• Mon. May 6th, 2024

PLACE YOUR AD HERE AT LOWEST PRICE

ಕೆಜಿಎಫ್: ರಾಜ್ಯದ ಗಡಿಭಾಗದ ಕೆಜಿಎಫ್ ತಾಲ್ಲೂಕಿನ ಎನ್.ಜಿ.ಹುಲ್ಕೂರು ಬಳಿ 25 ಎಕರೆ ಪ್ರದೇಶದಲ್ಲಿ ಎಪಿಎಂಸಿ ಮಾರುಕಟ್ಟೆ ನಿರ್ಮಿಸಲು ಸರ್ಕಾರವು ಅಧಿಕೃತವಾಗಿ ತಾಲೂಕಿಗೆ ಪ್ರತ್ಯೇಕವಾಗಿ ನಿರ್ಧಿಷ್ಟ ಪಡಿಸಿದೆ ಎಂದು ಶಾಸಕಿ ಎಂ.ರೂಪಕಲಾ ಹೇಳಿದರು.

ಎನ್.ಜಿ ಹುಲ್ಕೂರು, ಕದರಿಗಾನಕುಪ್ಪ ಗ್ರಾಮದ ಸರ್ವೇ ನಂಬರ್‍ಗಳಲ್ಲಿ ಎಪಿಎಂಸಿ ಮಾರುಕಟ್ಟೆ ಸ್ಥಾಪಿಸಲು ಗುರುತಿಸಿರುವ 25 ಎಕರೆ ಪ್ರದೇಶದಲ್ಲಿ ಅವರು ಪತ್ರಿಕಾಗೋಷ್ಠಿ ಹಮ್ಮಿಕೊಂಡು  ಮಾತನಾಡಿ, ಎಪಿಎಂಸಿ ಮಾರುಕಟ್ಟೆ ಸ್ಥಾಪನೆ ಮಾಡಲು ಸರ್ಕಾರವು ಮುಂಗಡವಾಗಿ 72 ಲಕ್ಷ ರೂ., ಮೊತ್ತವನ್ನು ಸಹ ಪಾವತಿ ಮಾಡಲು ಆದೇಶಿಸಿದ್ದರು ಅದರಂತೆ ಪಾವತಿ ಮಾಡಿದ್ದೇವೆಂದು ಅವರು ಹೇಳಿದರು.

ಬಂಗಾರಪೇಟೆ ಎಪಿಎಂಸಿಯಿಂದ ಕೆಜಿಎಫ್ ತಾಲೂಕು ಬೇರ್ಪಡಿಸಲು ತಾವು ಅನೇಕ ಬಾರಿ ಸಂಬಂಧಿಸಿದ ತಾಲೂಕು ಹಾಗೂ ರಾಜ್ಯ ಕಛೇರಿಯ ಇಲಾಖೆಯ ಅಧಿಕಾರಿಗಳ  ಅನುಕೂಲತೆ ಇರುವ ಬಗ್ಗೆ ದೃಡೀಕರಣ ಕೊಟ್ಟಿಲ್ಲ, ತಾವು ನೂರಾರು ಬಾರಿ ಕಛೇರಿಗಳಿಗೆ ಅಲೆದು ಮಂಜೂರು ಮಾಡಿಸಿದ್ದೇನೆಂದು ಅಧಿಕಾರಿಗಳ ಬೇಜಾವ್ದಾರಿಯ ಬಗ್ಗೆ ಅಸಮಾದಾನ ವ್ಯಕ್ತಪಡಿಸಿದರು.

ರೈತರು ಬೆಳೆದಂತ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುತ್ತಿಲ್ಲ, ಬೆಳದಂತ ತರಕಾರಿ, ಹಣ್ಣು, ಹಂಪಲುಗಳನ್ನು ಶೇಖರಣೆ ಮಾಡಿಕೊಳ್ಳಲು ಸೂಕ್ತ ಕೋಲ್ಡ್ ಸ್ಟೋರೇಜ್ ಇಲ್ಲದೆ ದಳ್ಳಾಲಿಗಳು ಕೇಳುವ ಮೊತ್ತಕ್ಕೆ ಬೆಳೆಯನ್ನು ನೀಡಿ ರೈತ ನಷ್ಟ ಅನುಭವಿಸಿ ಸಾಲದ ಸುಳಿಗೆ ಬೀಳುವ ಪರಿಸ್ಥಿತಿಯಿಂದ ಹೊರ ಬರಲು ಶ್ರಮಿಸುತ್ತಿದ್ದೇನೆಂದರು.

ಎಪಿಎಂಸಿ ಮಾರುಕಟ್ಟೆಗೆ ಜಾಗ ಮೀಸಲಿಟ್ಟಿರುವ ಪ್ರದೇಶವು 1 ಎಕರೆಗೆ 1 ಕೋಟಿ ರೂ., ಬೆಲೆ ಇದೆ.ಜತೆಗೆ ಆಂಧ್ರ ಪ್ರದೇಶದ ಗಡಿಯಲ್ಲಿ ಮಾರುಕಟ್ಟೆ ಸ್ಥಾಪನೆಯಿಂದ ರೈತರ ಬೆಳೆಗಳಿಗೆ ಧ್ವಿಗುಣ ಬೆಲೆ ಸಿಗುತ್ತದೆ. ಇದೇ ಭಾಗದಲ್ಲಿ ಚೆನೈ ಕಾರಿಡಾರ್ ರಸ್ತೆ ಕಾಮಗಾರಿ ಪೂರ್ಣಗೊಳ್ಳುತ್ತಿದ್ದು, ಮತ್ತಷ್ಟು ಅನುಕೂಲವಾಗಲಿದೆ ಎಂದರು.

ತಾಲೂಕಿನಲ್ಲಿ ಬೆಳೆದಂತ ಬೆಳೆಗಳು ನೆರೆಯ ರಾಜ್ಯ,  ದೇಶಗಳಿಗೆ ಸರಕು ಸಾಗಣೆಯಾಗಬೇಕೆಂಬ ಉದ್ದೇಶವನ್ನು ಹೊಂದಿದ್ದೇನೆ. ಈ ಭಾಗದಲ್ಲಿ ಶೀಘ್ರದಲ್ಲೆ 10 ಲೈನ್ ರಸ್ತೆ ಕಾಮಗಾರಿಯು ಸಹ ಕೈಗೊಳ್ಳುವ ಬಗ್ಗೆ ಆಂಧ್ರ ಸರ್ಕಾರ ಪ್ರಕಟಣೆ ನೀಡಿದ್ದು, ಈ ಮಾರುಕಟ್ಟೆ ದೇಶಕ್ಕೆ ಮಾದರಿಯಾಗುತ್ತದೆ ಎಂದರು.

ಅನೇಕ ಕಡೆ ಎಪಿಎಂಸಿ ಮಾರುಕಟ್ಟೆಗೆ ಕೇವಲ 10 ಎಕರೆ ಪ್ರದೇಶವಷ್ಟೆ ಜಾಗ ಮೀಸಲಿಟ್ಟಿದ್ದಾರೆ ಆದರೆ ನಮ್ಮ ಜಿಲ್ಲೆಯಲ್ಲೇ ಇಷ್ಟೊಂದು ದೊಡ್ಡ ಮಾರುಕಟ್ಟೆ ಸ್ಥಾಪನೆಗೆ ಮುಂದಾಗಿಲ್ಲ, ರೈತ ದೇಶದ ಬೆನ್ನುಲುಬಾಗಿದ್ದು, ರೈತನ ಸಂಕಷ್ಟಕ್ಕೆ ಸ್ಪಂದಿಸಲು ತಾವು ಇಂತಹ ಮಹತ್ವಾಕಾಂಕ್ಷಿ ಯೋಜನೆಗಾಗಿ ಶ್ರಮಿಸಿದ್ದೇನೆಂದು ಹೇಳಿದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಅ.ಮು.ಲಕ್ಷ್ಮೀನಾರಾಯಣ್, ಎಪಿಎಂಸಿ ಅಧ್ಯಕ್ಷ  ವಿಜಯರಾಘುವ ರೆಡ್ಡಿ, ಟಿಎಪಿಎಂಎಸ್ ನಿರ್ದೇಶಕ  ನಲ್ಲೂರು ಶಂಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಕೃಷ್ಣರೆಡ್ಡಿ, ಕೆಪಿಸಿಸಿ ಸದಸ್ಯ ದುರ್ಗಾಪ್ರಸಾದ್, ತಾಪಂ  ಸದಸ್ಯ ಜಯರಾಮ್ ರೆಡ್ಡಿ, ಎನ್‍ಟಿಆರ್, ಎಪಿಎಂಸಿ ನಿರ್ದೇಶಕ ರಾಮಚಂದ್ರ, ಗ್ರಾಪಂ ಅಧ್ಯಕ್ಷರಾದ ಚಂದ್ರಪ್ಪ, ಪವಿತ್ರ ಗೋಪಾಲ್, ಮುಖಂಡರಾದ ರಾಮಕೃಷ್ಣರೆಡ್ಡಿ ಪದ್ಮನಾಭ ರೆಡ್ಡಿ, ಅನಂದ್ ಮೂರ್ತಿ, ತಂಬಾರ್ಲಹಳ್ಳಿ ರಾಜಪ್ಪ, ಸುವರ್ಣಹಳ್ಳಿ ಕೃಷ್ಣಮೂರ್ತಿ, ರಾಯಸಂದ್ರ ಮುನಿಸ್ವಾಮಿರೆಡ್ಡಿ, ಚಂದ್ರಕಾಂತ್, ಲಕ್ಷ್ಮೀಪತಿ, ನಾರಾಯಣಸ್ವಾಮಿ, ಸುಬ್ಬರೆಡ್ಡಿ, ಬೆನ್ನವಾರ ವೆಂಕಟೇಶ್, ಎಂಬಿಎ ಕೃಷ್ಣಪ್ಪ, ಶ್ರೀರಾಮ್, ವೆಂಕಟರಾಮ್, ಪ್ರಕಾಶ್, ಒಬಿಸಿ ಮುನಿಸ್ವಾಮಿ, ಚಿನ್ನು ಮೊದಲಾದವರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!