ಕೆಜಿಎಫ್:ನಗರದ ಇ.ಟಿ.ಬ್ಲಾಕ್‍ನಲ್ಲಿ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಇಬ್ಬರು ಆಸಾಮಿಗಳನ್ನು ಬಂಧಿಸುವಲ್ಲಿ ರಾಬರ್ಟ್‍ಸನ್‍ಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಂಡರ್‍ಸನ್‍ಪೇಟೆಯ ಹರಿಶ್ಚಂದ್ರ ಸ್ಟ್ರೀಟ್‍ನ ಅಸ್ಲಂ(40) ಮತ್ತು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ ವೀರನಮಲ್ಲ ರಾಮಕುಪ್ಪಂ ಮಂಡಲ್, ಪೋರ್ಟ್‍ಕೊಲ್ಲಿ ಗ್ರಾಮದ ನಾಗರಾಜ್(40) ಎಂಬುವವರು ಬಂಧಿತ ಆರೋಪಿಗಳಾಗಿದ್ದು, ಇವರಿಂದ 2.45 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಧರಣಿದೇವಿ ಮಾಲಗತ್ತಿ ರವರ ನಿರ್ದೇಶನದಲ್ಲಿ ಉಪಾಧೀಕ್ಷಕ ವಿ.ಎಲ್.ರಮೇಶ್ರ ಮಾರ್ಗದರ್ಶನದಲ್ಲಿ ರಾಬರ್ಟ್‍ಸನ್‍ಪೇಟೆ ವೃತ್ತ ನಿರೀಕ್ಷಕ ಟಿ.ಆರ್.ಕುಮಾರಸ್ವಾಮಿ ನೇತೃತ್ವದಲ್ಲಿ ಪಿಎಸ್‍ಐ ಭಾರತಿ, ಸಿಬ್ಬಂದಿ ಗೋಪಿನಾಥ್, ಮುರಳಿ, ರಘು, ಬಸವರಾಜಕಾಂಬ್ಳೆ, ವಿನೋದ್‍ಕುಮಾರ್ ಮತ್ತು ಸತ್ಯಪ್ರಕಾಶ್‍ರನ್ನೊಳಗೊಂಡಂತೆ ತಂಡವನ್ನು ರಚಿಸಿದ್ದು, ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ರಾಬರ್ಟ್‍ಸನ್‍ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಧರಣಿದೇವಿ ಪೊಲೀಸರ ಕಾರ್ಯವನ್ನು ಶ್ಲಾಘಿಸಿದ್ದಾರೆ.