಾಯ ಭವನಕ್ಕೆ 3 ಲಕ್ಷದ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ ಪ್ರತಿ ವಾರ ದೇವಸ್ಥಾನ ಸಮುದಾಯಗಳಿಗೆ 5 ರಿಂದ 10 ಲಕ್ಷ ಅನುದಾನಗಳು ಬರುತ್ತಿದೆ.
ಕೋಲಾರ ಜಿಲ್ಲೆಯಲ್ಲಿ 21,000 ಸಂಘಗಳನ್ನು ನಡೆಸುತ್ತಿದ್ದೇವೆ ಬಂಗಾರಪೇಟೆಯ ತಾಲೂಕಿನಲ್ಲಿ 2710ಸಂಘಗಳನ್ನು ನಡೆಸುತ್ತಿದ್ದೇವೆ. ಪೂಜ್ಯ ಗುರುಗಳ ಆಶೀರ್ವಾದದಿಂದ ಸಮುದಾಯ ಭವನಗಳಿಗೆ ದೇಣಿಗೆಯನ್ನು ನೀಡುತ್ತಿದ್ದಾರೆ.
ಈ ಸಮುದಾಯ ಭವನಕ್ಕೆ ಕೋಟಿ ರೂಪಾಯಿ ಖರ್ಚು ಮಾಡಿದರು ಸಹ ಪೂಜ್ಯ ಗುರುಗಳು ನೀಡುವುದು ಪ್ರಸಾದ. ಆ ಪ್ರಸಾದಕ್ಕೆ ಬಹಳ ಶಕ್ತಿ ಇದೆ. ಧರ್ಮಸ್ಥಳ ಮಂಜುನಾಥ ಸ್ವಾಮಿ ಧರ್ಮದೇವತೆಗಳ ಮೂಲದಿಂದ ಬಂದಂತಹ ಪ್ರಸಾದವಿದು.
ದೇಶದ ಭಕ್ತರು ಹೋಗಿ ಕಾಣಿಕೆಯನ್ನು ಹಾಕಿ ಒಟ್ಟಾಗಿ ಬಂದಂತಹ ಹಣವನ್ನೇ ನಿಮ್ಮ ಸಮುದಾಯ ಭವನಕ್ಕೆ ನೀಡುತ್ತಿದ್ದೇವೆ. ಶ್ರೀ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಘ ಕೇವಲ ಮಹಿಳೆಯರ ಸಂಘಕ್ಕೆ ಮಾತ್ರ ನೀಡುತ್ತದೆ ಎಂದು ಬಹಳ ಜನರ ಅಭಿಪ್ರಾಯವಾಗಿದೆ.
ಅದು ಮಾತ್ರವಲ್ಲದೆ ನಾವು ಸಮಾಜದ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳಿಗೆ ಅನುದಾನ ನೀಡುತ್ತೇವೆ ಕೋಲಾರ ಜಿಲ್ಲೆಯ ಹಾಲೂ ಉತ್ಪಾಧಕರ ಸಂಘ ಬಹಳ ಬಹಳಷ್ಟು ಸಹಾಯ ಪಡೆದಿದ್ದಾರೆ ಎಂದು ಹೇಳಿದರು.
ಜನಜಾಗೃತಿ ವೇಧಿಕೆಯ ನಾಗರಾಜ್ ಮಾತನಾಡಿ ಕರ್ನಾಟಕದಲ್ಲಿ ಎಷ್ಟೋ ಸಂಘ ಸಂಸ್ಥೆಗಳು ಇದ್ದರೂ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಘ ಮಾಡಿದಷ್ಟು ಉತ್ತಮ ಕೆಲಸಗಳನ್ನು ಬೇರೆ ಯಾವ ಸಂಘವು ಮಾಡಲಿಕ್ಕೆ ಸಾದ್ಯವಿಲ್ಲ ಎಂದು ಹೇಳಿದರು.
ಸಮಾಜದ ಮುಖಂಡ ಚಿನ್ನಿ ವೆಂಕಟೇಶ್ ಮಾತನಾಡಿ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಘ ಪ್ರತಿ ಸೋಮವಾರವು ಹಲವಾರು ಯೋಜನೆಗಳಿಗೆ ಮನವಿಯನ್ನು ಸ್ವೀಕರಿಸುತ್ತಾರೆ. ಧರ್ಮಸ್ಥಳ ಸಂಘ ಎಂದರೆ ಬರೀ ಮಹಿಳಾ ಸಂಘಗಳಿಗೆ ಮಾತ್ರವಲ್ಲ.
ದೇವಸ್ಥಾನಗಳಿಗೆ, ಸಮುದಾಯ ಭವನಗಳಿಗೆ, ಕೆರೆಗಳ ಅಭಿವೃದ್ಧಿಗಾಗಿ,ಪೂಜ್ಯರಾದ ವೀರೇಂದ್ರ ಹೆಗ್ಗಡೆಯವರು ಸಮಾಜ ನಿರ್ಮಾಣಕ್ಕೆ ಹತ್ತು ಹಲವಾರು ರೂಪದಲ್ಲಿ ಅನುದಾನ ನೀಡಿದ್ದಾರೆ ಎಂದರು.
ನಾನು ಹಲವಾರು ಸಂಘಟನೆಗಳಲ್ಲಿ ಕೆಲಸ ನಿರ್ವಹಿಸಿದ್ದೇನೆ ಆದರೆ ಧರ್ಮಸ್ಥಳದ ಜನಜಾಗೃತಿ ವೇದಿಕೆಯಲ್ಲಿ ಮಾಡಿರುವಂತ ಕೆಲಸ ಕಾರ್ಯಗಳು ನನಗೆ ಬಹಳ ತೃಪ್ತಿ ತಂದಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘ ಅಧ್ಯಕ್ಷ ಸಿ.ಆರ್.ಮೂರ್ತಿ, ಕುಲದ ಗೌಡ ಎ.ಜಯರಾಂ, ಕುಮರೇಶ್ ಕುಲದ ಯಜಮಾನರಾದ ತಿಮ್ಮರಾಯಪ್ಪ, ಮುರುಗೇಶ್, ಪೆರುಮಾಳಪ್ಪ, ಚಿನ್ನರಾಜ್, ನಾರಾಯಣಿ, ಆಟೋರಾಜ, ಸ್ವಾಮಿನಾಥನ್ ಸೂಪರ್ ವೈಸರಗಳಾದ ಲೋಕೇಶ್, ಜನಾರ್ಧನ್ ಕಾರಹಳ್ಳಿ ಗುಡಿಸಲು ಅಂಬರೀಶ್, ಗೋಪಾಲ್ ಹಾಜರಿದ್ದರು.