ಶ್ರೀನಿವಾಸಪುರ:ದುಷ್ಕರ್ಮಿಗಳ ಅಟ್ಟಹಾಸಕ್ಕೆ ಲಕ್ಷಾಂತರ ರೂಪಾಯಿ ಬೆಳೆ ಬಾಳುವ ರೈತನ ಕೃಷಿ ಉಪಕರಣಗಳು ಬೆಂಕಿಯ ಕೆನ್ನಾಲಿಗೆಗೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗೌಡತಾತನಗಡ್ಡ ಗ್ರಾಮದಲ್ಲಿ ನಡೆದಿದೆ.
ಗೌಡ ತಾತನ ಗಡ್ಡ ಗ್ರಾಮದ ರೈತ ಹಾಗೂ ಹಾಲಿನ ಡೈರಿ ಅಧ್ಯಕ್ಷರಾಗಿರುವ ವೆಂಕಟಕೃಷ್ಣಪ್ಪ ಎಂಬವರಿಗೆ ಸೇರಿದ ತೋಟದಲ್ಲಿ 15ಸಾವಿರ ಟೊಮೊಟೊ ಕಟ್ಟಿಗೆ ಹಾಗೂ ಟೊಮೊಟೊ ಗಿಡಗಳಿಗೆ 3 ಎಕರೆಗೆ ಅಳವಡಿಸುವ ಹನಿ ನೀರಾವರಿ ಪೈಪ್ ಗಳು ಹಾಗೂ ಮೋಟಾರ್ ಪೈಪ್ ಸಹ ಸುಟ್ಟುಹೋಗಿದೆ.
ದುಷ್ಕರ್ಮಿಗಳ ಕೃತ್ಯದಿಂದಲೇ ಈ ರೀತಿಯಾದ ಘಟನೆ ನಡೆದಿದದೆ ಎನ್ನಲಾಗಿದ್ದು, ಪ್ರತಿ ದಿನ ರೈತ ವೆಂಕಟಕೃಷ್ಣಪ್ಪ ತಮ್ಮ ತೋಟದ ಬಳಿಯೇ ಮಲಗುತ್ತಿದ್ದರಂತೆ ಕಳೆದ ರಾತ್ರಿ ವಯಕ್ತಿಕ ಕೆಲಸಗಳಿಂದ ರಾತ್ರಿ ಮನೆಯಲ್ಲಿಯೇ ಮಲಗಿದ್ದಾರೆ.
ಎಂದಿನಂತೆ ರೈತ ಮುಂಜಾನೆ ತೋಟದ ಬಳಿ ಹೊದ ಸಮಯದಲ್ಲಿ ಘಟನೆ ಬೆಳಕಿಗೆ ಬಂದಿದ್ದು ರೈತ ನೋಡುವಷ್ಟರಲ್ಲಿ ಸಂಪೂರ್ಣ ಭೂದಿಯಾಗಿ ಸುಮಾರು 5 ಲಕ್ಷ ಬೆಲೆ ಬಾಳುವ ಕೃಷಿ ಉಪಕರಣಗಳು ಸಂಪೂರ್ಣವಾಗಿ ಭೂದಿಯಾಗಿವೆ.
ಸಂಬಂಧಪಟ್ಟ ಕೃಷಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರವನ್ನು ನೀಡಬೇಕೆಂದು ರೈತ ವೆಂಕಟಕೃಷ್ಣಪ್ಪ ಮನವಿ ಮಾಡಿದ್ದಾರೆ.
ಘಟನೆ ಕುರಿತು ರಾಯಲ್ಪಾಡು ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು ಘಟನಾಸ್ಥಳಕ್ಕೆ ಭೇಟಿ ನೀಡಿರುವ ರಾಯಲ್ಪಾಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.